ಕ್ಲಿಕ್.. ಕ್ಲಿಕ್.. ಕ್ಲಿಕ್..

ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ 

ಒಂದು ಫೋಟೋ- ನೂರಾರು ಕವಿತೆ 

ಕಾಡುವ ಒಂದು ಫೋಟೋ ಕೊಡುತ್ತೇವೆ 

ನೀವು ಕವಿತೆ ಬರೆದು ಕಳಿಸಿ 

ಜೊತೆಗೆ ನಿಮ್ಮ ಫೋಟೋ ಸಹಾ ಕಳಿಸಿ 

camera

‘ಅವಧಿ’ ಸಂಪಾದಕ ಮಂಡಳಿ ಆಯ್ಕೆ ಮಾಡಿದ ಕವಿತೆಗಳನ್ನು ಪ್ರಕಟಿಸುತ್ತಾ ಹೋಗುತ್ತದೆ 

ಪ್ರತೀ ಫೋಟೋ ಕವಿತೆಗೂ ಒಬ್ಬೊಬ್ಬ ಗಣ್ಯರು ಅತಿಥಿಯಾಗಿರುತ್ತಾರೆ 

ಹಾಗೆ ಪ್ರಕಟಗೊಂಡ ಕವಿತೆಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಕೊಡುತ್ತಾರೆ 

ಅದಕ್ಕೆ ಬಹುಮಾನವಿದೆ 

ಬಹುಮಾನದ ಪ್ರಾಯೋಜಕರು- ಯುವ, ಉತ್ಸಾಹಿ ಕ್ಯಾಮೆರಾ ಆರ್ಟಿಸ್ಟ್ ನಾಗರಾಜ ಸೋಮಯಾಜಿ.

ಈಗ ತಾನೇ ‘ಫೋಕಸ್’ ಎನ್ನುವ ಒಂದು ಕನಸಿನ ತಾಣವನ್ನು ಸೃಷ್ಟಿಸಿದ್ದಾರೆ 

OLYMPUS DIGITAL CAMERA

ಕವಿತೆ ಕಳಿಸಲು ಕಡೆ ದಿನಾಂಕ ಅಂತ ಇದೆಯಾ??-

ಇಲ್ಲ, ಆದರೆ ನಾವು ಇನ್ನೊಂದು ಹೊಸ ಫೋಟೋ ‘ಅವಧಿ’ಯಲ್ಲಿ ಪ್ರಕಟಿಸುವವರೆಗೆ ಮಾತ್ರ ಕಳಿಸಬಹುದು 

ಈ ಬಾರಿಯ ಅತಿಥಿ- ಜೋಗಿ 

ಅದಿರಲಿ, ಈ ಫೋಟೋ ತೆಗೆದವರ ಹೆಸರು ಹೇಳಿ ಅಂತ ಕೇಳ್ತೀರಿ ಗೊತ್ತು 

ಒಂದು ಕುತೂಹಲದ ಕಥೆ ಇದೆ, ಜೋಗಿ ಆಯ್ಕೆಯ ಜೊತೆಗೆ ಇದನ್ನು ಪ್ರಕಟಿಸುತ್ತೇವೆ 

click kavite shilabalike

 

 

‍ಲೇಖಕರು Admin

August 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಯ್ಯೋ..

6 ಪ್ರತಿಕ್ರಿಯೆಗಳು

  1. Chidambar Narendra

    ಮಡಿವಂತಿಕೆ ಬಿಟ್ಟು
    ಹೇಳುತ್ತಿರುವೆ ಕೇಳಿ,
    ಇದು ಗಂಡಸರ ನಡು-
    ವಿನ ಅಂಗೀಕೃತ ಸತ್ಯ.
    ಯಾವುದೂ ಹೊತ್ತಿಸುವುದಿಲ್ಲ ನಮ್ಮಲ್ಲಿ
    ತುಂಬು ಜಘನದ ಹೆಣ್ಣಿನ
    ನಡಿಗೆಯಷ್ಟು ಕಾವು.
    ಇನ್ನಾವುದೂ ನೀಡುವುದಿಲ್ಲ
    ಅಷ್ಟು ನೋವು.

    ಪ್ರತಿಕ್ರಿಯೆ
    • Chidambar Narendra

      ನೆನಪಾದ ಭರ್ತೃಹರಿಯ ಕವಿತೆ ……

      ಪ್ರತಿಕ್ರಿಯೆ
  2. Geetha b u

    ನಡು ಸಣ್ಣ
    ತುಂಬು ನಿತಂಬ
    ಬಳಿ ಸೆಳೆದುಕೊಳ್ಳಲು
    ನೀಳ ಜಡೆ
    ಸಾಕಷ್ಟೇ ನೀರೆ ನನಗೆ.

    ಒಲ್ಲೆನ್ನುವ ಬಾಯಿರುವ
    ಮುಕಾರವಿಂದ ಬೇಡ.
    ಬಳಿ ಸೆಳೆದರೆ
    ದೂರ ನೂಕುವ ಹಸ್ತ ಬೇಡ.

    ಕಲ್ಲಾಗಿ ನಿಂತರೂ
    ಕಾಲರಳಿಸಿದರೆ ಸಾಕು
    ಹೆಣೇ ಸಾಕು
    ಬೊಂಬೆಯಂತಹ ನಿನ್ನ ನಿಲುವು

    ಮಾತನಾಡಬೇಡ.
    ಚಲಿಸಬೇಡ.
    ಸ್ಪಂದಿಸಲೂ ಬೇಡ.
    ಸಹಕರಿಸು ಸಾಕು.

    ಪ್ರತಿಕ್ರಿಯೆ
  3. B R Vijayakumar

    ಕಲ್ಲಾಗಿ ನಿಂತಿರುವೆ
    ನೀಲ ಜಡೆಯ ಸುಂದರಿ
    ನೀ ಕಲ್ಲಾದರು
    ನೋಡುಗನ ಹೃದಯ
    ಭಾವನೆಗಳ ಆಗರ
    ಸುಂದರಿ ನಿನ್ನ ಆ ನಿತಂಬ
    ಶೃಂಗಾರ ರಸದ
    ಆಸೆರೆಯೋ ಅಥವಾ
    ಕಾಮದ ಆಹ್ವಾನವೋ

    ಪ್ರತಿಕ್ರಿಯೆ
  4. Anonymous

    ಮುಂಗುರುಳ ಸರಿಸಿ ನೋಡಲು
    ಕಾಣುವುದೇ, ಮನದೊಳಗಿನ ಭಾವ
    ಮತ್ತೆನನ್ನು ನೆನಪಿಸುವಂತೆ ತೋರಿತ್ತಿದೆ
    ಮರೆತಿರುವ ಹಿನ್ನಡುವಿನ ಬಳ್ಳಿಯ ವೇಣಿ
    ಪುರುಷ ಸ್ಪರ್ಶ ಸುಖಕ್ಕಾಗಿ ಕಾದಿರುವ
    ನಿನ್ನೊಳಗಿನ ಹೆಣ್ತನ
    ಕಾಡುತ್ತಿದೆ, ಅಲ್ಲಲ್ಲೆ ಒಂದು ಕ್ಷಣ
    ಕಲ್ಲಾಗಿರುವುದು ಯಾವುದು..?
    ಮನದೊಳಗೆ ಅವುಚಿಟ್ಟ ಆಸೆಯ ಗೂಡು
    ಬಾರನೆಂದರೆ ಬರುವುದಿಲ್ಲ, ಅಪರೂಪದ ಒಡವೆ
    ನಿಂತಲ್ಲಿಗೆ ನಿಂತಾಗಿಗೆ ನೀನು
    ಯಾರಿಗಾಗಿ ಕಾದಿರುವೆ ಕೇಳಬೇಕು ನಾನು..?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: