ಇವತ್ತು ನಯನ ಸಭಾಂಗಣದಲ್ಲಿ’ಮನೆಯಂಗಳದಲ್ಲಿ ಮಾತುಕತೆ’ಗೆ ಬರುತ್ತಿದ್ದಾರೆ

ಕೃಪಾಕರ- ಸೇನಾನಿ ಪೋಟೋಗ್ರಾಫರ್ ಜೋಡಿಯ ಬಗ್ಗೆ ಬರೆಯುವುದೇನು, ಬರೆಯದಿರುವುದೇನು ಅನ್ನೋದೇ ಗೊತ್ತಾಗಲ್ಲ. ಈ ಜೋಡಿಯ ಪೋಟೋಗ್ರಾಫಿ ಸಾಧನೆ ಬಗ್ಗೆಯಾ? ವೀರಪ್ಪನ್ ಜತೆ 14 ದಿನ ಕಳೆದ ಬಗ್ಗೆಯಾ? “ವೈಲ್ಡ್ ಡಾಗ್ ಡೈರೀಸ್” ಅನ್ನೋ ಸಾಕ್ಷ್ಯಚಿತ್ರ ಜಗತ್ತಿನಾದ್ಯಂತ ಮೆಚ್ಚುಗೆ, ಪ್ರಶಸ್ತಿಯ ಮಹಾಪೂರ ದಕ್ಕಿಸಿಕೊಂಡ ಬಗ್ಗೆಯಾ? ಅದೂ ಬೇಡ- ಕೃಪಾಕರ ಎಂಬ ವಾಣಿಜ್ಯ ವಿದ್ಯಾರ್ಥಿ, ಸೇನಾನಿ ಎಂಬ ಸಿವಿಲ್ ಇಂಜೀನಿಯರ್ ಒಂದಾಗಿ ಕೃಪಾಕರ ಸೇನಾನಿ ಎಂಬ ಸಯಾಮಿ ಪೋಟೋಗ್ರಾಫರ್ ಹುಟ್ಟಿದ ಬಗ್ಗೆಯಾ?.. ಯಾವುದನ್ನು ಬರೆದರೂ ದೊಡ್ಡ ಗ್ರಂಥವನ್ನೇ ಬರೆಯಬಹುದು. ಅಂಥ ವಿಶಿಷ್ಟ ಸಾಧನೆಯ ಅನನ್ಯ ಜೋಡಿ- ಕೃಪಾಕರ ಸೇನಾನಿ..!!

ಸದಾ ಬಂಡೀಪುರ ಸಮೀಪದ ಕಾಡಿನಲ್ಲೇ ವನ್ಯ ಜೀವಿಗಳ ಫೋಟೋಗ್ರಫಿ ಧ್ಯಾನ, ತಪಸ್ಸಿನಲ್ಲಿರುವ ಈ ಜೋಡಿ ಇವತ್ತು ನಯನ ಸಭಾಂಗಣದಲ್ಲಿ ನಿಮ್ಮೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ಗೆ ಬರುತ್ತಿದ್ದಾರೆ. ಬನ್ನಿ… ಅವರೊಂದಿಗೆ ಮಾತಾಡೊಣ..!!






0 Comments