ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಅಂಬಿಗನಿರದ ಈ ದೋಣಿಗೆ..

h-m-shivaprakash

ಎಚ್ ಎಂ ಶಿವಪ್ರಕಾಶ್ 

ಮನುಜ..
ಸರಿಯಾಗಿ ನೋಡು…
ಹಣವಿಲ್ಲದೆ ನಿನಗೆ ಸಿಕ್ಕಿಹ…
ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ…

ಇಲ್ಲಿ…
ಗಾಳಿಯಿದೆ…
ನೀರಿದೆ…
ಹಾಗು ಬೆಳಕಿದೆ…

ಬೆಳಕಿಲ್ಲದೆ ಬದುಕಿಲ್ಲ…
ಗಾಳಿಯಿಲ್ಲದೆ ಉಸಿರಿಲ್ಲ…
ನೀರಿಲ್ಲದೆ ನೀನೇ ಇಲ್ಲ..

ಉಚಿತವಾಗಿ ಸಿಕ್ಕಿದೆಯೆಂದು…
ಹಾಳು ಮಾಡಬೇಡ…
ಕಾಲಮೀರಿದೊಡೆ… ಪರಿತಪಿಸಿದರೂ…
ನಿನಗೆ ಕ್ಷಮೆಯಿಲ್ಲ…

ಅಂಬಿಗನಿರದ ಈ ದೋಣಿಗೆ,
ನೀನೆ ಅಂಬಿಗ…
ಇಲ್ಲಿ ಕಿಚ್ಚಿದೆ… ನೀರೂ ಇದೆ…
ಕಿಚ್ಚು ಹಚ್ಚಿದ್ದು ನೀನು…
ಆರಿಸಬೇಕಾಗಿರುವುದು ನೀನೇ…!!!

ಎಚ್ಚೆತ್ತುಕೊ…
ಈಗಾಗಲೇ ಬಹಳ ತಡವಾಗಿದೆ…
ಬಹಳ ತೆರಿಗೆ ಕಟ್ಟಿ ಕೊಳ್ಳುವ ದಿನ ಬಲುದೂರವಿಲ್ಲ…
ಆ ದುರಂತಕ್ಕಾಗಿ ಕಾಯಬೇಡ…

ನೀರಿನಾಳ ಅರಿಯದ…
ಈ ಕಾಗದದ ದೋಣಿಗೆ,
ಬುದ್ಧಿಯಂಬ ಕಿಚ್ಚು ಹಚ್ಚಿ….
ಕಾಪಾಡು…

ಬಳಸು…
ಬೆಳಸು…
ನಾಳಿನವರಿಗೂ ಕಾಪಾಡು…
ನಾ ಸುಟ್ಟು ಬೂದಿಯಾಗುವ ಮೊದಲು..

‍ಲೇಖಕರು Admin

25 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading