ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ನಲ್ಲತಂಬಿ ಅನುವಾದ ಸರಣಿ- ಲಂಚ ನೀಡಿದ ಕ್ಲೈವ್

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

13

18 ತಿಂಗಳ ಪ್ರಯಾಣದ ನಂತರ, ಕ್ಲೈವ್, ಮದರಾಸಿಗೆ ಬಂದು ತಲುಪಿದ. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಅವನಿಗೆ ಕೊಡಲ್ಪಟ್ಟ ಸಂಬಳ ವರ್ಷಕ್ಕೆ ಐದು ಪೌಂಡ್. ಅಂದರೆ ಭಾರತದ ಹಣಕ್ಕೆ 50 ರೂಪಾಯಿಗಳು. ಅಂದು ಕಂಪನಿಯ ಉನ್ನತ ಅಧಿಕಾರಿಗಳಿಗೆ ನೀಡಲ್ಪಟ್ಟ ಸಂಬಳ 300 ಪೌಂಡ್. ಅದನ್ನು ಪಡೆಯಲು ಅವರು ನಾಲ್ಕು ವರ್ಷಗಳು ಕೆಲಸ ಮಾಡಿ ವೃತ್ತಿಯಲ್ಲಿ ಉನ್ನತಿಯನ್ನು ಪಡೆಯಬೇಕು. ಈ ಐದು ಪೌಂಡ್ ಸಂಬಳದೊಂದಿಗೆ ವಸತಿ, ಆಹಾರ ಎರಡೂ ಉಚಿತ. 

ಆದರೆ ಇಸ್ತ್ರಿ ಖರ್ಚು, ಮೇಣದಬತ್ತಿ, ಸಣ್ಣಪುಟ್ಟ ಸಾಮಾನುಗಳು ಎಲ್ಲವನ್ನೂ ಅವರೇ  ಕೊಂಡುಕೊಳ್ಳಬೇಕು. ಕಂಪನಿಯ ನೌಕರರಿಗೆ ಮೂರು ತಿಂಗಳಿಗೊಮ್ಮೆ ಬೋನಸ್ ಎಂದು ಒಂದು ಮೊತ್ತವನ್ನು ಕೊಡುತ್ತಿದ್ದರು. ಅದನ್ನು ಬಂಡವಾಳವಾಗಿ ಹೂಡಿ ಭಾರತೀಯ ವಸ್ತುಗಳನ್ನು ಕೊಂಡು ಇಂಗ್ಲೆಂಡಿಗೆ ಹಡಗಿನಲ್ಲಿ ಕಳುಹಿಸಿ ವ್ಯಾಪಾರ ಮಾಡಿ ಸಂಪಾಧಿಸಿಕೊಳ್ಳಬಹುದು.

ಕೆಲವು ತಿಂಗಳುಗಳಲ್ಲಿ ಕ್ಲೈವ್, ಕಂಪನಿಯ ಉನ್ನತ ಅಧಿಕಾರಿಗಳ ಬಲಹೀನತೆಗಳನ್ನು ಗುರುತಿಸಿ ಆವರಿಗೆ ತಕ್ಕ ಕಾಣಿಕೆಗಳನ್ನು  ಕೊಟ್ಟು, ತನ್ನ ಪದವಿ ಉನ್ನತಿ ಪಡೆಯಲು ಬಳಸಿಕೊಂಡ.  ಕಲ್ಕತ್ತಾದಲ್ಲಿ ಕ್ಲೈವ್ ಕೆಲವು ಕಾಲ ಕೆಲಸ ಮಾಡುತ್ತಿದ್ದಾಗ, ಯುದ್ಧ ಕೈದಿಯಾಗಿ ಸೆರೆಹಿಡಿಯಲ್ಪಟ್ಟ. ಒತ್ತೆಯಾಳಾಗಲು  ಇದ್ದಾಗ ಲಂಚ ಕೊಟ್ಟು ತಪ್ಪಿಸಿಕೊಂಡು ಬಂದ  ಕ್ಲೈವ್-ನ ತಂತ್ರವನ್ನು ಕಂಪನಿ ಬಹಳವಾಗಿ  ಮೆಚ್ಚಿಕೊಂಡಿತು. 

ಅವನಿಗೆ ಹೊಸ ಪದವಿಯನ್ನು ನೀಡಿತು. ಈ ಪರಿಸ್ಥಿತಿಯಲ್ಲಿ ಕ್ಲೈವ್ ತನ್ನ ಗೆಳೆಯನಾದ ಎಡ್ಮಂಡ್ ಮಸ್ಕಿಯ  (Edmond Muskie) ಸೋದರಿ ಮಾರ್ಗ್ರೇಟ್-ಳ (Margret) ಭಾವಚಿತ್ರ ಒಂದನ್ನು ನೋಡಿದ. ಅವಳನ್ನು ಮದುವೆಯಾಗುವುದಾಗಿ ಹೇಳಿದ. ಎಡ್ಮಂಡ್-ನ ಅಧಿಕಾರವನ್ನು ಬಳಸಿಕೊಂಡು ತನ್ನನ್ನು ಉನ್ನತಿಗೊಳಿಸಿಕೊಳ್ಳಬೇಕೆಂಬ ಆಸೆಯೇ ಕ್ಲೈವ್-ಗೆ ಇತ್ತು. 1753ನೇಯ ಇಸವಿ ಚೆನ್ನೈ ಪವಿತ್ರ ಜಾರ್ಜ್ ಕೋಟೆಯಲ್ಲಿದ್ದ ದೇವಾಲಯದಲ್ಲಿ, ಮಾರ್ಗ್ರೇಟ್-ಳನ್ನು ಕ್ಲೈವ್ ಮದುವೆಯಾದ. ಕೆಲವು ದಿನಗಳಲ್ಲಿ ಬೊಂಬಾಯಿಗೆ ಹೋಗಿ ದಾಂಪತ್ಯ ಜೀವನವನ್ನು ಪ್ರಾರಂಭಿಸಿದ. 

ರಾಬರ್ಟ್ ಕ್ಲೈವ್ ದೇಶದ ಆಂತರಿಕ ಸಮಸ್ಯೆಗಳನ್ನು ಬಳಸಿಕೊಂಡು ಎರಡೂ ಕಡೆಯಿಂದ ಹಣ ಕಸಿಯುವ ಮಾರ್ಗವನ್ನು ಕಂಡುಕೊಂಡನು. ನವಾಬರ ಸಮಸ್ಯೆಗಳನ್ನು ತೀರಿಸುವುದಾಗಿ ಹೇಳಿ, ಎರಡೂ ಕಡೆಯಿಂದ ಹಣ ಪಡೆದುಕೊಂಡು ಸಹಾಯಮಾಡುವುದಾಗಿ ನಟಿಸಿ, ಇಬ್ಬರನ್ನೂ ಅಳಿಸಿ ತಾನೇ ಸಂಪೂರ್ಣವಾಗಿ ಅಧಿಕಾರವನ್ನು ಕೈವಶಮಾಡಿಕೊಂಡ. ಅಡ್ಡ ದಾರಿಯಲ್ಲಿ ಸಂಪಾದಿಸಿದ ಹಣವನ್ನು ರಾಜಕೀಯ ಸಂಚುಗಳನ್ನು ಮಾಡಲು ಬಳಸಿಕೊಂಡ. ಅದರ ಮೂಲಕ ಹೆಚ್ಚು ಆಧಾಯ ಗಳಿಸಬಹುದೆಂಬ ಅವನ ನಂಬಿಕೆ ನೆನಸಾಯಿತು. ಅದರೊಂದಿಗೆ, ಬಂಗಾಳ, ಬಿಹಾರಿನಲ್ಲಿ ತೆರಿಗೆ ವಸೂಲಿ ಮಾಡುವ ಸಂಪೂರ್ಣ ಅಧಿಕಾರವನ್ನು ತನ್ನ ಬಳಿ ಇರಿಸಿಕೊಂಡ ಕಾರಣದಿಂದ ಅವನಿಂದ ಬಹಳ ಸುಲಭವಾಗಿ ಹಣ ಗಳಿಸಲು ಸಾಧ್ಯವಾಯಿತು. 

1760-ರಲ್ಲಿ ರಾಬರ್ಟ್ ಕ್ಲೈವ್ ಇಂಗ್ಲೆಂಡಿಗೆ ಮರಳಿದಾಗ ಅವನ ಬಳಿ ಇದ್ದ ಹಣ 2,34,000 ಪೌಂಡುಗಳು. ಅಂದರೆ ಭಾರತೀಯ ಮೌಲ್ಯಕ್ಕೆ  ಒಂದು ಕೋಟಿ 81 ಲಕ್ಷದ 93,554 ರೂಪಾಯಿಗಳು. 

1773ರಲ್ಲಿ ಇಂಗ್ಲೆಂಡಿನ ಸಂಸತ್ತಿನಲ್ಲಿ ಕ್ಲೈವ್ ಮೇಲೆ ಹೊರಿಸಲಾದ ಅಪರವಾಧಗಳ  ಒಂದು ಅಂಕಿಅಂಶವನ್ನು  ಕಾಣಲು ದೊರಕುತ್ತದೆ. ಅದರ ಪ್ರಕಾರ, ಅಂದಿನ ಬಂಗಾಳದ ಒಟ್ಟು ವರಮಾನ, 1 ಕೋಟಿ, 30 ಲಕ್ಷದ 66,761 ರೂಪಾಯಿಗಳು. ಖರ್ಚು, 9 ಲಕ್ಷದ 27,609 ರೂಪಾಯಿಗಳು. ರಾಬರ್ಟ್ ಕ್ಲೈವ್ ಗಳಿಸಿದ ಆಧಾಯ 2,50,000 ರೂಪಾಯಿಗಳು. ಅಂತಹ  ಸ್ವಾರ್ಥಿ ರಾಬರ್ಟ್ ಕ್ಲೈವ್.

2004ನೇಯ ಇಸವಿಯಲ್ಲಿ ಲಂಡನಿನಲ್ಲಿರುವ ಸೂತ್ಬೇ (Sotheby) ಎಂಬ ಹರಾಜು ಸಂಸ್ಥೆ, ಪುರಾತನ ವಸ್ತುಗಳನ್ನು ಹರಾಜು ಹಾಕಿತು. ಅದರಲ್ಲಿ, ರಾಬರ್ಟ್ ಕ್ಲೈವ್ ಬಳಿ ಇದ್ದ ಮೊಗಲರ ಕಾಲದ ವಜ್ರ, ಮಾಣಿಕ್ಯದ ಹರಳುಗಳಿಂದ ಅಲಂಕರಿಸಲ್ಪಟ್ಟ ಕಾರಂಜಿಯೂ,  ಬಂಗಾರದ ಹುಕ್ಕ ಒಂದೂ  5.2 ಮಿಲಿಯನ್ ಡಾಲರಿಗೆ ಹರಾಜಿನಲ್ಲಿ ಮಾರಲಾಯಿತು. 17ನೇಯ ಶತಮಾನಕ್ಕೆ ಸೇರಿದ ಆ ಹುಕ್ಕವನ್ನು ಭಾರತದಲ್ಲಿ ನವಾಬರ ಬಳಿಯಿಂದ ಅವನು ಕಸಿದುಕೊಂಡದ್ದು. 

ಕ್ಲೈವ್, ಲಂಚದ ಹಣದಿಂದ ತನ್ನ ತಂದೆಯ ಸಾಲವನ್ನು ತೀರಿಸಿ, ಸೋದರಿಯರ ಮದುವೆಯನ್ನು ಸಂಭ್ರಮದಿಂದ ಆಚರಿಸಿ. ದೊಡ್ಡ ಫಾರಂ ಮನೆಗಳನ್ನು ಕೊಂಡು ಕೊಂಡು, ಇಂಗ್ಲೆಂಡಿನಲ್ಲಿ ದೊಡ್ಡ ಸಿರಿವಂತರಲ್ಲಿ ಒಬ್ಬನಾಗಿ ಮೆರೆದ. 

ಇಂಗ್ಲೆಂಡಿನ ರಾಜಕೀಯದಲ್ಲಿ ಪ್ರಭಾವಶಾಲಿಯಾಗಲು ದೊಡ್ಡ ಮೊತ್ತವನ್ನು ಖರ್ಚು ಮಾಡಿ ಸದಸ್ಯನಾದ. ಲಂಡನ್ ನಗರದ ಪ್ರಮುಖ ಸ್ಥಳದಲ್ಲಿ 92,000 ಪೌಂಡ್ ಕೊಟ್ಟು ದೊಡ್ಡ ಮಾಳಿಗೆಯೊಂದನ್ನು ಖರೀದಿಸದ. 1773ರಲ್ಲಿ ಇಂಗ್ಲೆಂಡಿನ ಸಂಸತ್ತಿನಲ್ಲಿ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಇಟಾಲಿಯಲ್ಲಿ ಬಹಳ ದೊಡ್ಡ ದರೋಡೆ ಮಾಡಿದ ಕ್ಲೈವ್ ಎಂಬ ಅಪರಾಧ ಹೊರಿಸಲಾಯಿತು. ಅದರ ಕುರಿತು ಕಟುವಾದ ವಾದ ವಿವಾದಗಳು ನಡೆಯಿತು. ಕ್ಲೈವ್, ನಾನು ಅಪರಾಧಿಯಾಗಿದ್ದರೆ ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಿ. ನನ್ನ ಆತ್ಮ ಗೌರವವವನ್ನು ಕಾಪಾಡಿ ಎಂದು ನಟಿಸಿದ. 

ಅಪರಾಧದಿಂದ ಹೊರಬಂದರೂ, ಮನಃಸಾಕ್ಷಿಯಿಯಿಂದ  ಬಿಡುಗಡೆ ಹೊಂದಲು ಆಗಲಿಲ್ಲ. ಅವನ ಆರೋಗ್ಯ ಮೆಲ್ಲಗೆ ಕ್ಷೀಣಿಸಲು ತೊಡಗಿತು. ರಕ್ತದೊತ್ತಡ , ನಿದ್ರಾಹೀನತೆಯಿಂದ ಅವಸ್ಥೆಗೆ ಒಳಗಾದ. ಗಾಲ್ ಬ್ಲಾಡರ್ ಖಾಯಿಲೆ ಹೆಚ್ಚಾಯಿತು. ಸಾವಿನೊಂದಿಗೆ ಹೋರಾಡಿ ಸತ್ತ  ಕ್ಲೈವ್, ತನ್ನ ಗತ ಕಾಲ ಭಾರತವನ್ನು ಕೊಳ್ಳೆ ಹೊಡೆದ ಕಾಲ ಎಂಬುದನ್ನು ಅರಿತಿದ್ದ. ಅವನ ಪತ್ರಗಳೂ ಡೈರಿಯೂ ಅದನ್ನು ಸ್ಪಷ್ಟವಾಗಿ ಪ್ರಕಟಿಸುತ್ತವೆ. 

ಕ್ಲೈವ್-ಅನ್ನು ನಾಯಕನಾಗಿ ಕೊಂಡಾಡಿದ ಈಸ್ಟ್ ಇಂಡಿಯಾ ಕಂಪನಿ ಅವನನ್ನು ಒಬ್ಬ ದ್ರೋಹಿ ಎಂದು ಅಪರಾಧ ಹೊರಿಸಿತು. ತನ್ನ ಉಳಿತಾಯವನ್ನು ಭಾರತದಿಂದ ಸುಲಭವಾಗಿ ಇಂಗ್ಲೆಂಡಿಗೆ ತೆಗೆದುಕೊಂಡು ಹೋಗಲು ವಜ್ರಗಳಾಗಿ ಬದಲಾಯಿಸಿಕೊಂಡನು ಎಂದು ಇತಿಹಾಸದ ಒಂದು ಟಿಪ್ಪಣಿಯಲ್ಲಿ ಕಾಣಲು ಸಿಗುತ್ತದೆ. ಅದರಂತೆಯೇ, ಅವನು 1,400 ಚಿನ್ನದ ಗಟ್ಟಿಗಳನ್ನು ಹೊತ್ತುಕೊಂಡು ಹೋದ ಡೋನಿಂಗ್ಟನ್  (Donington), ಬಿರುಗಾಳಿಗೆ ಸಿಕ್ಕಿಹಾಕಿಕೊಂಡು ಮುಳುಗಿಹೋಯಿತು.  ಕಡಲಿನಲ್ಲಿ ಮುಳುಗಿಹೋದ ಆ ಬಂಗಾರದ ಒಂದು ಭಾಗವನ್ನು ಇಂದಿಗೂ ಹುಡುಕುತ್ತಿದ್ದಾರೆ. 

ಕ್ಲೈವ್-ನ ಸಮಕಾಲಿನನಾದ ಜೋಸೆಫ್ ಮಾರ್ಕೆಸ್  ದುಯ್ಪ್ಲೆಕ್ಸ್ ಒಬ್ಬ ವ್ಯಾಪಾರಿಯ ಪುತ್ರ. 1720ರಲ್ಲಿ ಪುದುಚೇರಿಯನ್ನು ಆಳಿದ ಫ್ರೆಂಚ್ ಗವರ್ನರಿನ ಕೌನ್ಸಿಲ್ ಸದಸ್ಯನಾಗಿ ಸೇರಿಕೊಂಡ ದುಯ್ಪ್ಲೆಕ್ಸ್ , 1742ರಲ್ಲಿ ಪುದುಚೇರಿಯ ಗವರ್ನರ್- ಆಗಿ ಪದವಿ ವಹಿಸಿಕೊಂಡ. ಬ್ರಿಟೀಷರಂತೆಯೇ  ದೇಶ ಆಕ್ರಮಿಸುವ ಪೋಟಿಯಲ್ಲಿ ತೊಡಗಿಕೊಂಡ. ದೇಶದ ಆಂತರಿಕ ಸಮಸ್ಯೆಗಳನ್ನು ಬಳಸಿಕೊಂಡು ತನ್ನ ಹಣ ದೋಚುವ ಕೆಲಸದಲ್ಲಿ ತೊಡಗಿಕೊಂಡ. ಅವನ ಬಗ್ಗೆ ದುಭಾಷಿಯಾಗಿದ್ದ ಆನಂದರಂಗಮ್ ಪಿಳ್ಳೈ ತನ್ನ ಡೈರಿಯಲ್ಲಿ ಹೀಗೆ ಬರೆದಿದ್ದಾರೆ. 

ದುಯ್ಪ್ಲೆಕ್ಸ್,,  ಳಾನ್-ಅನ್ನು (Jeanne Albert) ಮದುವೆ ಮಾಡಿಕೊಂಡದ್ದು ಒಂದು ಪ್ರತ್ಯೇಕ ಕತೆ. ಳಾನ್  ಅಪ್ಪ ಆಲ್ಬರ್ಟ್ (Albert) ವೈದ್ಯಕೀಯ ಸೇವೆ ಮಾಡಲು ಪುದುಚೇರಿಗೆ ಬಂದಾಗ, ಎಲಿಜಬೆತ್ (Elizebeth)   ಎಂಬ ಯುವಕಿಯನ್ನು ಬೇಟಿಯಾಗುತ್ತಾರೆ. ಅವಳು ಒಬ್ಬ ಪೋರ್ಚುಗೀಸಿಯ ತಂದೆಗೂ ಭಾರತದ ವಂಶಾವಳಿಯ ಹೆಣ್ಣಿಗೂ ಹುಟ್ಟಿದವಳು. ಅವಳನ್ನು ಮದುವೆಯಾಗುತ್ತಾನೆ. ಳಾನ್, ಈ ದಂಪತಿಗಳಿಗೆ ಹುಟ್ಟಿದ ಎಂಟು ಮಕ್ಕಳಲ್ಲಿ ಹಿರಿಯಳು. 

1706-ನೇಯ  ಇಸವಿಯಲ್ಲಿ ಳಾನ್ ಹುಟ್ಟಿದಳು. 13-ನೇಯ ವಯಸ್ಸಿನಲ್ಲಿ ಫ್ರೆಂಚ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಾಪಾರಿಯಾದ ವೇನ್ಸನ್ (Venson) ಅನ್ನು ಮದುವೆಯಾಗುತ್ತಾಳೆ. ವೇನ್ಸನ್ ಪಾಲುದಾರನಾದ ದುಯ್ಪ್ಲೆಕ್ಸ್, ಳಾನ್ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಪ್ರೀತಿಸುತ್ತಾನೆ.  ಕಲ್ಕತ್ತಾ ಸಮೀಪದಲ್ಲಿರುವ ಚಂದ್ರನಾಗೂರಿಗೆ ದುಯ್ಪ್ಲೆಕ್ಸ್–ಅನ್ನು ವರ್ಗಾವಣೆ ಮಾಡಲಾಗುತ್ತದೆ. ಳಾನ್ ಮೇಲಿನ ಪ್ರೀತಿಯಿಂದ, ವೇನ್ಸನ್ ಅನ್ನು ಸಹ ತಾನಿರುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. 

ದುಯ್ಪ್ಲೆಕ್ಸ್ ಸರಕು ಹೊತ್ತುಕೊಂಡುಹೋಗುವ ಹಡಗಿನಲ್ಲಿ ವೇನ್ಸನ್-ಅನ್ನು ಕಳುಹಿಸಿ, ಳಾನ್ ಪ್ರೀತಿಯಲ್ಲಿ ಮುಳುಗಿಹೋಗುತ್ತಾನೆ. 1739ನೇಯ ಇಸವಿ ಸೆಪ್ಟಂಬರ್ 26ರಂದು ತನ್ನ 60ನೇಯ ವಯಸ್ಸಿನಲ್ಲಿ ವೇನ್ಸನ್ ತೀರಿಕೊಳ್ಳುತ್ತಾನೆ. ಅದರ ನಂತರ, ದುಯ್ಪ್ಲೆಕ್ಸ್, ಳಾನ್-ಅನ್ನು ಸಂಪ್ರದಾಯಿಕವಾಗಿ ಮದುವೆಯಾಗುತ್ತಾನೆ. ಆಗ ಅವಳು 11 ಮಕ್ಕಳ ತಾಯಿ, ವಯಸ್ಸು 33. 

ದುಯ್ಪ್ಲೆಕ್ಸ್, ಮದುವೆಯಾದ ಕೆಲವು ವಾರಗಳಲ್ಲಿ ಪುದುಚೇರಿಯ ಗವರ್ನರಾಗಿ ಪದವಿ ವಹಿಸಿಕೊಳ್ಳುತ್ತಾನೆ. ಳಾನ್, ಯಾವ ನಗರದಲ್ಲಿ ಸಾಮಾನ್ಯ ವ್ಯಾಪಾರಿಯ ಹೆಂಡತಿಯಾಗಿದ್ದಳೋ, ಅದೇ ನಗರದ ಗವರ್ನರ್ ಹೆಂಡತಿಯಾಗಿ ಬರುತ್ತಾಳೆ. ಚಿಕ್ಕ ವ್ಯಯಸ್ಸಿನಿಂದ ಬಡತನ, ದುಃಖವನ್ನು ಅನುಭವಿಸಿದ ಅವಳು, ಪದವಿಯನ್ನು ಬಳಸಿಕೊಂಡು ಹಣ ದೋಚಲು  ಪ್ರಾರಂಭಿಸುತ್ತಾಳೆ. ಸರಕಾರದ ಪ್ರಮುಖ ಆಙ್ಞೆಗಳನ್ನು ಅವಳೇ ಹೊರಡಿಸುತ್ತಾಳೆ. ತನಗಾಗಿ ಪ್ರತ್ಯೇಕ ವಿಶ್ವಾಸಿಗಳನ್ನು ತನ್ನ ಸುತ್ತ ಇರಿಸಿಕೊಂಡು ಕಟ್ಟಳೆಗಳನ್ನು ನೆರವೇರಿಸುವಂತೆ ಮಾಡುತ್ತಾಳೆ.

ಜೆಸುವಿಟ್ ಮಿಷನರಿಗಳ (Jesuit Missionary) ಜತೆಯಲ್ಲಿ ಸ್ನೇಹವಾಗಿದ್ದ ಳಾನ್, ಅವರಿಗೆ ಹಳ್ಳಿಗಳನ್ನು ದಾನವಾಗಿ ನೀಡುತ್ತಾಳೆ. ಮರಕ್ಕಾಣಮ್, ಸೆಯ್ಯಾರು, ಕಾದಪ್ಪಾಕ್ಕಮ್ ಪ್ರದೇಶದ ಊರುಗಳನ್ನು ಮಿಷಿನರಿಗಳ ವಶಕ್ಕೆ ಒಪ್ಪಿಸಲಾಗುತ್ತದೆ. ಅದೇ ಸಮಯ ಹಿಂದು ದೇವಸ್ಥಾನಗಳನ್ನು ಕೆಡವ ಬೇಕೆಂಬ ಆದೇಶವನ್ನೂ ನೀಡುತ್ತಾಳೆ. ಪುದುಚೇರಿಯಲ್ಲಿರುವ ಶಿವನ ದೇವಸ್ಥಾನವನ್ನು ಕೆಡವಬೇಕೆಂಬ ಆದೇಶವನ್ನು ಹೊರಡಿಸುತ್ತಾಳೆ. ಪುದುಚೇರಿಯ ಶಿವನ ದೇವಸ್ಥಾನವನ್ನು ಕೆಡವಳು ದುಯ್ಪ್ಲೆಕ್ಸ್–ಅನ್ನು   ಇವಳೇ ಪ್ರೇರಿಪಿಸಿದ್ದಳು  ಎನ್ನುತ್ತಾರೆ. 

ದುಯ್ಪ್ಲೆಕ್ಸ್ ಜತೆಯ ತನ್ನ ವಿವಾಹ ಜೀವನದಲ್ಲಿ ಳಾನ್, ತನ್ನ ಹನ್ನೆರಡನನೇಯ ಮಗುವನ್ನು ಹೆತ್ತಳು. ಆ ಮಗು  ಹುಟ್ಟಿದ ಕೆಲವು ದಿನಗಳಲ್ಲಿಯೇ ಮರಣಹೊಂದಿತು. ತನ್ನ ಮೊದಲ ವ್ಯಾಪಾರಿ ಪತಿಗೆ ವಾರಿಸು ಇಲ್ಲದ ಕಾರಣ ಅವನ ಆಸ್ತಿಗಳನ್ನು ಕಬಳಿಸಿ ತನ್ನದಾಗಸಿಕೊಳ್ಳುತ್ತಾಳೆ. ಗಂಡನ ಗವರ್ನರ್ ಪದವಿಯನ್ನು ದುರ್ಬಳಕೆ ಮಾಡಿಕೊಂಡು ಬೆದರಿಸಿ ತನಗೆ ಬೇಕಾದ ಬಂಗಾರ, ಬೆಳ್ಳಿಗಳನ್ನು ತೆಗೆದುಕೊಳ್ಳುತ್ತಾಳೆ. ಳಾನ್, ಭ್ರಷ್ಟಾಚಾರದ ದೇವತೆಯಂತಯಾಗುತ್ತಾಳೆ. 

ರಾಜಕೀಯ ಜೀವನದಲ್ಲಿ ದುಯ್ಪ್ಲೆಕ್ಸ್ –ಗೆ ಅನಿರೀಕ್ಷಿತವಾದ ಸೋಲು ಉಂಟಾಗುತ್ತದೆ. ವಿಚಾರಣೆಗಾಗಿ ಫ್ರಾನ್ಸ್-ಗೆ ಕರೆಸಿಕೊಳ್ಳುತ್ತಾರೆ. ತನ್ನೊಂದಿಗೆ ಬರಬೇಡ ಎಂದು ದುಯ್ಪ್ಲೆಕ್ಸ್ ಹೇಳಿದರೂ, ಸಂದಿಗ್ಧ ಪರಿಸ್ಥಿತಿಯಲ್ಲಿ ಜತೆ ನಿಲ್ಲುವುದಾಗಿ ಹೇಳಿ ಳಾನ್ ಸಹ ಫ್ರಾನ್ಸ್-ಗೆ ಹೊರಡುತ್ತಾಳೆ. ತನ್ನ 50ನೇಯ  ವಯಸ್ಸಿನಲ್ಲಿ ಅಲ್ಲೇ ತೀರಿಕೊಳ್ಳುತ್ತಾಳೆ. 

ಭಾರತವನ್ನು ತನ್ನದಾಗಿಸಿಕೊಳ್ಳಬೇಕೆಂದುಕೊಂಡ ಕ್ಲೈವ್, ಆತ್ಮಹತ್ಯೆ ಮಾಡಿಕೊಂಡ ಕಾರಣದಿಂದ ದೇವಾಲಯದಲ್ಲಿ ಅಂತ್ಯಕ್ರಿಯೆಗಳು ನಡೆಸಲಾಗುವುದಿಲ್ಲ. ಆತ್ಮಹತ್ಯೆಯನ್ನು ದೇವಾಲಯಗಳು ಒಪ್ಪಿಕೊಳ್ಳದ ಕಾರಣ, ಅವನ ಸಮಾಧಿಯ ಮೇಲೆ ಕೆತ್ತುವ ಕಲ್ಲನ್ನೂ ಸಹ ಕೊಡುವುದಿಲ್ಲ. ಗುರುತಿಲ್ಲದ ಒಂದು ಹೆಣವಾಗಿಯೇ ಅವನು ಮಣ್ಣಿನಲ್ಲಿ ಹೂತುಹೋಗುತ್ತಾನೆ. ಇಂದಿರುವ ಸಮಾಧಿ ನಂತರ ಕಟ್ಟಲ್ಪಡುತ್ತದೆ. ಇದೇ  ಪರಿಸ್ಥಿತಿಯೇ ದುಯ್ಪಲೆಕ್ಸಿಗೂ ನಡೆಯಿತು. ಇಂದು, ಪುದುಚೇರಿಯ ಸಮುದ್ರ ತೀರದಲ್ಲಿರುವ ಅವನ  ಪ್ರತಿಮೆಯನ್ನು, ಬಹಳ ವರ್ಷಗಳ ನಂತರ ಅವನ ನೆನಪಿಗಾಗಿ ನಿರ್ಮಾಣಿಸಲಾಗುತ್ತದೆ! 

ರಾಜಕೀಯದಲ್ಲಿರುವವವರಿಗೆ ಧರ್ಮ, ಪ್ರಾಮಾಣಿಕತೆ ಅವಶ್ಯಕ ಎನ್ನುತ್ತದೆ ಶಿಲಪ್ಪದಿಗಾರಂ. ಅದು ತಪ್ಪಿದರೆ ಸಾವಿನ ನಂತರವೂ  ಅವಮಾನವನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬುದೇ ಸತ್ಯ. ಲಂಚ, ಭ್ರಷ್ಟಾಚಾರ ಎಂದು ತನ್ನ ಸ್ವಂತ ಲಾಭಕ್ಕಾಗಿ ಆಸ್ತಿ ಮಾಡಿಕೊಂಡ ಕ್ಲೈವ್, ಳಾನ್ ಆ ಧರ್ಮವನ್ನು ಪಾಲಿಸದೆ ಹೋದುದರಿಂದ ಅಳಿದುಹೋಗುತ್ತಾರೆ. ಸಾವಿನ ನಂತರವೂ ಕೆಲವರನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂಬುದೇ ಇಬ್ಬರ ಬದುಕಿನಲ್ಲೂ ನಡೆದಿರುವುದು!

| ಇನ್ನು ನಾಳೆಗೆ |

‍ಲೇಖಕರು Admin

7 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading