ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ನಾವೆ ಮುಳುಗುವುದು ಖಚಿತ

kamal_belagurಕಮಲ ಬೆಲಗೂರ್

ಮನದ ತುಂಬ
ಕತ್ತಲು ಮುಸುಕಿದೆ
ಯಾವುದೋ ಮಾಯಾ
ರಾಗದ ಜಾಲದಿ ಬಂದಿತ
ಏಕಾಕಿ ಮನ ಹೊರಟಿದೆ
ಸಾಗರದಲೆಗಳ
ನಡುವೆ ನಾವಿಕನಿಲ್ಲದ
ನಾವೆಯಲ್ಲಿ ದೂರ
ದಡದ ಗೂಡನರಸಿ.

ಸುತ್ತಾ ನೀರು ಮೇಲೆ
ನೀಲ ನಭದ ವಿಸ್ತಾರ
ಬೀಸುವ ಗಾಳಿಗೆ ದೀಪದ
ಕೆನ್ನಾಲಿಗೆ ನಾವೆಯ
ಆವರಿಸಿ ಏಳುತ್ತಾ ಬೀಳುತ್ತಾ
ಸಾಗುತ್ತಿರಲು ದೂರದಿಂದ
ಅಲೆಯಲೆಯಾಗಿ ತೇಲಿ
ಬರುತಲಿದೆ ಇಂಪಾದ ಗಾನ.

ಇದೇನು ಕನಸೋ ನನಸೋ
ಅರಿಯದಾಗಿದೆ ಮನ…
ನಾವಿಕನಿಲ್ಲದ ನಾವೆ
ಮುಳುಗುವುದು ಖಚಿತ
ಸಾಗುವಷ್ಟು ಸಮಯ ಸಾಗಲಿ
ಉಳಿಸುವ ಅಳಿಸುವ ಜವಾಬ್ದಾರಿ
ಕಡಲಿನದ್ದೇ.

ಉದಾಸನಾಗದಿರು ಮನವೇ
ಹುಡುಕಾಟದ ಹಾದಿ
ಹೂವಿನ ಹಾಸಿಗೆಯಲ್ಲ
ವೆಂಬ ಸತ್ಯದ ಅರಿವು
ನಿನಗಿದೆಯಲ್ಲಾ..
ಸುಂದರ ಬೆಳಕು
ಜನ್ಮಿಸಲು ಅಗಣಿತ
ತಾರೆ ಚಂದ್ರಮರ ಕೊನೆ
ಯಾಗಬೇಕು.

ಕಡಲೂ ನಿನ್ನದೆ
ಒಡಲ ಕಿಚ್ಚೂ ನಿನ್ನದೆ
ಬದುಕಿನ ನಾವೆ
ಮುಳುಗದಿರಲೆಂಬುದೇ
ನಮ್ಮ ಪ್ರಾರ್ಥನೆ.

‍ಲೇಖಕರು Admin

1 November, 2016

3 Comments

  1. S.p.vijaya Lakshmi

    Kamala avare, kavithe chennaagide…:-)

    • Kamala Narayana

      ಧನ್ಯವಾದಗಳು

  2. ಬಸವರಾಜ ಹೊಸಮನಿ

    ಬೆಂಕಿ ಬೆಳಗುವ ಕಾಲ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading