ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಪಿಎಲ್ ನಲ್ಲಿ ಕಿಚ್ಚ ಕಿಚ್ಚು ಹತ್ತಿಸ್ತಾರಾ !

ಎರಡು ಬಾರಿ ಸಿಸಿಎಲ್ ಕಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಕಿಚ್ಚ ಸುದೀಪ್ ನಾಯಕತ್ವದ ತಂಡ ಕೆಪಿಎಲ್ ನಲ್ಲಿ ಕಮಾಲ್ ಮಾಡಲು ರೆಡಿಯಾಗುತ್ತಿದೆ. ಸುದೀಪ್ ನಾಯಕತ್ವದ ಸಿಸಿಎಲ್ ತಂಡಕ್ಕೆ ಕೆಪಿಎಲ್ ನಲ್ಲಿ ಹೊದವರ್ಷ ಶಿವಮೊಗ್ಗ ಟೀಮ್ ನಿಂದ  ಕ್ರಿಕೆಟ್ ಆಡುವ  ಅವಕಾಶ ದಕ್ಕಿತ್ತು. ಕಿಚ್ಚನ ತಂಡ ಕ್ರಿಕೆಟ್ ಆಟಗಾರರಿಗೆ ತೀವ್ರಮಟ್ಟದ ಪೈಪೋಟಿ ನೀಡಿ ವೃತ್ತಿಪರ ಆಟಗಾರರಿಗೆ ಕಡಿಮೆ ಇಲ್ಲದಂತೆ ಆಟವಾಡಿ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಕಿಚ್ಚ ಸುದೀಪ್ ಅವರು ಉತ್ತಮ ಆಟದೊಂದಿಗೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.  ‘ನಟನೆಗೂ ಸೈ ಆಟಕ್ಕೂ ಸೈ’ ಎನ್ನುವಂತೆ ಕಿಚ್ಚ ಸುದೀಪ್ ಅವರು ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಸುದೀಪ್ ತಂಡಕ್ಕೆ ಕೆಪಿಎಲ್ ನಲ್ಲಿ ಈ ವರ್ಷವು  ಅವಕಾಶ ಸಿಕ್ಕಿದ್ದನ್ನು ಸುದೀಪ್ ಟ್ವಿಟರ್ ನಲ್ಲಿ ಬಯಲು ಮಾಡಿದ್ದಾರೆ.

kb0ಸುದೀಪ್ ನಟನೆಯ ಚಿತ್ರ ಕೋಟಿಗೊಬ್ಬ-2 ಸಿನೆಮಾ ಮಂದಿರಗಳಲ್ಲಿ ಯಶ್ವಸ್ವಿ ಪ್ರದರ್ಶನ ಕಾಣುತ್ತಿದೆ. ಹೆಬ್ಬುಲಿ ಚಿತ್ರದ ಚಿತ್ರಿಕರಣವೂ ಭರದಿಂದ ಸಾಗಿದೆ.ಮತ್ತೇ ಕ್ರಿಕೆಟ್ ನಲ್ಲಿ ಕಿಚ್ಚು ಹತ್ತಿಸುವ ಆಟವಾಡೋಕೆ ಸುದೀಪ್ ಮತ್ತು ತಂಡ ರೆಡಿಯಾಗಿದೆ. ಸುದೀಪ್ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

‍ಲೇಖಕರು admin

19 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading