ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಬರೆದ ಪತ್ರ ನೋಡಿ

ಪರಮೇಶ್ವರ್ ಗುರುಸ್ವಾಮಿ

ಇದು 22.04.1944 ರಂದು ಕುವೆಂಪುರವರು ವಾವೆಯಲ್ಲಿ ನನ್ನ ದೊಡ್ಡಪ್ಪನವರಾಗುವ ಪಿ.ಮಾದಪ್ಪನವರಿಗೆ ಬರೆದಿರುವ ಅಂಚೆ ಕಾರ್ಡು. ಇದರಲ್ಲಿ ಇನ್ನೂ ರಾಮಾಯಣ (ಬರೆಯುವುದು) ಮುಗಿದಿಲ್ಲ ಎಂದು ಬರೆದಿದ್ದಾರೆ. ತಮ್ಮ ಮನೆ, ತೋಟ ಮತ್ತು ಬಾಡಿಗೆಯ ಬಗ್ಗೆ ಬರೆದಿರುವುದು ಅವರಿಬ್ಬರ ಬಾಂಧವ್ಯ ಕುರಿತು ಹೇಳುತ್ತದೆ.
ಎಲ್ಲೆಲ್ಲೋ ಜೋಪಾನವಾಗಿ ಎಂದು ಇಟ್ಟು, ಬೇಕೆಂದಾಗ ಎಷ್ಟು ಹುಡುಕಿದರೂ ಸಿಗದೆ ಕಳೆದೇ ಹೋಗಿದ್ದ ಹಳೆಯ ಫೋಟೋಗಳು, ನೆಗೆಟೀವ್ ಗಳು, ಸ್ಲೈಡ್ ಗಳು ಮತ್ತಿತರಗಳನ್ನು ಈಗ ಒಂದು ಕಡೆಯಿಂದ ನೋಡಿಕೊಂಡು ಓರಣ ಮಾಡುತ್ತಿದ್ದೇನೆ. ಮಧ್ಯದಲ್ಲೇ ಯಾವಾಗ ಬೇಕಾದರೂ ಈ ಕೈಂಕರ್ಯ ನಿಲ್ಲಬಹುದು! ಹೀಗೆ, ಹಲವು ವರ್ಷಗಳ ನಂತರ ಪುನಃ ಈ ಕಾರ್ಡು ನನಗೆ ಈಗ ಸಿಕ್ಕಿತು.
ಪಿ.ಮಾದಪ್ಪನವರು ವಾವೆಯಲ್ಲಿ ನನ್ನ ದೊಡ್ಡಪ್ಪನವರು ಎಂದೆನಲ್ಲ. ಅವರ ಒಬ್ಬ ಮಗ ಶ್ಯಾಮಸುಂದರ ನನಗೆ ಮೂರು ತಿಂಗಳೋ ಆರು ತಿಂಗಳೋ ದೊಡ್ಡವನು. ಹಾಗೆ ಅಣ್ಣನಾಗಬೇಕು. ಅದಕ್ಕಿಂತ ಮಿಗಿಲಾಗಿ ಅವನು ನನ್ನ ಫ್ರೌಢಶಾಲಾ ಸಹಪಾಠಿ. ಅದರಿಂದಾಗಿ ಮಿತ್ರ. ಅವರ ತಂದೆ ಮಾದಪ್ಪನವರು ಯಾರೊಂದಿಗೂ(ನೆಂಟರೊಂದಿಗೆ, ಇಷ್ಟರೊಂದಿಗೆ ನಾನು ನೋಡಿಲ್ಲ.) ಹೆಚ್ಚು ಬೆರೆಯುತ್ತಿರಲಿಲ್ಲ. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ನಾವೆಲ್ಲ ಚಿಕ್ಕವರು. ನಮಗೆ ದೊಡ್ಡವರು, “ಭಾಳಾ ಓದವ್ರೆ(ವ್ನೆ). ಅದುಕ್ಕೇ ಯಾರ್ ಜೊತೇನೂ ಸೇರಕ್ಕಿಲ್ಲ.” ಎನ್ನುತ್ತಿದ್ದರು. ನಂತರ ನನಗೆ ಗೊತ್ತಾದಂತೆ ಅವರು ಫಿಲಾಸಫಿಯಲ್ಲಿ ಎಂ.ಎ. ಮಾಡಿದ್ದರು.
ಶ್ಯಾಮನಿಂದ ಈ ಕಾರ್ಡನ್ನು ಸಲುಗೆಯಲ್ಲಿ ಕಿತ್ತುಕೊಂಡು 40 ವರ್ಷಗಳೇ ಆಗಿವೆ. ಅತೀ ಜಿಪುಣ
ಅಪರೂಪಕ್ಕೆ ಅವಿತಿಟ್ಟಿರುವ ರತ್ನವನ್ನು ಕಾಣುವಂತೆ ಈ ಕಾರ್ಡನ್ನು ಕಾಣುತ್ತಿದ್ದೆ. ಈ ಸಾರಿ ಸಾಂಗತ್ಯ ಚಿತ್ರ ಶಿಬಿರಕ್ಕೆ ಕುಪ್ಪಳಿಗೆ ಹೋದಾಗ ಕುವೆಂಪು ಪ್ರತಿಷ್ಠಾನಕ್ಕೆ ಒಪ್ಪಿಸುವೆ.

‍ಲೇಖಕರು G

21 July, 2014

2 Comments

  1. Chand

    Super Parmeshwarji… tumba thanks share maadiddakke,

  2. k.Puttaswamy

    A rare gift to us!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading