
ರಾಜು ಬಿ ಆರ್
ಕ್ಷೇತ್ರಪತಿ Nothing but a P. Sainath’s Everybody loves a good drought
ಪಿ.ಸಾಯಿನಾಥ ಅವರು ಬರೆದ EVERY BODY LOVES A GOOD DROUGHT, ಕನ್ನಡದಲ್ಲಿ ಈ ಪುಸ್ತಕವನ್ನು ಜಿ.ಎನ್ ಮೋಹನ್ ಅವರು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂದು ಅನುವಾದ ಮಾಡಿದ್ದಾರೆ.
ಈ ಪುಸ್ತಕ ದೇಶದ ಬೆನ್ನೆಲುಬು ರೈತರ ಹಾಗೂ ಗ್ರಾಮೀಣ ಭಾಗದ ನೈಜ ಸ್ಥಿತಿಗಳ ಚಿತ್ರಣವನ್ನು ಎಳೆಎಳೆಯಾಗಿ ಬಿಚ್ಷಿಡುತ್ತದೆ. ಈ ದೇಶದಲ್ಲಿ ರೈತರು ಆತ್ಮಹತ್ಯೆಗಳು ಯಾಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನ, ಪಿ ಸಾಯಿನಾಥವರು ದೇಶದ ಮೂಲೆ ಮೂಲೆಯ ಗ್ರಾಮಗಳಿಗೆ ಪ್ರವಾಸ ಮಾಡಿ, ಅಲ್ಲಿನ ನೈಜತೆಗಳ ಬಗ್ಗೆ ಬರೆದ ಲೇಖನಗಳ ಸಂಗ್ರಹ ಪುಸ್ತಕವಿದು.
ಇದಕ್ಕೆ ಹತ್ತಿರವಾಗುವಂತೆ, ಉತ್ತರ ಕರ್ನಾಟಕದ ಹುಡುಗರು ನವೀನ್ ಹಾಗೂ ಶ್ರೀಕಾಂತ ಕ್ಷೇತ್ರಪತಿ ಚಿತ್ರದಲ್ಲಿ ತೋರಿಸಿದ್ದಾರೆ. ಈ ದೇಶ ಕಾರ್ಪೊರೇಟ್ ಕಂಪನಿಗಳಿಂದ ರೈತನ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದು ನಿತ್ಯ ನಾವು ಗ್ರಾಮೀಣ ಭಾಗದಲ್ಲಿ ನೋಡುತ್ತಿದ್ದೇವೆ. ಅದರ ಸೂಕ್ಷ್ಮತೆಗಳನ್ನು ಕ್ಷೇತ್ರಪತಿ ಚಲನ ಚಿತ್ರದ ತಂಡ ತೋರಿಸು ಪ್ರಯತ್ನ ಮಾಡಿದೆ.

ದಲ್ಲಾಳಿಗಳ, ಮಧ್ಯವರ್ತಿಗಳ ಆಸೆಗೆ ರೈತರು ಬಲಿಯಾಗುತ್ತಿರುವುದು. ನಿಸರ್ಗ ಸಾವಯವ ಕೃಷಿ ಕಳೆದುಕೊಂಡು ಕಾರ್ಪೊರೇಟ್ ಕಂಪನಿಗಳ ಬೀಜ, ರಾಸಾಯನಿಕ ಔಷಧಿಗಳ ಬಳಕೆಯಿಂದ ರೈತರಿಗೆ ಆಗುತ್ತಿರುವ ನಷ್ಟ, ವಿಪರೀತ ಸಾಲಗಳಿಂದ ರೈತರ ಆತ್ಮಹತ್ಯೆಗಳ ಬಗ್ಗೆ ಸರ್ಕಾರಕ್ಕೆ ಮನಮುಟ್ಟವಂತೆ ಕ್ಷೇತ್ರಪತಿ ತಂಡ ಪ್ರಯತ್ನ ಮಾಡಿದೆ.
ಕಾರ್ಪೊರೇಟ್ ಕಂಪನಿಗಳ ಹೊಡೆತಕ್ಕೆ ಅನ್ನದಾತ ಇಂದು ಅಸಹಾಯಕನಾಗಿದ್ದಾನೆ, ಸಾಲಗಾರನಾಗಿದ್ದಾನೆ, ಹೊಲ ಮನೆ ಗ್ರಾಮ ಬಿಟ್ಟು ಹೊಟ್ಟೆಪಾಡಿಗಾಗಿ ಮಹಾನಗರಗಳತ್ತ ಮುಖ ಮಾಡಿದ್ದಾನೆ. ಒಂದೊಮ್ಮೆ ಬಂಗಾರದ ಮನುಷ್ಯನಾಗಿದ್ದ ಅನ್ನದಾತ ಇಂದು ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ. ರೈತರಿಗೆ ಒಂದಿಷ್ಟು ಉಚಿತ ಸ್ಕೀಮ್ ಗಳನ್ನು ನೀಡುವ ಸರ್ಕಾರಗಳು ನಿಜವಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ.

ದಶಕದ ಹಿಂದೆ ಬರೆದ ಪಿ ಸಾಯಿನಾಥ ಅವರ ಲೇಖನಗಳು ಹಾಗೂ Everybody loves a good drought ಪುಸ್ತಕ ಇಂದಿಗೂ ಪ್ರಸ್ತುತ. ಉತ್ತರ ಕರ್ನಾಟಕದ ಹುಡುಗರು ಚಿತ್ರಿಸಿದ ಕ್ಷೇತ್ರಪತಿ ಚಲನಚಿತ್ರ ಪ್ರಸ್ತುತ…
ಸಾಯಿನಾಥ ಅವರ ಪುಸ್ತಕ ಹಾಗೂ ಕ್ಷೇತ್ರಪತಿ ಚಿತ್ರ ಗ್ರಾಮೀಣ ಭಾಗದ ವಿದ್ಯಾವಂತ ವಿದ್ಯಾರ್ಥಿಗಳು ಓದಬೇಕು, ನೋಡಬೇಕು. ಬದಲಾಗಬೇಕು ರೈತರು ಮತ್ತೆ ಬಂಗಾರದ ಮನುಷ್ಯರಾಗಬೇಕು. ಹಾಗಾಗಿ ನಮ್ಮ ಹುಡುಗನ ಜೊತೆ ಒಂದು ಫೋಟೊ ಇರಲಿ ಎಂದು……






0 Comments