ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕೊರವಂಜಿ' ಈಗ ಡಿವಿಡಿಯಲ್ಲಿ

ಇಪ್ಪತ್ತೈದು ವರ್ಷಗಳ ಕಾಲ ತನ್ನ ಸದಭಿರುಚಿಯ ಹಾಸ್ಯದ ಬರವಣಿಗೆಯಿಂದ ಜನರನ್ನು ರಂಜಿಸಿದ ‘ಕೊರವಂಜಿ’ ಮಾಸಪತ್ರಿಕೆ ಇದೀಗ ಹೊಸ ರೂಪು ಪಡೆದು ಮನೆಮನೆಗಳನ್ನು ಮುಟ್ಟಲಿದೆ. ‘ಕೊರವಂಜಿ’ ಮಾಸಪತ್ರಿಕೆಯ 25 ವರ್ಷಗಳ 300 ಸಂಚಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಳಗೊಂಡಿರುವ ಡಿವಿಡಿಯನ್ನು ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಇದೇ ಮಾರ್ಚ್ 27ರಂದು ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಭಾರತೀಯ ವಿದ್ಯಾಭವನದ ಖೀಂಚಾ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾರಂಭವನ್ನು ಕೊರವಂಜಿ ಅಪರಂಜಿ ಟ್ರಸ್ಟ್, ಭಾರತೀಯ ವಿದ್ಯಾಭವನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದು ಪ್ರೊ. ಅ.ರಾ. ಮಿತ್ರ, ಡಾ|| ಗುರುರಾಜ ಕರ್ಜಗಿ ಮತ್ತು ಶ್ರೀ ಶ್ರೀನಿವಾಸ ವೈದ್ಯ ‘ಕೊರವಂಜಿ’ಯ ಪರಂಪರೆಯ ಬಗ್ಗೆ ಮಾತನಾಡುವರು. ‘ಕೊರವಂಜಿ’ ಮಗಳಾಗಿ ಅದರ ಹಾಸ್ಯ ಪರಂಪರೆಯನ್ನೇ ಮುಂದುವರೆಸಿರುವ ‘ಅಪರಂಜಿ’ ಅಂದೇ ಇಂಟರ್ನೆಟ್ ಎಂಬ ಹಸೆಮಣೆಯನ್ನು ಏರಲಿದ್ದಾಳೆ. ‘ಅಪರಂಜಿ’ ಅಂತರ್ಜಾಲ ತಾಣದ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಕೆ. ಜಗದೀಶ್ ಪೈ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮನು ಬಳಿಗಾರ್, ನಿದರ್ೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಪಸ್ಥಿತರಿದ್ದರೆ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಎನ್. ರಾಮಾನುಜ ವಹಿಸಲಿದ್ದಾರೆ. ಅಂದು ಬಿಡುಗಡೆಯಾಗಲಿರುವ ಕೊರವಂಜಿ ಡಿವಿಡಿ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುವುದು.      ]]>

‍ಲೇಖಕರು G

21 March, 2011

3 Comments

  1. ಪಂಡಿತಾರಾಧ್ಯ

    ತುಂಬ ಸಂತೋಷ.ಕಾರ್ಯಕ್ರಮಕ್ಕೆ ಶುಭಾಶಯಗಳು.
    ಡಿವಿಡಿ ಪ್ರತಿ ನನಗೆ ಬೇಕು.

  2. ರಾಘವೇಂದ್ರ

    ದಯವಿಟ್ಟು .. ಯಾರಾದ್ರೂ ಅಂತರ್ಜಾಲ ತಾಣದ ವಿಳಾಸ ಗೊತ್ತಿದ್ರೆ ಕೊಡಿ …
    ಇಂತಿ
    ರಾಘವೇಂದ್ರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading