
ಸುಭಾಷ್ ರಾಜಮಾನೆ
ಮರಾಠಿಯ ಹೆಸರಾಂತ ಲೇಖಕ ನಂದಾ ಖರೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ಇರುವುದರಿಂದ ತನಗೆ ಬಂದಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎನ್ನುವ ದಿಟ್ಟತನ ತೋರಿದ್ದಾರೆ.
ನಂದಾ ಖರೆ ಅವರ ‘ಉದ್ಯಾ’ (ನಾಳೆ) ಎಂಬ ವಿಶಿಷ್ಠವಾದ ಕಥಾ ವಿನ್ಯಾಸವನ್ನು ಹೊಂದಿರುವ ಕಾದಂಬರಿಗೆ ಈ ಪುರಸ್ಕಾರ ಘೋಷಿತವಾಗಿತ್ತು. ಇವರು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲ. ಓದುಗರು ನೀಡಿರುವ ಪ್ರೀತಿಯೇ ಸಾಕು; ಅದರ ಮುಂದೆ ಯಾವುದೇ ಪ್ರಶಸ್ತಿ ದೊಡ್ಡದಲ್ಲ ಎಂದಿದ್ದಾರೆ. ನಂದಾ ಖರೆಯವರು ಸಾಹಿತ್ಯವನ್ನು ರಾಜಕೀಯ ಕ್ರಿಯೆ ಎಂದೇ ಭಾವಿಸಿದ್ದಾರೆ.
ಪ್ರಶಸ್ತಿ ಪಡೆಯಲು ಅಂತಃಸಾಕ್ಷಿಯನ್ನು ಮಾರಿಕೊಮಡಿರುವವರ ನಡುವೆ ಹಾಗೂ ಇಂದು ಪ್ರಶಸ್ತಿಗಾಗಿ ಲಾಬಿ ನಡೆಸುವವರ ನಡುವೆ ನಂದಾ ಖರೆ ಅವರು ನಿಜವಾದ ಲೇಖಕನ ಬದ್ಧತೆಯ ಪ್ರತೀಕರಾಗಿದ್ದಾರೆ; ಅನರ್ಹರಿಗೆ ಪ್ರಶಸ್ತಿಯನ್ನು ಶಿಫಾರಸು ಮಾಡುತ್ತಿರುವ ಲೇಖಕರಿಗೂ ನಂದಾ ಖರೆಯವರು ಮಾದರಿಯಾಗಿದ್ದಾರೆ.
ಜಗತ್ತಿನ ಯಾವ ಲೇಖಕನೂ ಪ್ರಶಸ್ತಿಯಿಂದ ದೊಡ್ಡ ಲೇಖಕನಾಗಿಲ್ಲ. ನಿಜವಾದ ಸಾಹಿತ್ಯ ಕೃತಿ ಓದುಗರ ಹೃದಯದಲ್ಲಿರುತ್ತದೆ. ಪ್ರಶಸ್ತಿಗಾಗಿ ನಡೆಯುವ ರಾಜಕೀಯಗಳ ಇಂದಿನ ಸಂದರ್ಭದಲ್ಲಿ ನಂದಾ ಖರೆಯವರ ನಿರ್ಧಾರವು ಆತ್ಮಗೌರವ ಉಳಿದಿರುವುದಕ್ಕೆ ಸಾಕ್ಷಿಯಾಗಿದೆ…









“ಅನರ್ಹರಿಗೆ ಪ್ರಶಸ್ತಿಯನ್ನು ಶಿಫಾರಸು ಮಾಡುತ್ತಿರುವ ಲೇಖಕರಿಗೂ ನಂದಾ ಖರೆಯವರು ಮಾದರಿಯಾಗಿದ್ದಾರೆ” what does it mean?