ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಈ ಆಟ ಶುರುವಾಗಿದ್ದು ಬಹಳ ಹಿಂದೆ..

ಆಟ..

ನಂ ಪಾರ್ವತಿ 

ಈ ಆಟ ಶುರುವಾಗಿದ್ದು ಬಹಳ ಹಿಂದೆ

ಅಪ್ಪ ಸೌದೆ ಒಡೆಯುತ್ತಾ, ಅಮ್ಮ ಎಸರಿಗಿಡುತ್ತಾ,

ಸುತ್ತಲ ಸಕಲ ಕೆಲಸವ ಮಾಡಿಮುಗಿಸೋ ಹಡಾಹುಡಿಯಲ್ಲಿ

ಮುಳುಗಿದ್ದಾಗ…

ಅಕ್ಕ-ಅಣ್ಣದಿರು, ತಮ್ಮ-ತಂಗಿಯರ ಒಟ್ಟಿಕೊಂಡು

ಅಪ್ಪ-ಅಮ್ಮನ ಆಟ ಆಡುವಾಗ, ಪೂಜೆ-ಆಟ ಆಡುವಾಗ..

ಇವುಗಳ ನಡುವೆ

ನಿರ್ವಿಘ್ಙ ಮನೆಯ ಕೆಲಸ ನಡೆಯುತ್ತಿದ್ದಾಗ…

click-aytu-kavite-5

ಭಾವದ ಅರಿವಿಲ್ಲದ, ಕೆಲಸದ ಹೊರೆಯಿಲ್ಲದ,

ನಾಳಿನ ಚಿಂತೆಯಿಲ್ಲದ, ಇಂದಿನ ಹಂಗೂ ಇಲ್ಲದ ಆಟದ ಹೊತ್ತಲ್ಲಿ. …

 

ಯಾವುದೂ ಕಾಡಲಿಲ್ಲ, ಯಾವುದೂ ಬೇಡಲಿಲ್ಲ,

ಎಷ್ಟುಬಾರಿ ಆಡಿದರೂ ಮುಗಿಯಲಿಲ್ಲ…

ಆಟಕ್ಕೆ ಜೀವ-ಜೀವನದ ಹೊರೆಯಿಲ್ಲ.

 

ಆಟ ಅಲ್ಲಿಗೇ ನಿಲ್ಲುವುದಿಲ್ಲ..

ದೇಹ ಬೆಳೆದಂತೆ, ಭಾವ ಬದಲಾಗಲಿಲ್ಲ, ಆಟ ನಿಲ್ಲಲಿಲ್ಲ..

 

ಜೊತೆನಡೆವ, ಹುಡುಕಾಡುವ, ಕಾಡುವ,  ಬೇಡುವ

ಎಲ್ಲಾ ತಂತುಗಳ ಬದಿಗಿರಿಸಿ, ಹೊಸಕಿ ಹಾಕಿ…

ಕಥೆಯಲ್ಲಿ, ಹಾಡಿನಲ್ಲಿ, ಪುರಾಣದಲ್ಲಿ, ಚರಿತ್ರೆಯಲ್ಲಿ

ಮೂಡಿದ ಚಿತ್ರವಾಗಿಬಿಡುವ ತವಕ …

ಕೊನೆಗೆ, ಗುಡಿಯ ಕಲ್ಲಿನ ಮೂರ್ತಿಯಾಗುವ ತೆವಲು…

ತನ್ನೊಳಗಿನ ರೂಪವ ಕಾಣಲು ದಿಗಿಲು…

 

ಅವಳು , ಅವನನ್ನು ಕೊಂದಳಂತೆ,  ಆಗ..

ಈಗ ನಾನು ನಿನ್ನ ಕೊಲ್ಲಲು ಸಾಕು ಈ ಸಮರ್ಥನೆ!

ನನ್ನ ಹುಚ್ಚಾಟಕ್ಕೆ, ತೆವಲಿಗೆ, ಕೋಪ-ಪ್ರತಾಪಕ್ಕೆ ಎಲ್ಲಕ್ಕೂ ಕಾರಣ ಹೊರಗಿದೆ…

ಯಾವ ಕ್ರೌರ್ಯವೂ ನನ್ನದಲ್ಲ

ಕಥೆಯ ಹಿಂದಣ ಬದುಕಿನ ಬಳುವಳಿಯೇ ಎಲ್ಲಾ

 

ನನ್ನದಾಗದ  ಭಾವಕ್ಕೆ ಬಲಿಯಾದ ಬದುಕುಗಳಿಗೆ

ಮರುಗದು ಮನ, ಮೂಡಲೊಲ್ಲದು ಕರುಣ…

 

ಬದಲಾದರೆ ಭಾವ,

ಅಪ್ಪಿಕೊಂಡರೆ ನೋವ

ಆಟವೂ ಬದಲಾಗಬಹುದು…

ನೋಟವೂ ಮಾಗಬಹುದು…

‍ಲೇಖಕರು Admin

17 October, 2016

4 Comments

  1. Anonymous

    Arthapurna kavite

    • ಪಾರ್ವತಿ

      ಧನ್ಯವಾದಗಳು

  2. C. N. Ramachandran

    ಆತಿ ಹಳೆಯ ’ಆಟ’ದ ಅತಿ ಹೊಸ ವ್ಯಾಖ್ಯಾನ ತುಂಬಾ ಅರ್ಥಪೂರ್ಣವಾಗಿದೆ. ಹಾರ್ದಿಕ ಅಭಿನಂದನೆಗಳು.
    ರಾಮಚಂದ್ರನ್

    • N. Parvathi

      ತುಂಬಾ, ತುಂಬಾ ಧನ್ಯವಾದಗಳು ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading