ಕವಿದ ಮೋಡಗಳಿಗಿದೆ ಬೆಳ್ಳಿ ಕಿರಣ

ರಾಜಕುಮಾರ ಮಡಿವಾಳರ
ಇಷ್ಟು ಇಣುಕಿರುವ ಈ
ಯಾರದೋ ಕರುಳ ತುಣುಕು
ನನ್ನ ಅಣಕಿಸುವಂತಿದೆ!
ಬಗ್ಗಿ ಹುಡುಕುತ್ತಿರುವುದು ಒಮ್ಮೆ
ಬದುಕು ಅನಿಸಿದರೂ ಮರುಕ್ಷಣ
ಪಾತಾಳದಿಂದೆದ್ದು ಬರುವ ಸಾವ
ಬಗೆದು ಮೇಲೆ ಕರೆಯುವಂತಿದೆ.
ಹಿಂದೆ ಹದ್ದು ಅದಕೂ ಬದುಕು
ಹಸಿವು ಹಸುಳೆ ಇಬ್ಬರಿಗೂ ಒಬ್ಬರಷ್ಟೇ
ಉಳಿವರು ತಿಂದವರು ಗೆದ್ದಂತೆ ಬೀಗಬೇಕಿಲ್ಲ ಮತ್ತೊಂದು ಹಸಿವಿಗೆ ಪ್ರತ್ಯಕ್ಷ ಸಾವು!
ಕವಿದ ಮೋಡಗಳಿಗಿದೆ ಬೆಳ್ಳಿ ಕಿರಣ
ಚೆಂದ ಕವಿತೆಯ ಸಾಲು, ಸುಯ್ಯನೆ
ಸುಳಿದು ಮಿಂಚಿ ಫಳಾರ್ ಹೊಳೆದು
ಮರೆಯಾಯ್ತು ಕ್ಯಾಮರಾ ಕಣ್ಣು!
ಈಗ ಹಸಿವು ನೆಲಕ್ಕೆ!
ಎಲ್ಲ ಮಣ್ಣು…





0 Comments