ಮರಾಠಿ : ವಿಜಯ್ ತೆ0ಡೂಲ್ಕರ್
ಕನ್ನಡಕ್ಕೆ : ಗೀತಾ ತೆಕ್ಕೆವಾರಿ, ನಿರ್ದೇಶನ : ಪ್ರದೀಪ್ ತಿಪಟೂರು.
2011 ರಲ್ಲಿ ಉತ್ಸಾಹಿ ಯುವ ಕಲಾವಿದರೆಲ್ಲಾ ಸೇರಿ ಕಟ್ಟಿದ ತ0ಡ ವೈಖರಿ ಥಿಯೇಟರ್. ಪ್ರಯೋಗಾತ್ಮಕ ಕೃತಿಗಳನ್ನು ರ0ಗಕ್ಕೆ ತ0ದು,ಪ್ರಯೋಗಶೀಲತೆಯನ್ನು ಜೀವ0ತವಾಗಿಡುವುದು ವೈಖರಿಯ ಮುಖ್ಯ ಉದ್ದೇಶಗಳಲ್ಲೊ0ದು.
ನಾಟಕದ ಬಗ್ಗೆ ಒ0ದೆರಡು ಮಾತು : 1972ರಲ್ಲಿ ಬರೆಯಲ್ಪಟ್ಟ ನಾಟಕ ಮರಾಠಿಯಲ್ಲಿ ನಾಟಕ ಸೆನ್ಸಾರ್ ಮ0ಡಳಿಯಿ0ದ ನಿಷೇದಕ್ಕೆ ಒಳಪಟ್ಟಿತು. ನ0ತರ ತೀವ್ರ ಪ್ರತಿಭಟನೆಯ ನಡುವೆಯೇ ಕೋರ್ಟ್ ಮೆಟ್ಟಿಲೇರಿ ಹಲವಾರು ರೀತಿಯಲ್ಲಿ, ಹಲವಾರು ಸ್ಥರಗಳಲ್ಲಿ ವಾಗ್ವಾದ, ಚರ್ಚೆಗೆ ಒಳಪಟ್ಟು ಕಟಕಟೆಯಿ0ದಾಚೆ ಬ0ದು ಮತ್ತೆ ರ0ಗದ ಮೇಲೆ ನಿ0ತ0ತಹ ಈ ನಾಟಕ ಮರಾಠಿ, ಹಿ0ದಿ, ಭಾಷೆಗಳಲ್ಲಿ ಹಲವು ವರ್ಷಗಳ ಅ0ತರದಲ್ಲಿ ಆಗಾಗ್ಗೆ ಹಲವು ಪ್ರಯೋಗಗಳನ್ನು ಕಂಡಿದೆ. ಅದೇ ತೀವ್ರತೆ, ಮೊನಚು ಉಳಿಸಿಕೊ0ಡು ಒ0ದು ವರ್ಗದ ಜನರ ಕೋಪ ತಾಪಕ್ಕೆ ಈಡಾಗುತ್ತಲೇ ಬ0ದಿರುವ ಈ ನಾಟಕ 73 ರಲ್ಲಿ ಕನ್ನಡದಲ್ಲೂ ಒಮ್ಮೆ ಸಿದ್ಧವಾಗಿ ಪೂರ್ಣಪ್ರದರ್ಶನಗೊಳ್ಳದೇ ನಿ0ತು ಹೋಗಿದ್ದು, ಈಗ ನಿಮ್ಮ ಎದುರಿಗಿದೆ. ಇಷ್ಟೆಲ್ಲಾ ಹಿನ್ನೆಲೆಯುಳ್ಳ ಈ ನಾಟಕದಲ್ಲಿ ಇರುವುದಾದರೂ ಏನು..? ಅತಿ ಸರಳವಾಗಿ ಹೇಳುವುದಾದರೆ ನೈತಿಕ, ಅನೈತಿಕ ಪ್ರಶ್ನೆಗಳಿಗೆ ಒ0ದು ಪ್ರಶ್ನೆ.






‘ಸಖಾರಾಮ ಬೈಂಡರ್’ ನಾಟಕದ ಬಗ್ಗೆ ಇನ್ನಷ್ಟು ಮಾಹಿತಿ :
1972ರಲ್ಲಿ ವಿಜಯ್ ತೆಂಡೂಲ್ಕರ್ ಮರಾಠಿಯಲ್ಲಿ ಬರೆದ ಈ ನಾಟಕ ಮುಂಬಯಿಯ ಹವ್ಯಾಸಿ ರಂಗಭೂಮಿಯಲ್ಲಿ ವಿವಾದವನ್ನು ಸೃಷ್ಟಿಸಿದ ಹೊಸತಿನಲ್ಲೇ ಕನ್ನಡಕ್ಕೂ ತರ್ಜುಮೆಗೊಂಡು ಪ್ರಯೋಗಿಸಲ್ಪಟ್ಟ ಸಂಗತಿಯನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ. ಆಗಲೇ ಇದನ್ನು ಧಾರವಾಡದ ಎಲ್. ಟಿ. ಅಮ್ಮಿನಭಾವಿ ಎಂಬವರು ಧಾರವಾಡದ ಆಡು ಮಾತಿನ ಕನ್ನಡಕ್ಕೆ ಅನುವಾದಿಸಿದ್ದರು. ಆದರೆ, ಅದು ಇಂಥ ನಾಟಕಗಳ ಪ್ರಯೋಗಕ್ಕೆ ಬೇರಾರೂ ಮುಂದಾಗದೇ ಇರದಿದ್ದ ಸಂದರ್ಭ. ಆದರೆ, ಅದಾಗಲೇ ತನ್ನ ಇಪ್ಪತ್ತನೆಯ ವಶದಲ್ಲಿ ಕಾಲಿರಿಸಿದ್ದ ಧಾರವಾಡದ ಕರ್ನಾಟಕ ಕಲೋದ್ಧಾರಕ ಸಂಘ ಎಂಬ ಹವ್ಯಾಸಿ ಸಂಸ್ಥೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಹುಮ್ಮಸ್ಸು. ರಾಮಚಂದ್ರ ಕಿತ್ತೂರ ಮುಂತಾದ ಉತ್ಸಾಹಿಗಳು ‘ಸಖಾರಾಮ ಬೈಂಡರ್’ ನಾಟಕವನ್ನು ಪ್ರಯೋಗಿಸಲು ಮನಸ್ಸು ಮಾಡಿದರು. ಅನುವಾದಕರು ಒಂದಷ್ಟು ಹಿತವಚನದೊಂದಿಗೆಯೇ ಹಸ್ತಪ್ರತಿಯನ್ನು ತಂಡದವರಿಗೆ ನೀಡಿದರಂತೆ. ಸದ್ದಿಲ್ಲದೆಯೇ ಹಸ್ತಪ್ರತಿ ವಾಚನ, ಕಲಾವಿದರ ಆಯ್ಕೆ ನಡೆದು ತಾಲೀಮು ಶುರುವಾಯಿತು. ರಾಮಚಂದ್ರ ಕಿತ್ತೂರರೇ ನಿರ್ದೇಶನದ ಹೊಣೆಯನ್ನು ಹೊತ್ತಿದ್ದ ಈ ನಾಟಕದ ಮೊದಲ ಪ್ರಯೋಗವಾದದ್ದು ಮಾತ್ರ 10-1-1976ರಂದು, ಬೆಳಗಾವಿಯಲ್ಲಿ. ಅಲ್ಲಿಯ ಕನ್ನಡಿಗರಲ್ಲದೆ, ಮರಾಠಿಯ ರಂಗರಸಿಕರೂ ಈ ಪ್ರಯೋಗವನ್ನು ಮೆಚ್ಚಿಕೊಂಡರು. ಬೆಳಗಾವಿಯ ಪ್ರಯೋಗ ಯಶಸ್ವಿ ಎನಿಸಿದರೂ ಧಾರವಾಡದಲ್ಲಿ ಅದರ ಮರುಪ್ರಯೋಗಕ್ಕೆ ಮಾತ್ರ ಮುಂದೆ ಮೂರು ತಿಂಗಳು ಕಾಲ ಕಾಯಬೇಕಾಯಿತು. ಯಾಕೆಂದರೆ ಆಗ ಹವ್ಯಾಸಿಗಳ ನಾಟಕದ ಪ್ರಯೋಗ ಅಷ್ಟು ಸುಲಭದ ಮಾತಾಗಿರಲಿಲ್ಲ. ಕಲಾವಿದರ ಲಭ್ಯತೆ, ತಾಲೀಮು ಮಾಡುವ ಜಾಗದ ಕೊರತೆ ಮತ್ತು ಸಂಘಟನೆಯ ಇನ್ನಿತರ ಸಮಸ್ಯೆಗಳು. ಕಲಾವಿದರೆಲ್ಲ ಸರಕಾರೀ ನೌಕರರು. ಅವರಿಗೆ ರಜೆ ಸಿಗಬೇಕು. ಅಲ್ಲದೇ, ಕರ್ನಾಟಕ ಕಲೋದ್ಧಾರಕ ಸಂಘದ ಬಹುತೇಕ ಸದಸ್ಯರು ಕೆ. ಇ. ಬೋರ್ಡ್ ಎಂಬ ಶೈಕ್ಷಣಿಕ ಸಂಸ್ಥೆಯ ನೌಕರರು. ಹವ್ಯಾಸಿ ಸಂಸ್ಥೆಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಷ್ಟು ಉದಾರ ಮನಸ್ಸಿನವರು ಆ ಶೈಕ್ಷಣಿಕ ಸಂಸ್ಥೆಯ ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ ರಜೆಯ ಕಾಲದಲ್ಲಿ ಆ ಶೈಕ್ಷಣಿಕ ಸಂಸ್ಥೆಯ ಪ್ರೌಢ ಶಾಲೆಗಳಲ್ಲಿ ತಾಲೀಮು ನಡೆಸಬಹುದಾಗಿತ್ತು.
ಅಂತೂ ಧಾರವಾಡದಲ್ಲಿ ಈ ನಾಟಕದ ಪ್ರಯೋಗ 4-4-1976ರಂದು, ಕೆ. ಇ. ಬೋರ್ಡ್ಸ್ ಹೈಸ್ಕೂಲಿನ ಸಭಾಂಗಣದಲ್ಲಿ ನಡೆಯಿತು.
ಈ ಎರಡೂ ಪ್ರಯೋಗಗಳಲ್ಲಿ ವೀರಣ್ಣ ಕುರ್ಲಿ ಮತ್ತು ಶ್ರೀಮತಿ ವಿಷಯಾ ಜೇವೂರ್ ಅವರು ನೀಡಿದ ಅಭಿನಯ, ಆ ಸರಳವಾದ ರಂಗ ಸಜ್ಜಿಕೆ, ಆ ಬೆಳಕಿನ ಸಂಯೋಜನೆ ಮುಂತಾದವು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿವೆ.
Nodthiddini ….