ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಈ ಸುಂದರಿಗೆ ಈಗಲೂ ಪ್ರಿಯಕರರಿದ್ದಾರೆ..

ಡಾ. ಪ್ರೇಮಲತ ಬಿ.

ಈ ಕಾಲವೇ ಹೀಗೆ,

ನೆನಪುಗಳ ಹಿಡಿದಿಡಲು ತವಕಿಸಿ

ತಾನೇ ನೆನಪಾಗಿ ಧೂಳಿಡಿಯುತ್ತದೆ

ಕಾಲವನು ಫ್ರೇಮಿನಲಿ ಕ್ಲಿಕ್ಕಿಸಿದ

ಅಗ್ರಜೆ ಎಸ್ಸೆಲ್ಲಾರನೂ ಕಳೆಯುತ್ತದೆ!

ಕಾಲದ ಮಹಿಮೆಯಲಿ,

ಟೆಕ್ನಾಲಜಿಯ ವೇಗಕ್ಕೆ ರೆಕ್ಕೆ

ಜೋಡಿಸಿದ ಮೊದಲುಗಳೆಲ್ಲ ಹಳಬರಾಗಿ

ಇತಿಹಾಸದ ಪುಟಗಳಲಿ ಸಹಿಹಾಕಿ

ಕೈ ಜೋಡಿಸಿ ಹಿಂದೆ ಸರಿಯುತ್ತವೆ!

unnamed

ಕಳೆದ ಕಾಲದ ಪ್ರೀತಿಯಲಿ

ಜರ್ಮನಿಯ ಪರಿಣಿತಿಗೆ ಶರಣಾದ

ಈ ಸುಂದರಿಗೆ ಈಗಲೂ ಪ್ರಿಯಕರರಿದ್ದಾರೆ

ಸಿಕ್ಕರೆ ಶುಚಿಗೊಳಿಸಿ, ಒಂದೆರಡು

ಲೆನ್ಸುಗಳನು ಜೋಡಿಸಿ

ಆಟವಾಡಲು ಆ ಕೈಗಳು ತವಕಿಸುತ್ತವೆ!

ಕಾಲವನು ಕೆಣಕಿ,

ತಲೆಕೆಳಗಾಗಿ ಜೋಡಿಸಿದರೂ ಯಂತ್ರಗಳ

ತಿರುವು ಮುರುವಾಗಿಸಿದರೂ ಕೆಲಸಗಳ

ತನ್ನದೇ ಆಕಾರ-ವಿಕಾರಗಳ ಸುದ್ದಿ

ಹುಟ್ಟಿಸಿದ ,ಚರ್ಚೆಗೆ ಮೈಯೊಡ್ಡಿದ

ಜರ್ಮನಿಯ ಬೆಡಗಿ ಎಕ್ಸಾಟ್ಟಾಳನು

ಹೆಮ್ಮೆಯಲಿ ಸಂಗ್ರಹದಿ ಇಟ್ಟಿದ್ದಾರೆ!

ಕಳೆದ ಕಾಲದ

ನೆನಪಿನ ಸುರುಳಿಯನು ಸುತ್ತಿ, ಸುತ್ತಿ

ಬಿಚ್ಚಿಟ್ಟ ನೀನು ಕಾಲದಲಿ ವಿಲೀನ

ಹಳಬರನು ಪ್ರೀತಿಸುವ ಸಣ್ಣ ಮಾರಕಟ್ಟೆಯಲಿ

ದಪ್ಪಕ್ಷರದಿ ಬರೆದ ನಿನ್ನೆಸರು ಮಾತ್ರ

ಸೂಜಿರಂಧ್ರದಲಿ ಶಟ್ಟರ್ ಎಳೆದ

35 ಮಿಲಿಮೀಟರುಗಳ ದಾರ್ಶನಿಕಳಂತಲೇ, ಪ್ರಮಾಣ!

 

‍ಲೇಖಕರು admin

21 October, 2016

2 Comments

  1. shrivatsadesai

    ಓ ನನ್ನ ಪ್ರೀತಿಯ ಎಕ್ಸಾಕ್ಟಾ!
    ನೀನು ಹೀಗಾದೆಯೇ?
    ಯಾರವರು ಒರಟು ದುರುಳರು?
    ನಾ ನಿನ್ನ ಕೈ ಹಿಡುದು ಮೀಟಿದಾಗ
    ಕಣ್ಣು ಮಿಟುಕಿಸಿ (1/500 sec)
    ನನ್ನೆದೆಯ ಶಟರ್ಸ್ ಸ್ಪೀಡ್
    ನೂರಲ್ಲ, ಸಾವಿರವಾಗಿತ್ತು
    ಬೇಡವೆಂದರೂ ನನ್ನ ಕೈಬಿಟ್ಟೆ
    ಪ್ರಪಂಚ ಸುತ್ತಬೇಕೆಂದೆ
    ನಿನ್ನ ಮೀಟಿದ ಬೆರಳುಗಳಿಗೆ
    ವರಟು ಬರುತ್ತಿದೆ.ಏನಾ (Jena) ಅಲ್ಲದ
    ನನ್ನ ಕಣ್ಣ ಲೆನ್ಸು ಮಂಜಾಗುತ್ತಿದೆ!

    ಶ್ರೀವತ್ಸ ದೇಸಾಯಿ

    ಬಹಳ ಚೆನ್ನಾಗಿದೆ ಕವಿತೆ, ನನ್ನ ಪ್ರೀತಿಯ ಕ್ಯಾಮರಾ ಬಗ್ಗೆ!

  2. shrivatsadesai

    ಪ್ರೇಮಲತಾ ಅವರ ಕವಿತೆ ಚೆನ್ನಗಿದೆ ಎಂದು ನಾನಂದದ್ದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading