ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಂಪು ಇರುವೆ ಚಟ್ನಿ…

ಗಿರಿ ವಾಲ್ಮೀಕಿ

ಕೆಂಪು ಇರುವೆ ಚಟ್ನಿ ಉತ್ತರ ಕನ್ನಡದ “ಸಿದ್ದಿ” ಸಮುದಾಯದ ಮುಖ್ಯ ಆಹಾರ. ‘ಸೌಳಿ’ ಚಟ್ನಿ ಎಂದು ಕರೆಯಲ್ಪಡುವ ಈ ಚಟ್ನಿಯಲ್ಲಿ ಸಾಕಷ್ಟು ಆರೋಗ್ಯಕರ ಗುಣಗಳಿವೆ. ಫಾರ್ಮಿಕ್ ಆಮ್ಲ, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು ಮತ್ತು ಕಬ್ಬಿಣದ ಅಂಶಗಳಿರುವ ಕಾರಣ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಸಹಕಾರಿ ಎನ್ನಲಾಗಿದೆ.

ಇದೇ ಕಾರಣಕ್ಕೆ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಛತ್ತೀಸ್ಗಢ, ಪೂರ್ವ ಘಟ್ಟದ ಕಾಡುಗಳಲ್ಲಿ ಅಸ್ಸಾಂ, ಹಿಮಾಚಲ ಪ್ರದೇಶ,ಸಪ್ತ ಸಹೋದರಿಯರ ರಾಜ್ಯಗಳಲ್ಲಿ ಅಷ್ಟೇ ಯಾಕೆ ನಮ್ಮ ಕರ್ನಾಟಕದ “ಉತ್ತರ ಕನ್ನಡ”ದ ಬುಡಕಟ್ಟು ಜನಾಂಗದಲ್ಲೂ ಕೂಡ ಈ ಕೆಂಪು ಇರುವೆಯನ್ನು ಚಟ್ನಿಯನ್ನು ಮಾಡಿ ಸೇವಿಸುವ ಅಭ್ಯಾಸ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ.

ಇತ್ತೀಚೆಗೆ ಯಲ್ಲಾಪುರದ ಕಾಡುಗಳಲ್ಲಿ ತಂಗಿದ್ದ ಸಂದರ್ಭ ಬೆಳಗಿನ ಉಪಹಾರಕ್ಕೆ ದೋಸೆ ಜೊತೆ ಕೆಂಪಿರುವೆ ಚಟ್ನಿ ತಿನ್ನಲು ನೀಡಿದಾಗ ಅದರ ರುಚಿಗೆ ಮಾರುಹೋಗಿ ಎರಡೆರಡು ಬಾರಿ ಹಾಕಿಸಿಕೊಂಡು ತಿಂದು ತೇಗಿದ್ದು ಮತ್ತೆ ಮತ್ತೆ ಅದರ ರುಚಿಯನ್ನು ನೆನಪಿಸುವಂತೆ ಮಾಡಿದೆ.

‍ಲೇಖಕರು Admin

5 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading