ಕೆ ಎಸ್ ನಿಸಾರ್ ಅಹ್ಮದ್ ಇನ್ನಿಲ್ಲ

ಕೆ. ಎಸ್. ನಿಸಾರ್ ಅಹಮದ್

Jump to navigationJump to search

ಪ್ರೊ. ಕೆ.ಎಸ್.ನಿಸಾರ್ ಅಹಮದ್

ಪ್ರೊ. ಕೆ.ಎಸ್. ನಿಸಾರ್ ಅಹಮದ್
ಜನನ 5 ಫೆಬ್ರುವರಿ 1936
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ವೃತ್ತಿ ಸಾಹಿತಿ, ಪ್ರೊಫೆಸರ್
ಭಾಷೆ ಕನ್ನಡ
ರಾಷ್ಟ್ರೀಯತೆ ಭಾರತ
ಪ್ರಕಾರ/ಶೈಲಿ Fiction
ಸಾಹಿತ್ಯ ಚಳುವಳಿ ನವ್ಯ ಕಾವ್ಯ
ಪ್ರಮುಖ ಕೆಲಸ(ಗಳು) ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು) ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)

ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು ‘ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್’.

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

ನಿಸಾರ್ ಅಹಮದ್ [೧] ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.’ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

  • ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.[೨]
  • ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
  • ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
  • ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
  • ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

ಕೃತಿಗಳು

ಕವನ ಸಂಕಲನಗಳು

  • ಮನಸು ಗಾಂಧಿ ಬಜಾರು (೧೯೬೦)[೩]
  • ನೆನೆದವರ ಮನದಲ್ಲಿ (೧೯೬೪)
  • ಸುಮಹೂರ್ತ (೧೯೬೭)
  • ಸಂಜೆ ಐದರ ಮಳೆ (೧೯೭೦)
  • ನಾನೆಂಬ ಪರಕೀಯ (೧೯೭೨)
  • ಆಯ್ದ ಕವಿತೆಗಳು (೧೯೭೪)
  • ನಿತ್ಯೋತ್ಸವ (೧೯೭೬)
  • ಸ್ವಯಂ ಸೇವೆಯ ಗಿಳಿಗಳು (೧೯೭೭)
  • ಅನಾಮಿಕ ಆಂಗ್ಲರು(೧೯೮೨),
  • ಬರಿರಂತರ (೧೯೯೦)
  • ಸಮಗ್ರ ಕವಿತೆಗಳು (೧೯೯೧)
  • ನವೋಲ್ಲಾಸ (೧೯೯೪)
  • ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  • ಅರವತ್ತೈದರ ಐಸಿರಿ(೨೦೦೧)
  • ಸಮಗ್ರ ಭಾವಗೀತೆಗಳು(೨೦೦೧)
  • ಪ್ರಾತಿನಿಧಿಕ ಕವನಗಳು(೨೦೦೨)
  • ನಿತ್ಯೋತ್ಸವ ಕವಿತೆ [೪]

ಗದ್ಯ ಸಾಹಿತ್ಯ

ಪ್ರಶಸ್ತಿ ಪುರಸ್ಕಾರಗಳು

‍ಲೇಖಕರು avadhi

May 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: