ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂರ್ಮಾವತಾರ ನಾಳೆ ತೆರೆಗೆ, ಇಲ್ಲಿದೆ ವಿವರಗಳು..

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ, ಮನ್ನಣೆ ಪಡೆದ ಚಲನ ಚಿತ್ರ ಕೂರ್ಮಾವತಾರ ನಾಳೆ ತೆರೆಗೆ

ಕಥೆ : ಕುಂ ವೀರಭದ್ರಪ್ಪ, ನಿರ್ದೇಶನ : ಗಿರೀಶ್ ಕಾಸರವಳ್ಳಿ

ಚಿತ್ರಮಂದಿರಗಳ ವಿವರ ಇಲ್ಲಿದೆ :

೧. ಪಿವಿಆರ್ – ಕೋರಮಂಗಲ
೨. ಓರಿಯನ್ ಮಾಲ್ – ಪಿವಿಆರ್ – ರಾಜಾಜಿ ನಗರ
೩. ಐನಾಕ್ಸ್ – ಮಂತ್ರಿ ಮಾಲ್ – ಮಲ್ಲೇಶ್ವರ
೪. ಐನಾಕ್ಸ್ – ಸೆಂಟ್ರಲ್ ಮಾಲ್ – ಜಯನಗರ
೫. ಡಿಆರ್‌ಸಿ ಸಿನಿಮಾ – ಮೈಸೂರು
೬. ಬಿಗ್ ಸಿನಿಮಾ – ಮಂಗಳೂರು
 

‍ಲೇಖಕರು avadhi

18 April, 2013

11 Comments

  1. ಅಶೋಕವರ್ಧನ

    ಮಂಗಳೂರು ಬಿಗ್ ಸಿನಿಮಾ ಮೊನ್ನೆ ಭಾರತ್ ಸ್ಟೋರ್ಸ್ ನಾಲ್ಕನೇ ದಿನಕ್ಕೆ (೮-೪-೧೩) “ಜನ ಇಲ್ಲ, ಶೋ ರದ್ದು ಮಾಡಿದ್ದೇವೆ” ಎಂದು ನಮ್ಮನ್ನು ನಿರಾಶೆಪಡಿಸಿದರು. ಆದರೆ ತಮಾಷೆ ಎಂದರೆ ನಿನ್ನೆಯೂ (೧೭-೪-೧೩) ತನ್ನ ಪತ್ರಿಕಾ ಜಾಹೀರಾತಿನಲ್ಲಿ ಭಾರತ್ ಸ್ಟೋರ್ಸ್ ತೋರಿಸಿತ್ತು. ಕೂರ್ಮಾವತಾರಕ್ಕೂ ಹೀಗಾಗದ ಹಾಗೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು.

  2. kum.veerabhadrappa

    geleyare khandita namma koormaavataara nimmannu niraasegolisuvudilla,
    prekshakana moola abhiruchiyannu tidduva sreemantagolisuva aparoopad chitravannu girish kaasaravalli maadiddare, dayavittu nodi
    kumvee

  3. malathi S

    yes yes!! multiplex or otherwise please watch..:-)

  4. lakshmana naik

    i am waiting.

  5. Muniraj_London

    Kummvee Sir,
    Is there anyway it is relaasing in abroad like London or UK. I think we guys miss it lot:( .
    BW, I would like to talk to you and will call tomorrow sometime.

  6. Pramod

    ಭಾರತ್ ಸ್ಟೋರ್ಸ್ ಮೂರೇ ದಿನದಲ್ಲಿ ಪಿವಿಆರ್ ಎ೦ಬ ಹಗಲು ದರೋಡೇ ಸಿನೆಮಾ ಸ೦ಗದವರು ಎತ್ತ೦ಗಡಿ ಮಾಡಿದ್ದಾರೆ. ನೋಡೋದಿಕ್ಕೆ ಸಾಧ್ಯವಾಗಲಿಲ್ಲ. ಇದಾದರೂ ನೋಡಬೇಕು.

  7. Kavya Kadame

    ದಯವಿಟ್ಟು ಹುಬ್ಬಳ್ಳಿ- ಧಾರವಾಡದ ಕಡೆಗೂ ಶೋ ಅರೇಂಜ್ ಮಾಡೋಹಾಗೆ ಮಾಡ್ತೀರಾ ಪ್ಲೀಸ್?? 🙁

  8. na.damodara shetty

    mangalurina BHARATH MALL
    11 gante show
    nimma kacheriya samaya. Adruu nodbekaadavaru nodle beku, alve?
    kelave dina. haagaagi thappisabedi.

  9. ಮಹದೇವ ಹಡಪದ

    ಕಥೆಯ ಓಘದೊಳಗೆ ಬರೀ ವ್ಯವಸ್ಥೆಯ ಕುರಿತಾದ ತಿಳಿವ್ಯಂಗ್ಯದ ಪಾತ್ರವಾಗಿ ಗಾಂಧಿ ಪಾತ್ರಧಾರಿ ಆನಂದರಾಯರು ಇದ್ದು, ವಿಶ್ರಾಂತ ಜೀವನದಲ್ಲಿ ಏನಾದರೂ ಮಾಡಬೇಕೆಂಬ ಹಂಬಲದ, ಹವ್ಯಾಸಕ್ಕಾಗಿ, ಪ್ರತಿಷ್ಠೆಗಾಗಿ, ಆತ್ಮಸಂತೋಷಕ್ಕಾಗಿ ನಾಟಕ, ಸೀರಿಯಲ್ ಮಾಡುವ ರಾಯರನ್ನು ಸಿನೆಮಾದಲ್ಲಿ ಹೊಸದೇ ಆಯಾಮದಲ್ಲಿ ಕಾಸರವಳ್ಳಿ ಸಾರ್ ನಿರೂಪಿಸಿದ್ದಾರೆ. ಕೂರ್ಮಾವತಾರದ ನೆಲೆಗಳು ಜೀವನದ ಹಲವು ಕವಲುಗಳಲ್ಲಿ ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಆನಂದರಾಯರೊಳಗೆ ಚಿಗುರುವ ಚೈತನ್ಯವೇ ಬೇರೆ..! ಅದು ಮನುಷ್ಯ ಪ್ರೀತಿಯ, ಸಹಜವಾದ ಪ್ರಕೃತಿ ಪ್ರೀತಿಯ, ಅದಮ್ಯವಾದ ಬದುಕಿನ ಕಾಳಜಿಗಳನ್ನು ತೆರೆದಿಟ್ಟು ತೋರುವ ಸರಳ ಗಾಂಧಿತನದ ಚಿತ್ರವೇ ಆದರೂ ಯಾವ ಕುಯುಕ್ತಿಯೂ ಇಲ್ಲದ ಪಾತ್ರವಾಗಿರುವ ಆನಂದರಾಯರು ಕಡೆಯ ಗಳಿಗೆಯಲ್ಲಿ ಮಗನ ಕುರಿತಾದ ವ್ಯಾಮೋಹವೊಂದರಿಂದ ಭ್ರಷ್ಟಾಚಾರವನ್ನು ಬೆಂಬಲಿಸುವಂತೆ ಮಾಡಿದಾಗ. – ಕದಡಿದ ನೀರು ನಾಟಕದ ಶಿವಪ್ಪನ ಪಾತ್ರ ಥಟ್ಟನೆ ನೆನಪಾಗುತ್ತದೆ. ಅನಾಮಿಕ(ಜಿ.ಬಿ.ಜೋಷಿ) ಅವರ ಕದಡಿದ ನೀರು ನಾಟಕದಲ್ಲಿ ಸೋಗಿನ ಗಾಂಧಿಭಕ್ತ ಗೂಳ್ಯಾ ಎಂಬ ಪಾತ್ರ ಸತ್ತು ಹೋಗುತ್ತದೆ. ಗೂಳ್ಯಾನಿಗೆ ಅರ್ಥವಾಗದ ಗಾಂಧಿ ಮತ್ತು ಗಾಂಧಿಜಿಯ ತತ್ವಗಳು ಶಂಕರನಿಗೆ ಅರ್ಥವಾಗುತ್ತ ಹೋಗುತ್ತದೆ. ಅಂಥದ್ದೊಂದು ಠಾಕುಠೀಕು ನೋಟದಲ್ಲಿ ನಿಷ್ಠಾವಂತ ನೌಕರನೊಬ್ಬ ಪಾತ್ರ ಮಾಡುತ್ತ ಪಾತ್ರದ ಆಳಕ್ಕಿಳಿದು ತನ್ನೊಳಗೆ ತಾನೇ ಇಣುಕಿಕೊಳ್ಳಲು ಆರಂಭಿಸುವ ವಿಧಾನವನ್ನು ಅದ್ಭುತವಾಗಿ ಕಟ್ಟಿದ್ದಾರೆ.
    ಇಲ್ಲಿ ಗಾಂಧಿಯೆಂಬ ಸತ್ಯದ ಎಳೆಯನ್ನು ಎಷ್ಟು ಸರಳವಾಗಿ ನೈಜವಾದ ಬದುಕಿನ ಆಶಯಗಳಲ್ಲಿ ಸಿನೆಮಾ ನಿರೂಪಿಸುತ್ತದೆ ಅಂದ್ರೆ ಚಿತ್ರದಿಂದ ಆಚೆ ಬಂದರೂ ಆ ರಾಯರು, ಡೈರೆಕ್ಟರ್ರು, ಆ ಆಫೀಸರ್ರೂ, ಆ ಮಗ, ಆ ಸೊಸೆ, ಆ ಆಮೆ, ಆ ಮೊಮ್ಮಗ, ಆ ಪ್ರಸಿದ್ಧ ನಟಿ,,, ಎಲ್ಲ ಪಾತ್ರಗಳನ್ನು ಒಂದು ಚೌಕಟ್ಟಿನಲ್ಲಿ ಬಿಗಿಹಿಡಿದು ನಿಲ್ಲಿಸಿದ್ದರೂ.. ಆ ಬಿಗುಪಿನ ಬಂಧದಿಂದ ಹೊರಗೇ ಉಳಿದುಬಿಡುವ ಇಕ್ಬಾಲ್ ಬಹಳ ಕಾಡಿಬಿಡುತ್ತಾನೆ. ನೋಡುಗನನ್ನು ಕೆಣಕುತ್ತಲೇ ಆನಂದರಾಯರ ಮನಸ್ಸನ್ನು ಕಲಕಿಬಿಡುತ್ತಾನೆ ಇಕ್ಕಬಾಲ್.
    ಮೂಲಕಥೆಯಲ್ಲಿ
    ಕಳೆದುಹೋದ ಆಮೆ ಇಕ್ಬಾಲನಿಗೆ ಆಹಾರವಾದುದರ ವ್ಯಂಗ್ಯ ಚಲಚ್ಚಿತ್ರದಲ್ಲಿ ಮಾಯವಾದರೂ ಕಥನದ ವಿಸ್ತಾರ ಹರವಿನಲ್ಲಿ ಕೂರ್ಮಾವತಾರ ವಿಶಾಲದೃಷ್ಟಿಕೋನದ ಚಿತ್ರವಾಗಿದೆ. ಒಂದು ಸೃಜನಶೀಲ ಮನಸ್ಸು ಕಥೆಯ ವ್ಯಾಪ್ತಿಯನ್ನು ಮೀರಿ ಬಹು ಆಯಾಮದ ಚಲನಚಿತ್ರವನ್ನು ನಿರ್ಮಿಸಿದೆ. ಕಥೆಯ ಹಂದರದ ಆಚೆಗೆ ಹೋಗಿ ಚಲನಚಿತ್ರದ ಭಾಷೆಯಲ್ಲಿ ಕೂರ್ಮಾವತಾರ ಸಿನೇಮಾ ನೀಡಿರುವ ಗಿರೀಶ ಕಾಸರವಳ್ಳಿ ಅವರು ಮತ್ತೊಂದು ಮಹತ್ವದ ಚಿತ್ರ ನೀಡಿರುವುದು ಖುಷ್ ಆಯ್ತು. ಕನ್ನಡದ ಸಹೃದಯಿ ಸಿನೇಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದು ಅಪರೂಪವೇ… ಕೂರ್ಮಾವತಾರ ಇನ್ನೂ ಯಶಸ್ವಿ ಆಗಲಿ

  10. Srimatha

    inox website’nalli kaaNtilla kurmavatara….nALe hOgO plan ittu, show illva? matte neevu haakiro schedule kooda swalpa confusing. inox central irOdu J P Nagaradalli. JayanagaradallirOdu inox Garuda Swagath mall allva..

  11. Vithal Dalawai

    sir, plz arrange the show in belgaum or dharawad.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading