ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ನಟಿ ರಂಜನಿ ರಾಘವನ್‌ ಅವರ ಹೊಸ ಅಂಕಣ ‘ಕಥೆಗಳ ಸಂಭ್ರಮ’ ಆರಂಭ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

‘ಅವಧಿ’ಯಲ್ಲಿ ಇಂದಿನಿಂದ ಪ್ರತೀ ವಾರ ಒಂದು ಕಥೆಯನ್ನು ರಂಜನಿ ರಾಘವನ್ ಬರೆಯಲಿದ್ದಾರೆ.

ಆಪ್ ಉಚಿತ ಸಂಗಾತಿ ಖಚಿತ

೨೬ ವಯಸ್ಸಿನ ಅಡ್ವೊಕೇಟ್ ಸಂಧ್ಯಾ ಬಸವರಾಜ್ ತನ್ನ ಆಫೀಸ್ ನ ಟೇಬಲ್ ಮೇಲಿನ ಹೂಜಿಯಲ್ಲಿದ್ದ ಬಾಡಿದ ಹೂವನ್ನ ತೆಗೆದು ಫ್ರೆಶ್ ಹೂವುಗಳನ್ನ ಜೋಡಿಸುತ್ತಾಳೆ. ಟೈಮ್ ಹತ್ತೂವರೆ ಎ ಎಂ ಅಂತ ತೋರಿಸುತ್ತಿದೆ.

ಮಲ್ಲೇಶ್ವರಮ್ ಲಿಂಕ್ ರೋಡ್ ನಲ್ಲಿರೋ ಅವಳ ಪುಟ್ಟ ಆಫೀಸ್ ನಲ್ಲಿ ಬೇರೆ ಯಾರೂ ಇಲ್ಲ. ಟೇಬಲ್ ಮೇಲಿರೋ ಬಿಲ್ ಗಳನ್ನು ನೋಡಿ ನಿಟ್ಟುಸಿರು ಬಿಡ್ತಾಳೆ. ಲಾ ಓದಿದ ನಂತರ ಅಸಿಸ್ಟೆಂಟ್ ಲಾಯರ್ ಆಗಿ ಎರಡು ವರ್ಷ ಕೆಲ್ಸ ಮಾಡಿ ತನ್ನದೇ ಲಾ ಫರ್ಮ್ ಇಟ್ಟುಕೊಂಡು ಸಣ್ಣ ಪುಟ್ಟ ಕೇಸ್ ಗಳನ್ನ ಗೆದ್ದಿದ್ದಾಳೆ. ಸತ್ಯವಾದಿ ಆಗಿರೋ ಸಂಧ್ಯಾ, ಲಾಯರ್ ಪ್ರೊಫೆಶನ್ ನ ನಾನು ಹೇಗೆ ತಗೊಂಡೆ ಅಂತ ಒಂದೊಂದು ಸಲ ಅನುಮಾನ ಪಟ್ರೂ, ನ್ಯಾಯ ಕೊಡಿಸೋ ಕೆಲ್ಸಕ್ಕೆ ನ್ಯಾಯಯುತವಾಗಿ ಯೋಚ್ನೆ ಮಾಡೋದೇ ಸರಿ. ಅದನ್ನೇಕೆ ಪ್ರಶ್ನೆ ಮಾಡಿಕೊಳ್ತಿದ್ದೀನಿ ಅಂತ ತನ್ನ ಬಗ್ಗೆ ತಾನೇ ನಕ್ಕಿದ್ದುಂಟು.

ಮೊಬೈಲ್ ಫೋನ್ ರಿಂಗ್ ಆಗುತ್ತೆ. ರಿಸೀವ್ ಮಾಡಿದಾಗ ಬಂದ ಧ್ವನಿ- ಮೇಡಮ್. ನಾವು ಕೇಸ್ ವಾಪಸ್ ತೊಗೋತೀವಿ. ನಮ್ ಮಾವನೇ ಮುಂದೆ ನಿಂತು ಕಾಂಪ್ರಮೈಸ್ ಮಾಡಿದ್ರು, ನೋ ಪ್ರಾಬ್ಲೆಮ್ ಅಂತಾನೆ. ಸಂಧ್ಯಾ ಒಳ್ಳೇದಾಯ್ತು ಬಿಡಿ ಅಂತ ಹೇಳಿ ಫೋನ್ ಇಡ್ತಾಳೆ. ಬ್ಲಾಕ್ ಕಾಫಿ ಮಾಡಿಕೊಂಡು ಕುಡಿಯುತ್ತಾ , ಇದ್ದ ಒಂದ್ ಕೇಸನ್ನೂ ಕ್ಲೈಂಟ್ ವಾಪಸ್ ತಗೊಂಡಾಯ್ತು, ಮುಂದೆ ಏನು ಅಂತ ಯೋಚಿಸುತ್ತಾ ಕೂರುತ್ತಾಳೆ.

ಮಧ್ಯಾಹ್ನದ ಸುಮಾರಿಗೆ ಸಂಧ್ಯಾಳ ಆಫೀಸ್ ಬಾಗಿಲು ತಟ್ಟಿದ ಯುವಕ, ನನ್ನ ಹೆಸ್ರು ಕಾರ್ತಿಕ್ ಒಂದು ಕೇಸ್ ವಿಚಾರವಾಗಿ ನಿಮ್ಮ ಹತ್ರ ಬಂದಿದ್ದೇನೆ ಅಂತಾನೆ. ಸಂಧ್ಯಾ ಖುಷಿಯಿಂದ ಏನಾಯ್ತು ಅಂತ ವಿಚಾರಿಸಿದಾಗ ಅವಳಿಗೆ ಅವನ ಮಾತು ವಿಚಿತ್ರ ಅನ್ನಿಸುತ್ತೆ. ಕಾರ್ತಿಕ್  ‘ಬೆಟರ್ ಹಾಫ್’ ಅನ್ನೋ ಒಂದು ಡೇಟಿಂಗ್ ಆಪ್ ನ ವಿರುದ್ಧವಾಗಿ ಕೇಸ್ ಹಾಕಲು ನಿರ್ಧರಿಸಿರುತ್ತಾನೆ. ‘ಆಪ್ ಉಚಿತ, ಸಂಗಾತಿ ಖಚಿತ’ ಅನ್ನೋ ಟ್ಯಾಗ್ ಲೈನ್ ಇರೋ ಆಪ್, ಅದನ್ನು ಬಳಸುವವರು ಒಂದು ವರ್ಷದ ಒಳಗೆ ಸಂಗಾತಿಯನ್ನು ಹುಡುಕಿಕೊಳ್ತಾರೆ ಅನ್ನೋ ಗ್ಯಾರಂಟಿ ಕೊಟ್ಟಿರುತ್ತದೆ.

ಕಾರ್ತಿಕ್ ಆಪ್ ಅನ್ನು ೧೧ ತಿಂಗಳು ೧೭ ದಿನಗಳು ಉಪಯೋಗಿಸಿದ್ದು, ೫೦೦ ಕ್ಕೂ ಹೆಚ್ಚು ಪ್ರೊಫೈಲ್ ಗನ್ನು ಹುಡುಕಿದ್ದೇನೆ, ೫೦ ಕ್ಕೂ ಹೆಚ್ಚು ಹುಡುಗಿಯರನ್ನ ಭೇಟಿಯಾಗಿದ್ದೇನೆ ಆದ್ರೆ ಯಾರೂ ನಂಗೆ ನನ್ನವಳು ಅನ್ನಿಸ್ಲಿಲ್ಲ ನನ್ನ ಸಂಗಾತಿ ಸಿಗ್ಲಿಲ್ಲ. ಈ ಆಪ್ ನಿಂದಾಗಿ ನನ್ನ ಸಮಯ ವ್ಯರ್ಥವಾಗಿದೆ, ಮೀಟಿಂಗ್ ಗಾಗಿ ಓಡಾಡಿದ್ದಕ್ಕೆ ಹೋಟೆಲ್ ಬಿಲ್ ಗಳು, ಕಾರ್ ಪೆಟ್ರೋಲ್, ಸಾಲದು ಅಂತ ಒಳ್ಳೇ ಪ್ರೊಫೈಲ್ ಗಳು ಸಿಗ್ಬೇಕು ಅಂದ್ರೆ ಪ್ರಿಮಿಯಮ್ ಸಬ್ಸ್ಕ್ರಿಪ್ಶನ್ ಎಲ್ಲಾ ಸೇರಿ ೫೦ ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿದೆ ಇದಕ್ಕಾಗಿ ನಾನು ಆಪ್ ವಿರುದ್ಧ ಕೇಸ್ ಹಾಕಿ ಕಾಂಪನ್ಸೇಶನ್ ಪಡೀಬೇಕು ಅಂತಿದ್ದೀನಿ. ನನ್ನ ಸ್ನೇಹಿತ ಒಬ್ಬ- ನಿಮ್ಮನ್ನ ಸೆನ್ಸಿಬಲ್ ಲಾಯರ್ ಅಂತ ಸಜೆಸ್ಟ್ ಮಾಡ್ದ ಅದಕ್ಕಾಗಿ ನಿಮ್ ಹತ್ರ ಬಂದಿದ್ದೀನಿ ಅಂತಾನೆ.

ಮದ್ವೆ ವಯಸ್ಸಿನವಳಾದ್ರೂ ತನ್ನ ಕೆಲ್ಸವನ್ನೇ ಸಂಗಾತಿ ಮಾಡಿಕೊಂಡಿರೋ ಸಂಧ್ಯಾಗೆ ಈ ವ್ಯಕ್ತಿಯ ಮಾತುಗಳು ಅವನ ಗೋಳು ಎಲ್ಲಾ ಅಯೋಮಯವಾಗಿ ಕಾಣಿಸಿ ಇವನ ಸಹವಾಸ ಬೇಡಾ ಅನ್ಸಿದ್ರೂ ಇವನಿಗೆ ಕಾಂಪನ್ಸೇಶನ್ ಕೊಡಿಸೋದ್ರಿಂದ ತನ್ನ ಬಿಲ್ ಗಳನ್ನ ಪೂರೈಸ್ಬೋದು ಅಂತ ಲೆಕ್ಕ ಹಾಕಿ ಯೋಚ್ನೆ ಮಾಡ್ತೀನಿ ಅಂದು ಕೇಸ್ ಬಗ್ಗೆಯ ಎಲ್ಲಾ ಡೀಟೈಲ್ಸ್ ಪಡೀತಾಳೆ. ಅವನ ಪ್ರತಿಯೊಂದು ಹೇಳಿಕೆಯೂ ಅವಳಿಗೆ ಇಂಥಾ ಜನರೂ ಇರ್ತಾರಾ ಅಂತ ಅನ್ನಿಸುತ್ತೆ.

ತೊಟ್ಟಿಲಲ್ಲಿ ಅಳ್ತಿರೋ ಎರಡು ತಿಂಗಳ ಮಗುವನ್ನ ಸಂಧ್ಯಾಳ ಭಾವ ರಮೇಶ್ ಎತ್ತಿ ಆಡಿಸುತ್ತಾ ಸಂಧ್ಯಾಗೆ ನೀನು ಇನ್ನೆರಡು ತಿಂಗಳು ನಿಮ್ಮಕ್ಕನ್ನ ಬಿಟ್ಟು ಹೋಗ್ಬೇಡಾ ನೀನಿಲ್ದೇ ಕೈ ಕಾಲ್ ಆಡಲ್ಲ ಇವ್ಳಿಗೆ ಅಂತಾನೆ. ಸಂಧ್ಯಾ ಅಕ್ಕನನ್ನ ಪ್ರೀತಿಯಿಂದ ನೋಡ್ತಾ ನಾನ್ ಆಫೀಸ್ ಗೆ ಹೋಗಿ ಮಾಡೋ ಕೆಲ್ಸ ಅಷ್ಟ್ರಲ್ಲೇ ಇದೆ.. ಇಲ್ಲೇ ಇದ್ರೆ ಸಹನಾಗಾದ್ರೂ ಹೆಲ್ಪ್ ಆಗುತ್ತೆ ಅಂತಾಳೆ. ಸಹನಾ ಮಗೂಗೆ ತಂದಿರೋ ಹೊಸಾ ಸ್ವೆಟರ್ ತೋರಿಸಿದಾಗ ಸಂಧ್ಯಾ ಅದನ್ನ ನೋಡಿ ಅನ್ಯಮನಸ್ಕಳಾಗಿ ಚೆನ್ನಾಗಿದೆ ಕಣೇ ಅಂತಾಳೆ. 

ಸಹನಾ ತಂಗಿ ಬೇಜಾರಲ್ಲಿರೋದನ್ನ ನೋಡಿ ಏನಮ್ಮ ಪ್ರಾಬ್ಲೆಮ್ಮು ಅಂತ ಕೇಳ್ದಾಗ ಸಂಧ್ಯಾ ಕಾರ್ತೀಕ್ ನ ಕೇಸ್ ಬಗ್ಗೆ ಹೇಳ್ತಾಳೆ. ಸಹನಾ ನಗ್ತಾ.. ಬ್ರಹ್ಮಚಾರಿಣಿ ಲವ್ ಕೇಸ್ ಹ್ಯಾಂಡಲ್ ಮಾಡೋ ಪರಿಸ್ಥಿತಿ ಬಂದಿದ್ಯಾ ಅಂತ ತಮಾಷೆ ಮಾಡ್ತಾಳೆ. ಸಂಧ್ಯಾ ಈ ಕೇಸ್ನ ಗಂಭೀರವಾಗಿ ಪರಿಗಣಿಸ್ತಿದ್ದಾಳೆ ಅಂತ ಗೊತ್ತಾದ್ಮೇಲೆ ಸಹನಾ – ‘ನೀನು ಈ ಕೇಸ್ ಬಗ್ಗೆ ಸರಿಯಾದ ಜಡ್ಮೆಂಟ್ ಗೆ ಬರ್ಬೇಕು ಅಂದ್ರೆ ನೀನು ಆ ಆಪ್ ಗೆ ಸಬ್ಸ್ಕೆಬ್ ಆಗು’ ಅಂತ ಸಜೆಸ್ಟ್ ಮಾಡ್ತಾಳೆ. ಸಂಧ್ಯಾಗೆ ಅಕ್ಕನ ಮಾತು ಸರಿ ಅನ್ನಿಸುತ್ತೆ.

ಸಂಧ್ಯಾ ಆಪ್ ಗೆ ಸಬ್ಸ್ಕ್ರೈಬ್ ಆಗಿ ನೋಡಿದಾಗ ಅಲ್ಲಿನ ಪ್ರೊಫೈಲ್ ಗಳಲ್ಲಿದ್ದ ಆಪ್ಶನ್ ಗಳು ಇವಳನ್ನು ತಬ್ಬಿಬ್ಬು ಮಾಡುತ್ತೆ. ಇಂಜಿನೀರ್ ಗಳು, ಡಾಕ್ಟರ್ ಗಳು, ತಿಂಗಳಿಗೆ ೧ ಲಕ್ಷಕ್ಕೂ ಮೇಲ್ಪಟ್ಟ ಸಂಬಳ ತರೋರು, ಅದಕ್ಕಿಂತಲೂ ಜಾಸ್ತಿ ಇರೋರು, ಫ್ಯಾಮಿಲಿ ಜೊತೇಗಿರೋರು, ಫ್ಯಾಮಿಲಿ ಹೊರತಾಗಿರೋರು. ಹೀಗೆ ಹಲವಾರು ಆಪ್ಶನ್ ಆಯ್ಕೆ ಮಾಡಿ ಫಿಲ್ಟರ್ ಮಾಡಿ ಪ್ರೊಫೈಲ್ ನ ನೋಡ್ಬೇಕು. ಆನ್ ಲೈನ್ ಶಾಪಿಂಗ್ ಗೆ ಬಳಸೋ ಫಿಲ್ಟರ್ ನಂತೆ ಸಂಗಾತಿಯನ್ನ ಹೇಗೆ ಹುಡುಕೋದು ಅಂತ ಒಂದು ಕ್ಷಣ ಲ್ಯಾಪ್ಟಾಪ್ ಸ್ಕ್ರೀನ್ ನನ್ನೇ ನೋಡ್ತಾ ಕೂರ್ತಾಳೆ.

ಸಹನಾಗೆ ತಂಗಿ ಮದ್ವೇಗೆ ಮನಸ್ಸು ಮಾಡ್ತಿಲ್ಲ. ಯಾವಾಗ್ಲೂ ಕೆಲ್ಸದ ಬಗ್ಗೆ ಯೋಚ್ನೆ. ಮ್ಯಾಟ್ರಿಮೋನಿ ಸೈಟ್ ಗಂತೂ ರಿಜಿಸ್ಟರ್ ಆಗೋಕೆ ಬಿಲ್ ಕುಲ್ ಒಪ್ಪಲ್ಲ. ಈ ಕೇಸ್ ನಿಂದಾದಾದ್ರೂ ಇವ್ಳು ಆಪ್ ಗೆ ಸಬ್ಸ್ಕ್ರೈಬ್ ಆಗಿ ಯಾರನ್ನಾದ್ರೂ ಹುಡುಕ್ಕೋಬೋದು ಅನ್ನೋ ಯೋಚ್ನೆ ಸಮಾಧಾನ ಕೊಡುತ್ತೆ.

ಸಂಧ್ಯಾ ಕೇಸ್ ಬಗ್ಗೆ ಸ್ಟಡಿ ಮಾಡುವಾಗ ಮೊದಲು ಕಾರ್ತಿಕ್ ಹಿನ್ನಲೆ ಬಗ್ಗೆ ತಿಳ್ಕೊಳ್ಬೇಕು ಅನ್ನಿಸುತ್ತೆ. ಆತನ ಸೋಶಿಯಲ್ ಮೀಡಿಯಾ ಪ್ರೊಫೈಲ್ ಗಳ್ನ ಹುಡುಕಿ ನೋಡಿದಾಗ ಆತನಿಗೆ ಸೈಕ್ಲಿಂಗ್ ಬಗ್ಗೆ, ಪ್ರಾಣಿಗಳ ಬಗ್ಗೆ ಒಲವು ಜಾಸ್ತಿ ಅಂತ ಗೊತ್ತಾಗುತ್ತೆ. ಅಲ್ಲಿ ಯಾವ ಹುಡುಗಿಯ ಜೊತೆಯೂ ಫೋಟೋ ಇಲ್ಲದೇ ಇರೋದನ್ನ ಕಂಡು ಈತ ಒಂಥರಾ ರಿಸರ್ವ್ಡ್ ಅನ್ನಿಸುತ್ತೆ ಹಾಗಾಗಿ ಇಲ್ಲೀ ತನಕೆ ಯಾರೂ ಸಂಗಾತಿ ಸಿಕ್ಕಿಲ್ಲ. ಆಪ್ ಮೇಲೆ ಕೇಸ್ ಹಾಕಿದ್ದಾನೆ ಅಂದುಕೊಳ್ತಾಳೆ. ಕಾರ್ತಿಕ್ ಮತ್ತು ಅವಳಿಗೆ ಒಬ್ಬ ಮ್ಯೂಚ್ಯಲ್ ಫ್ರೆಂಡ್ ಇರೋದನ್ನ ಕಂಡು ಯಾರು ಅಂತ ನೋಡಿದಾಗ ಅವನು ಸಂಧ್ಯಾಳ ಕಾಲೇಜ್ ಸೀನಿಯರ್ ಅಂಕಿತ್ ಆಗಿರುತ್ತಾನೆ. ಸಂಧ್ಯಾ ಅಂಕಿತ್ ನನ್ನ ಭೇಟಿಯಾಗಿ ಕಾರ್ತಿಕ್ ಬಗ್ಗೆ ತಿಳಿದುಕೊಳ್ಬೇಕು ಅಂತ ನಿರ್ಧಾರ ಮಾಡ್ತಾಳೆ.

ಕಾರ್ತಿಕ್ ಕಾಲೇಜ್ ನಲ್ಲಿ ಒಂದು ಹುಡುಗಿಯನ್ನ ಪ್ರೀತಿಸಿದ್ದ ಅವರಿಬ್ಬರೂ ಯಾವ್ದೋ ಕಾರಣಕ್ಕೆ ಬೇರೆಯಾದ್ರು ಅನ್ನೋ ವಿಷ್ಯ ಸಂಧ್ಯಾಗೆ ಅಂಕಿತ್ ನಿಂದ ತಿಳಿಯುತ್ತೆ. ಅದೇ ಕಾರಣಕ್ಕೆ ಅವನು ಯಾರನ್ನೂ ಒಪ್ಪಿಕೊಳ್ಳೋ ಮನಸ್ಥಿತಿಯಲ್ಲಿಲ್ಲ ಅಂತ ಅನ್ನಿಸುತ್ತೆ. ಆದ್ರೆ ಇದು ೩-೪ ವರ್ಷಗಳ ಹಿಂದಿನ ವಿಶ್ಯ ಆದ್ದರಿಂದ ಈ ಕೇಸ್ ಗೆ  ಏನೂ ಸಮಸ್ಯೆ ಆಗೋದಿಲ್ಲ. ಆಪ್ ಕೊಟ್ಟಿರೋ ಗ್ಯಾರಂಟೀ ಪ್ರಕಾರ ಒಂದು ವರ್ಷದಲ್ಲಿ ಅವನು ಸಂಗಾತಿಯನ್ನ ಹುಡುಕಿಕೊಳ್ಳೋಕೆ ಆಗ್ದೇ ಇದ್ರೆ ಅವರು ಕಾಂಪನ್ಸೇಶನ್ ನ ಪಡೀಬೋದು ಅಂತನ್ನಿಸಿ ತಕ್ಷಣವೇ ಕಾರ್ತಿಕ್ ಗೆ ಫೋನ್ ಮಾಡಿ ನಾನು ಈ ಕೇಸ್ ನ ತಗೋತೀನಿ ಅಂತಾಳೆ. ಕಾರ್ತಿಕ್ ನನ್ ಬಗ್ಗೆ ತುಂಬಾ ಬ್ಯಾಗ್ರೌಂಡ್ ಚೆಕ್ ಮಾಡಿ ಈ ಡಿಸಿಶನ್ ತೊಗೊಂಡಿದ್ದೀರಾ ಅನ್ಸತ್ತೆ ಅಂತ ನಕ್ಕಾಗ ಸಂಧ್ಯಾಗೆ ಸಿಕ್ಕಿಕೊಂಡಂತಾಗುತ್ತೆ. ಕಾರ್ತಿಕ್ – ಹಾಗಾದ್ರೆ ಸರಿ ಲಾಯರ್ ಮೇಡಮ್, ಹೆಡ್ ಆಫೀಸ್ ಗೆ ಹೋಗಿ ಬರೋಣ. ಅವ್ರ್ಗೆ ಮೇಲ್ ಮಾಡಿದ್ ಪ್ರಯೋಜ್ನ ಆಗಿಲ್ಲ. ಆಫೀಸ್ ಇನ್ ಫ್ಯಾಂಟ್ರಿ ರೋಡ್ ನಲ್ಲಿದೆ, ಅವ್ರ್ ಹತ್ರ ಅಪಾಯಿಂಟ್ಮೆಂಟ್ ತೊಗೋತೀನಿ. ಅಂದು ಫೋನ್ ಕಟ್ ಮಾಡ್ತಾನೆ.

ಸಂಧ್ಯಾ ಮತ್ತು ಕಾರ್ತಿಕ್ ಹೆಡ್ ಆಫೀಸ್ ಗೆ ಹೋಗಿ ಕೇಸಿನ ಬಗ್ಗೆ ಮಾತನಾಡಿದಾಗ ಆಪ್ ನ ಫೌಂಡರ್ ಕೇಸ್ ನ ಗಂಭೀರವಾಗಿ ತೊಗೊಳ್ಳೋದಿಲ್ಲ. ಸಂಧ್ಯಾ – ನನ್ನ ಕ್ಲೈಂಟ್ ಗೆ ೫೦ ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಈಗ ಲಾಯರ್ ಫೀಸ್, ಇಂಟ್ರೆಸ್ಟ್ ಎಲ್ಲಾ ಸೇರಿ ನೀವು ಒಂದು ಲಕ್ಷ ಕಾಂಪನ್ಸೇಶನ್ ಕೊಡ್ಬೇಕು ಅಂದಾಗ ಅವನು ಇಂಥಾ ಕೇಸ್ ನೆಲ್ಲಾ ನೀವು ಹ್ಯಾಂಡಲ್ ಮಾಡ್ತೀರ ಅಂದ್ರೆ ನೀವ್ ಎಂಥಾ ಲಾಯರ್ ಅಂತ ಗೊತ್ತಾಗುತ್ತೆ ಅಂತ ಹೀಯಾಳಿಸ್ತಾನೆ. ಕಾರ್ತಿಕ್ ಗೆ ಸಿಟ್ಟು ಬಂದು ಸಂಧ್ಯಾ ಪರವಾಗಿ ಅವಳ ಕಾರ್ಯಕ್ಷಮತೆ ಬಗ್ಗೆ ಮಾತಾಡೋ ಹಕ್ಕು ನಿಮ್ಗಿಲ್ಲ ಅಂತ ಮಾತಾಡ್ತಾನೆ. ಫೌಂಡರ್ ನಕ್ಕು ನೀವು ಹೇಳಿದ್ ಪ್ರಕಾರ ಒಂದು ವರ್ಷ ಮುಗಿಯೋಕೆ ಇನ್ನೂ ೧೫ ದಿನಗಳಿವೆ. ಅಷ್ಟ್ರಲ್ಲಿ ನಿಮ್ ಕ್ಲೈಂಟ್ ಗೆ ಯಾರಾದ್ರೂ ಸಂಗಾತಿ ಸಿಗ್ಬೋದು ಹೋಗಿ ಅಂತ ಉಡಾಫೆ ಇಂದ ಮಾತಾಡ್ತಾರೆ. ಸಂಧ್ಯಾ – ಸರಿ ಇಲ್ಲಿ ಕಾಂಪನ್ಸೇಶನ್ ಗೆ ಜಾಗವಿಲ್ಲ ಅಂತಾಯ್ತು. ನಾವು ಕೋರ್ಟ್ ನಲ್ಲೇ ಸಿಗೋಣ ಅಂತ ಹೊರನಡೀತಾಳೆ. ಕಾರ್ತೀಕ್ ಗೆ ಸಂಧ್ಯಾಳ ಮಾತಿನ ಧಾಟಿ ಕಂಡು ಮೆಚ್ಚುಗೆಯಾಗುತ್ತೆ.

ಅಂದಿನಿಂದ ಸಂಧ್ಯಾ ಮತ್ತು ಕಾರ್ತೀಕ್ ಕೇಸಿನ ವಿಚಾರವಾಗಿ ಮಾತಾಡೋಕೆ ಸಿಕ್ಕಾಗ ತಮ್ಮ ಇಷ್ಟ ಕಷ್ಟಗಳನ್ನೂ ಹೇಳಿಕೊಳ್ತಾರೆ. ಸಂಧ್ಯಾ ಒಬ್ಬ ಪ್ರಾಮಾಣಿಕ ಹೆಣ್ಣು ಅಂತ ಕಾರ್ತಿಕ್ ಗೆ ಅನ್ನಿಸುತ್ತೆ. ಕಾರ್ತಿಕನ ಪ್ರೇಯಸಿ ದುಡ್ಡಿನಾಸೆಗಾಗಿ ಇವನನ್ನ ಬಿಟ್ಟುಹೋದ್ಲು ಅಂತ ಸಂಧ್ಯಾಗೆ ಗೊತ್ತಾಗುತ್ತೆ. ಸಾಯಂಕಾಲದ ಕೇಸ್ ಗೆಲ್ಲುವುದರ ಬಗ್ಗೆ ಮಾತುಕತೆಯ ಜೊತೆಗೆ ಸಣ್ಣ ವಾಕಿಂಗ್ , ರಸ್ತೆ ಪಕ್ಕದ ಬಿಸಿ ಬಿಸಿ ಟೀ ಮತ್ತು ಮದ್ದೂರ್ ವಡೆ ಇವರ ಒಡನಾಟಕ್ಕೆ ಸಾಕ್ಷಿಯಾಗುತ್ತವೆ.

ಕೋರ್ಟ್ ಹಿಯರಿಂಗ್ ನ ದಿನ ಸಹನಾಗೆ ವೈರಲ್ ಫಿವರ್ ಬಂದು ತುಂಬಾ ಬಳಲಿದ್ದ ಕಾರಣ ಸಂಧ್ಯಾ ಕಂಗಾಲಾಗಿರುತ್ತಾಳೆ. ಇಂಥಾ ಸಮಯದಲ್ಲೇ ಭಾವ ದೆಹಲಿಗೆ ಕೆಲ್ಸದ ಮೇಲೆ ಹೋಗಬೇಕಾ ಅಂದುಕೊಂಡು ಅಕ್ಕನನ್ನ ನೋಡಿಕೊಳ್ಳೋದಾ ಅವಳ ಎರಡು ತಿಂಗಳ ಹಸುಗೂಸನ್ನ ನೋಡಿಕೊಳ್ಳೋದಾ, ಇಬ್ಬರನ್ನೂ ಬಿಟ್ಟು ಕೋರ್ಟಿಗೆ ಹೋಗೋದಾ ಅಂತ ಗೊಂದಲದಲ್ಲಿದ್ದಾಗ ಬಾಗಿಲಲ್ಲಿ ಕಾಣಿಸಿದ ಕಾರ್ತಿಕ್ ನಗುಮುಖದಲ್ಲಿ ಹಿಯರಿಂಗ್ ಗೆ ಇನ್ನೊಂದು ಡೇಟ್ ತಗೊಂಡ್ರಾಯ್ತು ಅಂತ ಹೇಳಿದಾಗ ಸಂಧ್ಯಾಗೆ ಕಾರ್ತಿಕ್ ತನ್ನ ಮನಸ್ಸಿನ ಮಾತನ್ನ ಕೇಳಿಸಿಕೊಂಡ್ನಾ ಅಂತ ಅನ್ಸತ್ತೆ. ಆ ದಿನ ಕಾರ್ತಿಕ್ ಅವರ ಮನೇಲಿದ್ದು ಸಂಧ್ಯಾ ಅಕ್ಕನನ್ನು, ಮಗುವನ್ನೂ ನೋಡಿಕೊಳ್ಳೋದಕ್ಕೆ ಸಾಥ್ ಕೊಡ್ತಾನೆ. ಎಲ್ಲಾ ಕೆಲ್ಸವನ್ನೂ ಒಬ್ಬಳೇ ಮಾಡುತ್ತಿದ್ದ ಸಂಧ್ಯಾಗೆ ಕಾರ್ತಿಕ್ ಜೊತೆಗಿರೋದು ಒಂದು ಹೊಸಾ ಅನುಭವವನ್ನ ತರುತ್ತೆ. ಆ ರಾತ್ರಿ ಅವನನ್ನು ವಾಪಸ್ಸು ಕಳಿಸುವಾಗ ಇನ್ನೊಂದಷ್ಟು ಹೊತ್ತು ನನ್ನ ಜೊತೇಲಿರಿ ಅನ್ನೊ ಮಾತು ಗಂಟಲಿನ ತನಕ ಬಂದು ಅಲ್ಲೇ ಸಿಕ್ಕಿಕೊಳ್ಳುತ್ತೆ. ಯಾಂತ್ರಿಕವಾಗಿ ಅವನು ಹೋದ ಕಡೆ ಕೈ ಬೀಸುತ್ತಾ ನಿಲ್ತಾಳೆ.

ಕಾರ್ತಿಕ್ ಡೇಟಿಂಗ್ ಆಪ್ ನ ವಿರುದ್ಧ ದಾಖಲಿಸಿದ್ದ ದೂರಿನ ಬಗ್ಗೆ ವಾದ ಮಾಡಲು ಸಂಧ್ಯಾ ಸಿದ್ಧಳಾಗಿ ನಿಂತಿದ್ದಾಳೆ. ಆಪೋಸಿಶನ್ ಲಾಯರ್ , ‘ಕಾರ್ತಿಕ್ ಒಬ್ಬ ತಲೆಹರಟೆ ಹಾಗಾಗಿ ಇಂಥಾ ವಿಷ್ಯ ಇಟ್ಟುಕೊಂಡು ದೂರು ದಾಖಲಿಸಿದ್ದಾನೆ. ಈತನಿಗೆ ಮದ್ವೆ ಆಗೋ ಉದ್ದೇಶವೇ ಇಲ್ಲ, ಸುಮ್ಮನೆ ಹುಡುಗಿಯರನ್ನ ಭೇಟಿಯಾಗಿ ಟೈಮ್ ಪಾಸ್ ಮಾಡಿದ್ದಾನೆ. ಈಗ ಈ ಕಂಪನಿಯ ಮೇಲೆ ದೂರು ದಾಖಲಿಸಿ ಅವರ ಗೌರವ ಹಾಳು ಮಾಡ್ತಿದ್ದಾನೆ’ ಅಂತ ವಾದ ಮಾಡಿದಾಗ ಸಂಧ್ಯಾ ಅದಕ್ಕೆ ಟಕ್ಕರ್ ಕೊಡೋದಕ್ಕೆ ತನ್ನ ಸಾಕ್ಷಿಗಳನ್ನ ಕಟಕಟೆಗೆ ತಂದು ನಿಲ್ಲಿಸುತ್ತಾಳೆ.

ಕಾರ್ತಿಕನನ್ನ ಭೇಟಿಯಾಗಿದ್ದ ಏಳೆಂಟು ಹುಡುಗೀರು, ಅವನು ನಮ್ಮೊಂದಿಗೆ ಎಂದಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ, ಕಾರ್ತಿಕ್ ತುಂಬಾ ಇಂಟ್ರೆಸ್ಟಿಂಗ್ ವ್ಯಕ್ತಿ ನಮ್ಮನ್ನ ಗೌರವದಿಂದಲೇ ಕಂಡರು ಅಂತ ಹೇಳಿಕೆ ಕೊಡ್ತಾರೆ. ಆಶ್ಚರ್ಯವೆಂಬಂತೆ ಕಾರ್ತಿಕನ ಹಳೆಯ ಪ್ರೇಯಸಿಯೂ ಬಂದು ತಾನೇ ಅವನನ್ನ ದೂರ ಮಾಡಿಕೊಂಡೆ. ಅವನು ಇಷ್ಟ ಪಡೋ ಸಂಗಾತಿ ಅವನಿಗೆ ಬೇಗ ಸಿಗಲಿ ಅಂತ ಹೇಳ್ತಾಳೆ. ಕಾರ್ತಿಕ್ ಸಂಧ್ಯಾ ತನಗಾಗಿ ಏನೆಲ್ಲಾ ಮಾಡಿದ್ದಾಳೆ ಅಂತ ಭಾವುಕನಾಗ್ತಾನೆ.

ವಾದ ಪ್ರತಿವಾದದ ಕೊನೇನಲ್ಲಿ ಜಡ್ಜ್ ಕಾರ್ತಿಕನನ್ನು ಕಟಕಟೆಗೆ ಕರೆಸಿ ಭಗವದ್ಗೀತೆಯ ಮೇಲೆ ಆಣೆ ಮಾಡಿಸಿ ನಿಮಗೆ ಒಂದು ವರ್ಷದಲ್ಲಿ ಇಲ್ಲಿಯ ತನಕ ನೀವು ಭೇಟಿಯಾದ ಯಾವ ಹುಡುಗಿಯ ಮೇಲೂ ಪ್ರೀತಿ ಹುಟ್ಟಿಲ್ವಾ? ಇವ್ಳೇ ನನ್ನ ಸಂಗಾತಿ ಅಂತ ಅನ್ನಿಸಿಲ್ವಾ ಅಂತ ಕೇಳಿದಾಗ ಸಂಧ್ಯಾ ಮನಸ್ಸಲ್ಲಿ ತೊಳಲಾಟ ಶುರುವಾಗುತ್ತದೆ. ಇಷ್ಟು ಹೊತ್ತು ಕೇಸ್ ಗೆಲ್ಲಬೇಕೆಂಬ ಹಟದಲ್ಲಿದ್ದ ಅಡ್ವೊಕೇಟ್ ಸಂಧ್ಯಾ ಮನಸ್ಸು ಕಾರ್ತಿಕ್ ಬಾಯಿಂದ ಬೇರೆಯೇ ಉತ್ತರವನ್ನ ಪಡೆಯಲು ಹಾತೊರೆಯುತ್ತದೆ. ಕಾರ್ತಿಕ್ ಒಂದು ಕ್ಷಣ ಯೋಚಿಸಿ. ‘ಇಲ್ಲ, ಹಾಗಾಗೀನೇ ನಾನು ಆ ಆಪ್ ನ ವಿರುದ್ಧ ದೂರು ದಾಖಲಿಸಿದ್ದೇನೆ’ ಅಂತಾನೆ. ಜಡ್ಜ್ ಪ್ರಶ್ನೆಗಳನ್ನು ಮುಂದುವರಿಸುತ್ತಾರೆ. ಸಂಧ್ಯಾಗೆ ಎಲ್ಲವೂ ಮೌನವಾದಂತಾಗುತ್ತದೆ.

ಕೋರ್ಟ್ ಕಾರ್ತಿಕ್ ಗೆ ಒಂದು ಲಕ್ಷ ರುಪಾಯಿಯ ಕಾಂಪನ್ಸೇಶನ್ ನ ಕೊಡಿಸುತ್ತದೆ. ಸಂಧ್ಯಾ ಒಬ್ಬಳೇ ಕೋರ್ಟ್ ನ ಆಚೆ ಬಂದು ನಾನು ಯಾರ ವಿರುದ್ಧ, ಯಾವುದಕ್ಕಾಗಿ ಹೋರಾಡಿದೆ? ನನ್ನ ಮತ್ತು ಕಾರ್ತಿಕನ ಮಧ್ಯೆ ಇದ್ದ ಸಂಬಂಧ ಒಬ್ಬ ಅಡ್ವೊಕೇಟ್ ಮತ್ತು ಕ್ಲೈಂಟ್ ಅನ್ನೋದಷ್ಟೇನಾ? ಇಂದು ನಾನು ಸತ್ಯವಾದದಿಂದಲೇ ಕೇಸ್ ನ ಗೆದ್ದಿದ್ದಾ? ಹೀಗೇ ಯೋಚಿಸುತ್ತಾ ಗೊಂದಲದಲ್ಲಿ ಹೋಗ್ತಿದ್ದವಳ ಎದುರಿಗೆ ಕಾರ್ತಿಕ್ ಬಂದು ನಿನ್ನ ಎಲ್ಲಾ ಪ್ರಶ್ನೆಗಳಿಗೆ ನನ್ನ ಹತ್ರ ಉತ್ತರವಿದೆ ಅನ್ನೋ ತರ ಅವಳನ್ನೇ ನೋಡ್ತಾ ನಿಲ್ತಾನೆ.

‍ಲೇಖಕರು Avadhi

21 May, 2021

74 Comments

  1. ಸಿದ್ದೇಶ

    ತುಂಬಾ ಚೆನ್ನಾಗಿದೆ.

    • Madhu Hallur

      Saralavagi sankshiptavagi sulabhavagi artha madikolluva sanna kathe . Nanage tumbha ishtavayitu Ranju akka

      • Shruthi

        ರಂಜನಿ ನಿಮ್ಮ ಕತೆ ಬಹಳ ಸರಳ ಮತ್ತು ಸುಂದರವಾಗಿದೆ. ಹೇಳಿಕೊಳ್ಳಲಾಗದ ಮನಸ್ಸಿನ ಭಾವನೆಯನ್ನು ಅರ್ಥೈಸಿಕೊಳ್ಳುವ ಮನಸ್ಸು ನೀಡುವ ಪ್ರತಿಕ್ರಿಯೆ ಸಮಾಧಾನ ಚೆನ್ನಾಗಿದೆ. ಪ್ರತಿ ಮೌನದ ಪ್ರಶ್ನೆಗಳಿಗೆ ಅರ್ಥಮಾಡಿಕೊಂಡ ಮನಸ್ಸು ಮಾತ್ರ ಉತ್ತರಿಸುತ್ತದೆ

        • Shrishail

          ರಂಜಿನಿ ಅವರೇ ನಿಮ್ಮ ಕಥೆಗಳು ತುಂಬಾ ಚೆನ್ನಾಗಿದೆ

      • Sanjana J B

        ಕಥೆಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಮನಸ್ಸಿನ ಮಾತು ಅರ್ಥಪೂರ್ಣವಾಗಿದ್ದು, ನೈಜತೆಯಿಂದ ಕೂಡಿದೆ.

        ಬರವಣಿಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.

    • Siriyash

      Just simply superb madam…

      • Mahesh

        ಕಥೆಯ ಕಡೆಯ ಭಾಗ ತುಂಬಾ ಚೆನ್ನಾಗಿದೆ ರಂಜನಿ ಅವರೆ ಕೊನೆಗೆ ಅವನ ಉತ್ತರ ಏನಿರಬಹುದು

      • RanjithaGirish

        ನಮಸ್ತೆ ರಂಜಿನಿ ಮೇಡಂ, ನಿಮ್ಮ ಕಥೆಯಲ್ಲಿ ಬರುವ ನಾಯಕಿ ಹಾಗೂ ಕನ್ನಡತಿಯ ಭುವಿ ಪಾತ್ರದ ಹಾಗೆ ಇದೆ.
        ಅದರಲ್ಲಿಯೂ ನಾಯಕಿ ತನ್ನ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಒದ್ದಾಡುವುದು ಕಾಣಿಸುತ್ತದೆ.
        ಸುಲಭ ಹಾಗೂ ಸರಳ ವಾದಂತಹ ಬರವಣಿಗೆ ಎಂಥವರನ್ನು ಸಹ ಆಕರ್ಷಿಸುತ್ತದೆ. ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ.

    • Ramprasad nayaka H P

      Good

    • ನಿಧಿ ಗಾಂವ್ಕರ್

      ಕಥೆಯನ್ನು ಬಹಳ ಚೆನ್ನಾಗಿ ಬರಿತಿದ್ದೀರಾ…..ನಿಮ್ಮ ಎಲ್ಲಾ ಕಥೆಗಳನ್ನು ಓದಿದಾಗ ನನ್ನ ಮನಸ್ಸಿಗೆ ಖುಷಿಯಾಯಿತು…. ಹೀಗೆಯೇ ಮುಂದು ಬರೆಯುತ್ತಿರಿ…. ನಿಮಗೆ ಒಳ್ಳೆಯದಾಗಲಿ

  2. ಸಿದ್ದೇಶ

    ತುಂಬಾ ಚೆನ್ನಾಗಿದೆ.

    • Sindhu

      Tumba chennagide matte kannadathiya kannada adbutha vagide

      • Sumanth Bhat

        ತುಂಬಾ ಚೆನ್ನಾಗಿದೆ

        • Shambhavi Sandhya

          Simply superb antharalla hag idhe kathe.. thumba chenag bardidiri ,mugdhmel scroll madtha nodtidini ayyo agoytha kathe antha.. odtha odtha kathe olage mulgogirtivi.. All the best ranjani avre.. Heege continue madi, kathe pusthaka odhbeku Anno asakthi ellargu barabahudhu…

    • Susheela bhat

      ನಿಮ್ಮ ಕಥೆ ಓದಿಸಿಕೊಂಡ ಹೋಗುತ್ತದೆ ತುಂಬಾ ಸರಳವಾಗಿದೆ ಚೆನ್ನಾಗಿದೆ
      ನಿಮ್ಮ ಈ ಪ್ರಯತ್ನದಲ್ಲಿ ನಿಮಗೆ ಹೆಚ್ಚುನ ರೀತಿಯಲ್ಲಿ ಯಶಸ್ಸು ಸಾಧಿಸಲು ಹರಿ ವಾಯುಗಳ ಗುರುಗಳ ಪೂರ್ಣ ಅನುಗ್ರಹವಾಲಿ ಒಳ್ಳೆಯದು ಮಾಡಲಿ ಶುಭವಾಗಲಿ ರಂಜನಿ ಅವರಿಗೆ
      ಶುಭ ಹಾರೈಕೆ.

    • Radha

      Very nice Story. Liked it very much.

  3. Anitha MN

    ರಂಜನಿ,
    ನಿಮ್ಮ ಕತೆ ತುಂಬಾ ಇಷ್ಟವಾಯಿತು. ಸಾಮಾನ್ಯರೂ ಸುಲಭವಾಗಿ ಅರ್ಥಮಾಡುವಂತಿದೆ, ಹಾಗೆಯೇ ಗಮನ ಸೆಳೆಯುವಂತೆ ಕತೆ! ಜೊತೆಗೆ ಇದು ಇಂದಿನ ಪೀಳಿಗೆಗೆ ಸಿಮಾಜಿಕಶಜಾಲತಾಣದ ಕುರಿತ ಎಚ್ಚರಿಕೆಯ ಕರೆಗಂಟೆಯಂತಿದೆ!

    • Anitha MN

      ರಂಜನಿ,
      ನಿಮ್ಮ ಕತೆ ತುಂಬಾ ಇಷ್ಟವಾಯಿತು. ಸಾಮಾನ್ಯರೂ ಸುಲಭವಾಗಿ ಅರ್ಥಮಾಡುವಂತಿದೆ, ಹಾಗೆಯೇ ಗಮನ ಸೆಳೆಯುವಂತ ಕತೆ! ಜೊತೆಗೆ ಇದು ಇಂದಿನ ಪೀಳಿಗೆಗೆ ಸಾಮಾಜಿಕ ಜಾಲತಾಣದ ಕುರಿತ ಎಚ್ಚರಿಕೆಯ ಕರೆಗಂಟೆಯಂತಿದೆ!

      • Shreedevi Shivakumar

        Nice storyRanjani

      • Latha

        ವಾಕ್ಯಗಳಲ್ಲಿ ಸ್ವಲ್ಪ ದೋಷಗಳಿವೆ,ಮತ್ತು ಭಾಷೆಯನ್ನು ಇನ್ನೂ ಹೆಚ್ಚು ಉಪಯೋಗ ಮಾಡಬೇಕಿತ್ತು.

    • Meghana kulkarni

      Tumbaane channagi bardiddira kathe ishta aaytu. Mundenu nimma kathegalannu miss maadade oduttene….. With Best Wishes

      • ಮಲ್ಲಿಕಾರ್ಜುನ ವಿ ಗೌಡ

        ಕಥೆ ತುಂಬಾ ಚನ್ನಾಗಿದೆ. ಹ್ಯಾಟ್ಸ್ ಆಫ್ your handwriting.

  4. Hemabai

    ಹಾಯ್ ರಿಯಲ್ ಕನ್ನಡತಿ ನಾನೂ ನಿಮ್ಮ ದೊಡ್ಡ ಅಭಿಮಾನಿ ….ನಾನು ನಿಮ್ಮ ಕಥೆಗಾಗಿ ಅವಧಿ ಪೇಜ್ ಗೆ ಜಾಯಿನ್ ಆಗಿ ಕಾಯುತ ಇದೆ . ತುಂಬ ಚೆನಾಗಿದ್ದೆ ಕಥೆ ಮುಂದೆ ಏನು ಆದಷ್ಟು ಬೇಗ ಹಾಕಿ . ಹಾಗೆ ನಿಮ್ಮ ಸಿನಿ ಪಯಣಕ್ಕೂ ಸಾಹಿತ್ಯ ಪಯಣಕ್ಕೂ ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುವೆ . ಇಂತಿ ನಿಮ್ಮ ಅಭಿಮಾನಿ ಹೇಮಾ.

    • Sujatha

      ಕನ್ನಡತಿ ನಿಜವಾಗಿ ಕಥೆ ಬರೆದರೆ ಓದದೇ ಇರೋದಾದ್ರೂ ಹೇಗೆ, ಓದಿ ನಿಮ್ಮ ಬಗ್ಗೆ ಹೆಮ್ಮೆ ಆಗಿದೆ.. ಸಂತೋಷ ಆಯಿತು, ಮುಂದೆ ನಿಮ್ಗೆ ಒಳ್ಳೆಯದಾಗಲಿ ಇನ್ನೂ ಚೆನ್ನಾಗಿ ಬರೆಯುವಂತಾಗಲಿ ರಜನಿ madam

      • ಶ್ರೀ ಲಕ್ಷ್ಮಿ

        Kathe thumbaa saralavaagidhe matthu Chennagidhe. Nimma prayathnavannu mundhuvaresi. All the Best

        ಕತೆ ತುಂಬಾ ಚೆನ್ನಾಗಿದೆ ಮತ್ತು ಸರಳವಾಗಿದೆ. ನಿಮಗೆ ಅಭಿನಂದನೆಗಳು ಮತ್ತು ನಿಮಗೆ ಶುಭವಾಗಲಿ ರಂಜನಿ..❤️

        • ಗೋವಿಂದರಾಜು

          ಕತೆ ತುಂಬಾ ಚೆನ್ನಾಗಿದೆ ಮೇಡಂ…ಮನ‌ಮುಟ್ಟುವ ನಿರೂಪಣೆ

    • ರಾಜಶ್ರೀ ದಿವಾಕರ್

      ರಜನಿ,

      ನಿಮ್ಮ ಕಥೆ ತುಂಬಾ ಚೆನ್ನಾಗಿ ಸರಳವಾಗಿದೆ. ಮುಂದಿನ ಕಥೆಗಾಗಿ ಕಾಯುತಿರುವೆ. ನಿಮ್ಮ ಮುಂದಿನ ಎಲ್ಲಾ ನಡೆಗೂ All the best, ಒಳ್ಳೆಯದು ಆಗಲಿ

    • Kavya

      Good Ranjini..

  5. Manjula

    Super ranjani mam Exited for ur upcoming stories

  6. Padma A

    A very nice short story.
    I think at the end both Karthik and Sandhya will be together, marry

    • Shruthi Shetty

      Very nice ma’am eagerly waiting for continuation……..

  7. Nagasri

    Nice story

  8. ಸುಪ್ರೀತಾ ವೆಂಕಟ್

    ಕಥೆ ಚೆನ್ನಾಗಿದೆ ಮೇಡಂ.. ಜೀವನದಲ್ಲಿ ಕೆಲವೊಂದು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತದೆ ಅಲ್ಲವೇ?
    ಇದಕ್ಕೆ ಸಂಧ್ಯಾ ಕೂಡ ಹೊರತಾಗಿಲ್ಲ.. ಮುಂದಿನ ದಿನಗಳಲ್ಲಿ ಹೀಗೆಯೇ ನಿಮ್ಮಿಂದ ಇನ್ನಷ್ಟು ಕುತೂಹಲಕರ ಕಥೆಗಳ ನಿರೀಕ್ಷೆಯಲ್ಲಿ

    • ನಿರ್ಮಲ

      ತುಂಬಾ ಚೆನ್ನಾಗಿದೆ ನಿಮ್ಮ ಕಥೆಯಲ್ಲಿನ,ಕರ್ತವ್ಯ ನಿಷ್ಠೆ ಹಾಗೂ ಸಂಬಂಧಗಳ ಬಗೆಗಿನ ಕಾಳಜಿ

  9. Tejaswini

    Good story I like it. Keep going love from shivamogga and I’m a big fan of kannadathi

  10. Asini

    Chanagide

  11. Girish Kalkund

    ಕಥೆ ಚೆನ್ನಾಗಿದೆ, ಕನ್ನಡತಿ ಪಾತ್ರದ ದಾರಿಯಲ್ಲಿ ಈ ಕಥೆಯನ್ನು ಹೆಣೆದ ಹಾಗೆ ಇದೆ. ಕೊನೆ ಏನಾಯಿತು ಎಂಬುದು ಕುತೂಹಲ ಕೆರಳಿಸಿತು. ಮುಂದಿನ ಸಂಚಿಕೆಯ ಭಾಗಕ್ಕಾಗಿ ಕಾಯುತ್ತಿರುವ
    ನಿಮ್ಮ ಅಭಿಮಾನಿ
    ಗಿರೀಶ ಕಲಕುಂದ

  12. Siddharth Patil

    ಕಥೆ ಚನ್ನಾಗಿದೆ ನಿರೂಪಣೆ ಅದ್ಭುತವಾಗಿ ಮೂಡಿದೆ.

  13. ಆಶ್ರಿತ

    ಬಹಳ ಚೆನ್ನಾಗಿದೆ ನಿಮ್ಮ ಮೊದಲನೆಯ ಕಥೆ. ಇದೇ ರೀತಿ ಮುಂದುವರಿಸಿ ನಿಮ್ಮ ಬರವಣಿಗೆ. ಕನ್ನಡತಿ ಧಾರಾವಾಹಿ ಬಹಳ ಚೆನ್ನಾಗಿದೆ. ನಿಮ್ಮ ಸ್ಪಷ್ಟವಾದ ಕನ್ನಡ ಮಾತಿಂದ ಈ ಧಾರಾವಾಹಿಗೆ ಮೆಚ್ಚುಗೆ ಇದೆ.
    ಧನ್ಯವಾದಗಳು

    • Srinivasa Murthy

      ಸರಳ ಸುಂದರ ಕಥೆ.
      ಅಭಿನಂದನೆಗಳು ಕನ್ನಡತಿ

  14. ಸುನಿತಾ

    ತುಂಬಾ ಚೆನ್ನಾಗಿದೆ ಕಥೆ ಮುಂದುವರಿಸಿ

  15. Sushma sachin

    Wow ranjini claimax nim serial thare ne ede propose madalla just face reaction nalle ebrigu esta ede anno bhavane e kathena nanu harsha bhuvi characters imagination nalle odkondu hode thumba esta aithu. Congratulations dear.. Nimge shubhavagi. Nivu bhayasiro yella yashassu nimge sigali. God bless you

  16. ಆದರ್ಶ ಶಿವಮೊಗ್ಗ

    ಕಥೆ ತುಂಬಾ ಚೆನ್ನಾಗಿದೆ, ಕಿರುತೆರೆಯಲ್ಲಿ ನಿಮ್ಮ ಅಭಿನಯ ನಮಗೆ ತುಂಬಾ ಇಷ್ಟ, ಕನ್ನಡ ತಿ ಧಾರಾವಾಹಿಯ ಭುವಿ ಪಾತ್ರ ನನಗೆ ತುಂಬಾ ಇಷ್ಟ, ನಿಮ್ಮ ಕಥೆ ಬರಹದ ಹೊಸ ಪ್ರಯತ್ನಕ್ಕೆ ಧನ್ಯವಾದಗಳು,,,

    • Monica

      Very nice keep going❤

      • Deepa G S

        Super akka

  17. Sowmya

    ಪುಟ್ಟ ಗೌರಿ ಮದುವೆ ಧಾರವಾಹಿಯಿಂದ ನಾನು ನಿಮ್ಮನ್ನು ಇಷ್ಟಪಟ್ಟೆ. ನಿಮ್ಮೊಳಗೆ ಬರಹಗಾರ್ತಿ ಇದ್ದಾರೆ ಅನ್ನುವುದು ಅತೀ ಸಂತೋಷ ತಂದಿದೆ. ಮೊದಲ ಕಥೆಯು ತುಂಬಾ ಚೆನ್ನಾಗಿದೆ. ಮುಂದಿನ ಕಥೆಗಾಗಿ ಕಾಯುವೆ. ನಿಮ್ಮ ಆರೋಗ್ಯವು ಆರೋಗ್ಯಕರವಾಗಿರಲು ಶ್ರೀದೇವರಲ್ಲಿ ಪ್ರಾರ್ಥಿಸುತ್ತೇನೆ.

  18. ರಾಜು ಬಿ.ಜಿ

    ಕಥೆಯ ವಸ್ತು ವಿಷಯ ಹೊಸದಾಗಿದೆ ,ಕಥೆಯ ಕೊನೆಯನ್ನು ಓದುಗನೇ ಊಹಿಸಬಹುದು ಹಾಗೆ ಒಂದಷ್ಟು ಬರೆಯುವ ಆತುರ ಎದ್ದು ಕಾಣಿಸುತ್ತೆ ಆದರೂ ಇದೊಂದು ಒಳ್ಳೆ ಬೆಳವಣಿಗೆ ಒಬ್ಬ ಬರಹಗಾರ ಬರೆದ ಕಥೆಯನ್ನು ಓದದವರು ನಿಮ್ಮ ನಟನೆಯ ಮೂಲಕ ಒಂದಷ್ಟು ಜನಕ್ಕೆ ಕನ್ನಡ ಅಕ್ಷರಗಳು ತಲುಪಬಹುದು ಬರೀರಿ ಹೀಗೆ ಮತ್ತಷ್ಟು ಒಳ್ಳೆದಾಗಲಿ ನಿಮ್ಗೆ

  19. ದಿವ್ಯ

    ತುಂಬ ಚೆನ್ನಾಗಿದೆ ಮತ್ತು ಉತ್ತಮ ಗುಣಮಟ್ಟದ ಬರವಣಿಗೆ

  20. Deepalaxmi

    ಪ್ರೀತಿಯ ರಂಜಿನಿಯವರೇ….
    ತುಂಬಾ ಚೆನ್ನಾಗಿ ಮೂಡಿ ಬಂದಿದೆ…. ನಿಮ್ಮ ಸೃಜನಶೀಲತೆ ನಿಜಕ್ಕೂ ಮೆಚ್ಚುಗೆಗೆ ಅರ್ಹ….

    All the best for more….Will be waiting for weekly updates….

  21. ಆದರ್ಶ ಶಿವಮೊಗ್ಗ

    ಕಥೆ ತುಂಬಾ ಚೆನ್ನಾಗಿದೆ, ಕಿರುತೆರೆಯಲ್ಲಿ ನಟನೆಯ ಜೊತೆಗೆ ಕಥೆ ಬರೆಯುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು, ನಿಮ್ಮ ಕನ್ನಡತಿ ಧಾರಾವಾಹಿಯ ಅಭಿಮಾನಿ ನಾನು, ನಿಮ್ಮ ಅಭಿನಯ ತು೦ಬಾ ಚೆನ್ನಾಗಿ ಮೂಡಿಬಂದಿದೆ, ನಿಮ್ಮ ಮುಂದಿನ ಕಥೆಯ ನಿರೀಕ್ಷೆಯಲ್ಲಿ,,,

  22. ದೀಪಲಕ್ಷ್ಮಿ

    ಪ್ರೀತಿಯ ರಂಜನಿಯವರೇ,

    ಈ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ… ನಿಮ್ಮ ಸೃಜನಶೀಲತೆ ನಿಜಕ್ಕೂ ಮೆಚ್ಚುಗೆಗೆ ಅರ್ಹ…

  23. Aishwarya HN

    avanu mundhe bandhu ninthkond mele Enhelthana

  24. Ramya

    ಒಳ್ಳೆಯ ಕಥೆ ತುಂಬಾ ಇಷ್ಟ ಆಯ್ತು ಮುಂದಿನ ಸಂಚಿಕೆಗಾಗಿ ಕಾಯ್ತಾ ಇದ್ದೀನಿ. All the best ranjani☺

    • Manju

      ರಂಜನಿ. ಕಥೆ ತುಂಬಾ ಚನ್ನಾಗಿದೆ ಮುಂದೆ ಏನು….. ಅವ್ರಿಬ್ರು ಮದ್ವೆ ಆಗ್ತಾರಾ. ಅಥವಾ ಕೇಸ್ ಗೆದ್ದ ಖುಷಿ ಅಷ್ಟೇ ನ…….

    • ಹರ್ಷಿಣಿ

      ನನಗೆ ತುಂಬಾ ಇಷ್ಟ ಆಯ್ತು. ,,, ನಿಜ ಹೇಳ್ಬೇಕಂದ್ರೆ ನಾನು ಯಾವ ಪುಸ್ತಕ ಅಥವಾ ಯಾವುದೇ ರೀತಿಯ ಬರಹ ಗಳನ್ನು ಓದುತ್ತಿರಲಿಲ್ಲ. ಈಗ ನಿಮ್ಮ ಕಥೆಗಳಿಂದ ಶುರು ಮಾಡಿದ್ದೇನೆ. ನಾನು ನಿಮ್ಮ ದೊಡ್ಡ ಅಭಿಮಾನಿ ಹಾಗಾಗಿ ನಿಮ್ಮ ಸಲುವಾಗಿ ಓದುವ ನಿಮ್ಮ ಬರಹಗಳನ್ನು ಓದಲು ಶರು ಮಾಡಿದ್ದೇನೆ. ಈಗ ನನಗೆ ಗೊತ್ತಿಲ್ಲದೆ ಓದುವ ಹವ್ಯಾಸ ಹಾಗೂ ಆಸಕ್ತಿ ಬೆಳೆದಿದೆ. ಧನ್ಯವಾದಗಳು

  25. Shivani S

    ತುಂಬಾ ಚೆನ್ನಾಗಿದೆ ಸಣ್ಣ ಕಥೆ ಇಷ್ಟ ಆಯಿತು. ನಿಮ್ಮ ಹಾಗೆ ನಿಮ್ಮ ಕತೆ ಕೂಡಾ simply superb keep it up❤️❤️❤️

  26. Anantarao Joshi

    ಈ ಕಥೆ ತುಂಬಾ ಇಷ್ಟವಾಯ್ತು.ಇನ್ನೂ ಮುಂದು ವರೆಯುತ್ತಾ? ಮುಂದೆ ಏನಾಗುತ್ತದೆ..

    • Aparna

      It’s really gud , I like the story

  27. Nagalakshmi

    ಆಪ್ ಉಚಿತ ಸಂಗಾತಿ ಖಚಿತ ಒಂದು ಈ ದಿನಗಳಲ್ಲಿ ನಡೆಯುತ್ತಿರುವ ಆನ್ಲೈನ್ ಸುಲಿಗೆಗಳ ಹಾಗೂ ಸಾಮಾನ್ಯ ಜನರು ಹೇಗೆ ಆನ್ಲೈನ್ matrimonial site ಅಥವಾ ಡೇಟಿಂಗ್ apps ಮತ್ತು ಸಾಮಾಜಿಕ ಜಾಲತಾಣ ಗಳಲ್ಲಿ ಮೋಸ ಹೋಗುತ್ತಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಆದರೆ ಮೊಸಹೋದವರು ಕಾರ್ತಿಕ್ ಅಂತೆಯೇ ನ್ಯಾಯಕ್ಕಾಗಿ ಹೊರಡುವುದು ಕಡಿಮೆ ಎಂಬುದು ವಿಷಾದಕರ.

  28. Sinchana

    ಅದ್ಬುತ ಕಥಾ ಅಂದರ ಹಾಗೂ ಅತೀ ಅನಿಸದ ಭಾವನೆಗಳು ಒಂದು ಸರಳ ಸುಂದರ ಕಥೆ ಇದಾಗಿದೆ. ಓದುಗರಿಗೆ ಬಹಳ ಸುಲಭವಾಗಿ ಅರ್ಥವಾಗುವ ಸಣ್ಣ ಕಥೆ.

  29. Sowmya br

    Story chennagide akka.hige continue maadi.all the best ur bright future akka.next story ge wait madtidini.thumba interest agi ettu.e story li olle msg edhe.

  30. Shalini Manjunath

    Nimma baravanige tumba chennagide, mumbaruva kathegalanna hodalu wait madthidini

  31. Nandini V

    Thumbha chanagi edhe madam please continue madi.. Nim short stories nindha nange kannada improve madkolo chances siktha edhe. Thank you

  32. Vasundhara k m

    ಸ್ವಲ್ಪ ಹಿಗ್ಗಿಸಿದಿರಿ ಎನಿಸುತ್ತದೆ. ಅದರ ಹೊರತಾಗಿ ಕತೆ ಚೆನ್ನಾಗಿದೆ.

    • Seema

      ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿವಾರ ಒಂದು ಕಥೆಗೆ ಎದುರುನೋಡಬಹುದು ಅಂತ ಅನಿಸುತ್ತೆ. ಶುಭವಾಗಲಿ

  33. ಕಾಶಿ ಪ್ರಸಾದ

    ಹೊಸ ಬಿನ್ನವಾದ ಕಥೆ ಮತ್ತು ಒಳ್ಳೆಯ ಪ್ರಯತ್ನ, ನಿಮ್ಮಿಂದ ಇನ್ನೂ ಹೊಸ ಹೊಸ ಕಥೆಗಳನ್ನು ನಿರೀಕ್ಷಿಸಬಹುದು

  34. Chethan

    ಚೆನ್ನಾಗಿದೆ ಓದುವುದಕ್ಕೂ ಸುಲಭವಾಗಿದೆ ಹೀಗೆ ನಿಮ್ಮ ಸಣ್ಣ ಕಥೆಗಳನ್ನು ಬರೆಯುತ್ತಾ ಇರಿ ಧನ್ಯವಾದಗಳು ರಂಜಿನಿ I m a big fan of yours love u❤️
    From : Chethan

  35. Netra

    Super agide nima short story Madam ,and nanu nima abhimaani Ranjani Akka

  36. Saikumar K

    MAST

  37. Poornima

    Tumbane chennagi ide nim kathe.. Elliyu kuda bore aglilla..

  38. Sumit

    Well written !!

    Please Come up with a thrilling suspense.

  39. arun

    ಓ ಅಭಿಮಾನಿ ದೇವರುಗಳೇ, ಯದ್ವಾ ತದ್ವಾ ಹೊಗಳುವ ಮೊದಲು ಈ ಲಿಂಕಿನ ಟ್ರೈಲರ್ ಒಮ್ಮೆ ನೋಡುವಂಥವರಾಗ್ರಪ್ಪೋಓಓಓಓಓಓಓ

    https://www.youtube.com/watch?v=TcilGWIzvdE

    3 ಸೆಪ್ಟೆಂಬರ 2020 ಕ್ಕ Love Guaranteed ಅಂಬೋ ಒಂದು ಪಿಚ್ಚರ್ ನೆಟ್‌ಫ್ಲಿಕ್ಸ್‌ನ್ಯಾಗ ರಿಲೀಸ್ ಆಗೇತಿ, ಅದರ ಟ್ರೈಲರ್‌ಗೂ ಈ ಕನ್ನಡತಿಯಮ್ಮ ಬರೆದ ಯಾ ಬರೆಯಲಿದ್ದ ಕಥೆಯೇ ಪ್ರೇರಣೆ ಅಂತನಿಸ್ತದ!!

    ಅವಧಿಯ ಮೋಹನಣ್ಣಂಗೂ ಇದುನ್ನ ಸೊಲುಪ ತೋರುಸ್ರಿ

  40. Suma G R

    Nice story Rajini sista

  41. Shekar Patil

    ತುಂಬಾ ಚನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading