ಜೂನ್ ೩ ರಂದು ರವಿವಾರ ಸಂಜೆ ೪ಕ್ಕೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ “ಪರಸ್ಪರ” ಗೆಳೆಯರ ಬಳಗವು ಹನಮಂತ ಹಾಲಿಗೆರಿ ಅವರ ಕಾದಂಬರಿ “ಕೆಂಗುಲಾಬಿ” ಕುರಿತು ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಕಾದಂಬರಿ ಓದಿದವರು, ಆಸಕ್ತರು ಬಂದು ಭಾಗವಹಿಸಬಹುದು. ಕಾದಂಬರಿ ಪರಿಷ್ಕರಣೆ ಮಾಡಿ ಎರಡನೇ ಮುದ್ರಣ ಮಾಡ ಬೇಕಾದುದರಿಂದ ಸಂವಾದದಲ್ಲಿನ ನಿಮ್ಮ ಸಲಹೆಗಳ ಉಪಯುಕ್ತವಾಗಬಹುದು.
ಪರಸ್ಪರ ಬಳಗದ ಕಾರ್ಯಚಟುವಟಿಕೆ
ಪರಸ್ಪರ ಬಳಗವು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 4ಕ್ಕೆ ಬೆಂಗಳೂರಿನಲ್ಲಿ ಸಭೆ ಸೇರಿ, ಸಮಕಾಲಿನವಾಗಿ ಬರೆಯುತ್ತಿರುವವರ ಕೃತಿಗಳ ಬಗ್ಗೆ ಚರ್ಚೆ ಮತ್ತು ಸಂವಾದವನ್ನು ನಡೆಸುತ್ತಿದೆ. ಈ ಬಳಗಕ್ಕೆ ಯಾರು ಬೇಕಾದರೂ ಸದಸ್ಯರಾಗಬಹುದು. ಯಾವುದೇ ಶುಲ್ಕ ಅಥವಾ ಧನ ಸಹಾಯದ ಅಪೇಕ್ಷೆಯಿಲ್ಲದೇ ನಿಮ್ಮ ಅಮೂಲ್ಯವಾದ ಸಮಯವನ್ನು ಮಾತ್ರ ಬೇಡುತ್ತದೆ. ಹೆಚ್ಚಿನ ವಿವರಗಳಿಗೆ: ರಾಮಲಿಂಗಪ್ಪ ಟಿ ಬೇಗೂರು ಅವರ 9449271156 ನಂಬರಿಗೆ ಕರೆ ಮಾಡಿ. ಅಥವಾ teamparaspara.blogspot.com ಗೆ ಭೇಟಿಕೊಡಿ. ನಿಮ್ಮ ಸಾಹಿತ್ಯ ಕುರಿತ ಲೇಖನಗಳಿದ್ದರೆ teamparaspara@gmail.com ಗೆ ಮೈಲ್ ಮಾಡಿ ]]>





0 Comments