ಕೋವಿಗೊಂದು ಕನ್ನಡಕ

‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಪ್ರಸ್ತುತ ಪಡಿಸುತ್ತಿರುವ ಹೊಸ ನಾಟಕ, ‘ಕೋವಿಗೊಂದು ಕನ್ನಡಕ’ ದ 10ನೇ ಪ್ರದರ್ಶನವನ್ನು ಇದೇ ಗುರುವಾರ, ಏಪ್ರಿಲ್ 15 ರಂದು ರಂಗ ಶಂಕರದಲ್ಲಿ ಪ್ರಯೋಗಿಸುತ್ತಿದ್ದೇವೆ. ಅಂತರಂಗ ನಾಟಕೋತ್ಸವ, ಮೈಸೂರಿನ ನಿರಂತರ ನಾಟಕೋತ್ಸವ, ಅನೇಕಾ ನಾಟಕೋತ್ಸವದ ನಂತರ ಮತ್ತೆ ರಂಗ ಶಂಕರದಲ್ಲಿ ಪ್ರಯೋಗಗೊಳ್ಳುತ್ತಿರುವ ಈ ನಾಟಕ ಕಳೆದ 3 ತಿಂಗಳಲ್ಲಿ 6 ಬೇರೆ ಬೇರೆ ರಂಗ ಮಂದಿರದಲ್ಲಿ ಪ್ರದರ್ಶನಗೊಂಡು ಈಗ 10ನೇ ಪ್ರದರ್ಶನಕ್ಕೆ ಅಣಿಯಾಗಿದೆ.

ಜಾಗತಿಕ ರಂಗಭೂಮಿಯಲ್ಲಿ ನಡೆಯುತ್ತಿರುವ ಹೊಸ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ರಯೋಗಿಸುವ ಹಂಬಲದಿಂದ ಹುಟ್ಟಿದ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಗೆ ಈಗ 5 ವರ್ಷ ತುಂಬಿದೆ. ಜನಪ್ರಿಯ ಮಾದರಿಯ ನಾಟಕಗಳು ಮತ್ತು ಮನರಂಜನೆ ಮಾತ್ರ ಕೇಂದ್ರ ವಾಗಿಟ್ಟುಕೊಂಡ ಪ್ರಯೋಗಗಳನ್ನು ಹೊರತುಪಡಿಸಿ, ಉತ್ತಮ ಗುಣಮಟ್ಟದ, ಸಮಾಜ ಮುಖಿಯಾದ ಗಂಭೀರ ವಿಷಯಗಳನ್ನೂ ಜನರಿಗೆ ತಲುಪಿಸುವ ಉದ್ದೇಶ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ನದು.

ಕಳೆದ ನವೆಂಬರ್‌ನಲ್ಲಿ ರೂಪುಗೊಂಡ ನಾಟಕ, ಕೋವಿಗೊಂದು ಕನ್ನಡಹ, ಪ್ರಸ್ತುತ ಸಮಾಜದ ಬಿಂಬವಾಗಿ ಕಾಣುತ್ತದೆ. ಕೋವಿಡ್ ಪಿಡುಗಿನಿಂದ ಜಗತ್ತೇ ಬಳಲುತ್ತಿರುವ ಈ ದುರಿತ ಕಾಲದಲ್ಲಿ, ಇಡೀ ಸಮುದಾಯವೇ ಸಂಕಟದಲ್ಲಿ ಮುಳುಗಿದ್ದಾಗ, ಎಲ್ಲರಲ್ಲಿ ಅನುಭೂತಿಯ ಮೂಡಬೇಕಿದ್ದ ಸಮಯದಲ್ಲಿ, ಮೂಡಿದ ವಿಭಾಗೀಯತೆ, ದ್ವೇಶ, ಪಕ್ಷಪಾತಗಳು ನಮ್ಮ ಸಮಾಜದಲ್ಲಿ ಹುದುಗಿದ್ದ ಹಲವು ಕಟು ಅಂಶಗಳನ್ನು ಜಾಳಾಗಿ ಹೊರಹಾಕಿತು. ಕೋವಿಗೊಂದು ಕನ್ನಡಕ, ಈ ಎಲ್ಲ ರೀತಿಯ ದ್ವೇಶದ ಮೂಲ ಮತ್ತು ಅದರ ಪರಿಣಾಮವನ್ನು ಹುಡುಕುವಲ್ಲಿನ ಒಂದು ಪ್ರಯತ್ನ.

‍ಲೇಖಕರು Avadhi

April 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: