ಶಿವಪ್ರಕಾಶ್ ಎಚ್ ಎಮ್ ಭೂತಕಾಲಕೆ ನೆನಪಾದೆ
ನೆನಪು ನೆನಪಿಸುತ ವರ್ತಮಾನವಾದೆ
ಭವಿಷತ್ ಎಚ್ಚರಿಸುವ ಇತಿಹಾಸವಾದೆ.
ಕಪ್ಪು ಬಿಳುಪಾದೆ

ಬಣ್ಣ ಬಣ್ಣದ ಚಿತ್ರವಾದೆ
ನೆರಳು ಬೆಳಕಿನ ಆಟವಾದೆ.
ಪಡೆದುಕೊಂಡಿರುವುದರ
ಹಾಗು
ಕಳೆದುಕೊಂಡಿರುವುದರ
ನಡುವೆ
ಕನ್ನಡಿಯಾದೆ.
ಕೊಬ್ಬಿದ ಕಬ್ಬಿಣದ ದೇಹ ನನ್ನದು,
ನಾಜೂಕಾದ ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ,
ಮೂಲೆಗುಂಪಾದೆ… ತುಕ್ಕುಹಿಡಿದೆ… ಸಮಾಧಿಯಾದೆ.
ನಿನ್ನ ನಿನಪುಗಳಿಗೆ
ಹಸಿರು ಉಸಿರಾಗಿಸಿರುವೆ
ಅಷ್ಟು ಸಾಕು ನನಗೆ
ಇನ್ನು ನಿಶ್ಚಿಂತೆಯಿಂದ
ಚಿರನಿದ್ರೆಗೆ ಜಾರುವೆ.





0 Comments