ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕೊಳ್ಳೇ ಹೊಡೆಯೋರೆ ಈ ದೇಶದ ತುಂಬಾ ತುಂಬ್ಕೊಂಡಿರುವಾಗ…’

ಆನಂದ್ ಸಾಲುಂಡಿ

ಇತ್ತೀಚಿಗೆ ನಾನು ಒಬ್ರು ಪ್ರೊಡ್ಯುಸರ್ ಆಫಿಸ್ ಗೆ ಹೋಗಿದ್ದೆ.
ಅವರು ನನ್ನ ಜೊತೆ ಆತ್ಮೀಯವಾಗಿ ಮಾತಾಡ್ತ,
ಇಷ್ಟು ಚಿಕ್ಕವಯಸಿಗೆ ಚೆನಾಗ್ ಬರಿತೀಯ ಎಫ್.ಬಿ ನಲ್ಲಿ ನಿನ್ನ ಸ್ಟೇಟಸ್ ಎಲ್ಲಾ ನೋಡ್ತಿರ್ತೀನಿ.
ಹಾಗೆ ಹೀಗೆ ಅಂತೆಲ್ಲಾ ಹೊಗಳಿ ಆದ ಮೇಲೆ
ನಿಮ್ ಊರು ಯಾವುದು ಅಂದ್ರು
ನಾನು ಮೈಸೂರು ಅಂದೆ.
ಆಮೇಲೆ ಮೈಸೂರಲ್ ಎಲ್ಲಿ ಅಂತ ಕೇಳುದ್ರು
ನಾನು ಬಿಡಿಸಿ ಹೇಳುದೆ ನಮ್ ಊರು ಯಾವುದು,
ಎಲ್ ಬರುತೆ ಅಂತೆಲ್ಲಾ.
ಆಮೇಲೆ ಯಾವ್ ಕಾಸ್ಟು ಅಂದ್ರು
ನಾನು ಕುರುಬರು ಅಂದೆ.
ಓಕೆ ಓಕೆ ಅಂತಷ್ಟೇ ಹೇಳಿ ಸುಮ್ಮನಾದರು ಅವರು.
ಆದ್ರೆ ಅವರ ಪಕ್ಕ ಇದ್ದ ಇನ್ನೊಬ್ಬ
ಓಹ್! ಕುರಿ ಕಾಯೋರ ನೀವು ಅಂದ
ಒಂಥರಾ ವ್ಯಂಗ್ಯವಾಗಿ.

ನಂಗೆ ಈ ಜಾತಿ ಗೀತಿ ಅದ್ರೆಲೆಲ್ಲಾ ನಂಬಿಕೆ ಇಲ್ಲಾ.
ಈ ಭೂಮಿ ಮೇಲೆ ಇರೊ
ಎಲ್ಲರು ಮನುಷ್ಯ ಜಾತಿಗೆ ಸೇರಿದೋರು ಅಂದ್ಕೊಂಡಿರೋನು ನಾನು.
ಆದ್ರೆ ಅವತು ಮಾತ್ರ ಅವನು ವ್ಯಂಗ್ಯವಾಗಿ ಹೇಳಿದ್ದು ಯಾಕೊ ಮನಸಿಗೆ ನೋವಾಯ್ತು.
ನಾನು ತಿರುಗಿಸಿ ಒಂದ್ ಡೈಲಾಗ್ ಹೊಡೆದೆ
ಕೊಳ್ಳೇ ಹೊಡೆಯೋರೆ ಈ ದೇಶದ ತುಂಬಾ ತುಂಬ್ಕೊಂಡಿರುವಾಗ
ಕಾಯೋರು ಅಂತ ಹೇಳ್ಕೊಳೊಕ್ ಖುಷಿ ಆಗುತ್ತೆ ಸಾರ್ ಅಂತ.
ಅವನ ಬಾಯಿಂದ ಮಾತಿರಲಿಲ್ಲ.
ಜನ ಯಾಕ್ ಈತರ ಎಲ್ಲಾ ಕಡೆ ಜಾತಿ ಬೆರೆಸ್ತಾರೊ ಅಂತ ಗೊತ್ತಿಲಪ
ಒಬ್ಬ ಮನುಷ್ಯನ್ನ ಜಾತಿ ಆಧಾರದಲ್ಲಿ ಅಳೆಯೋಕು ಮುಂಚೆ ಅವನು ಕೂಡ ಒಬ್ಬ ಮನುಷ್ಯ ಅಂತ ಭಾವಿಸಿದ್ರೆ ಚೆನ್ನಾಗ್ ಇರುತ್ತೆ.
ಕೊನೇ ಹನಿ:
ಮನುಷ್ಯರಾಗಿ ಹುಟ್ಟಿದ್ದೀರಿ ಮನುಷ್ಯರಾಗೆ ಸಾಯಿರಿ
ಮನುಷ್ಯ ಜಾತಿಗಿಂತ ಶ್ರೇಷ್ಟವಾದದ್ದು ಯಾವುದು ಇಲ್ಲ.
-ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರ || ಪ ||
ಹುಟ್ಟಿದ ಯೋನಿಗಳಿಲ್ಲ ಮೆಟ್ಟಿದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ
 

‍ಲೇಖಕರು G

5 June, 2014

3 Comments

  1. Naveen

    ಬೇಕಾದನ್ನು ಬಿಟ್ಟು, ಬೇಡದ ವಿಷಯಗಳಿಗೆ ತಲೆ ಕೆಡಸಿಕೊಳ್ಳುವುದು ಹೆಚ್ಚಲ್ಲವೇ..? ಅದಕ್ಕೆ ಮಾಡಕೆ ಕೆಲಸ ಇಲ್ಲದಿದ್ದಾಗ ಇನ್ನೊಬ್ಬರನ್ನು ಕೆದಕೋಕೆ ಶುರು ಮಾಡ್ತಾರೆ…

  2. vidyashankar

    Thumbs up!

  3. Raj

    Those who talk about caste are those low level creatures who have nothing better to offer or talk.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading