ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ನೀರಿನಾಲಿಂಗನದಲ್ಲಿ ಬೆಂಕಿ

ಒಡಲ ಕಿಚ್ಚು!

ಸುನೀತ ರಾವ್ ಆರ್

ಅವಳ ಬಾಲ್ವಾಡಿಯ ದಿನಗಳು,
ಟೀಚರ್ ಕಲಿಸಿದ ‘ಬೋಟ್ ಮೇಕಿಂಗ್’

click-aytu-kavite7ಆಗ,
ಬಕೆಟ್ ನೀರಿನಲ್ಲಿ ಸುತ್ತುಹರೆದಿದ್ದ ದೋಣಿ
ಒಳಗೊಂದು ಮಿಂಚುಹುಳ
“ಟಾರ್ಚ್ ಅಮ್ಮ ಇದು”
ಮಗಳ ಕೇಕೇ, ಚಪ್ಪಾಳೆ

ಈಗ,
ಮಗಳ ಕತ್ತಿದೋಣಿ
ಉರಿದೀತೋ, ಮುಳುಗೀತೋ

“ನಿಮ್ಮಮ್ಮ ಮಾರಿ ಕಣೇ!”
ಜನರ ಅಂಬೋಣ

ದನಿಯೆತ್ತಿದರೆ ಬೆಂಕಿ
ದನಿಗೂಡಿಸಿದರೆ ದೀಪ್ತೆ

ಕಟಕಟೆಯ ಹಸೆಮಣೆ
ಅಗಲಿಕೆಯೇ ಆಮ್ಲಜನಕವಾ

ನೀರೆಲ್ಲಿ, ನಾನೆಲ್ಲಿ?
ಅರಸಬೇಕಷ್ಟೆ ಒಳ ತೃಷೆಯ

ಇಕೋ, ನನ್ನ ಕಿಚ್ಚು
ಹಣತೆ ಹಚ್ಚು
ನೀರಿನಾಲಿಂಗನದಲ್ಲಿ
ಬೆಂಕಿ ಬೆಳಕಾದೀತು!

 

‍ಲೇಖಕರು Admin

28 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading