ಸಾಂಗತ್ಯ (ರಿ) 13 ನೇ ಸಿನಿಮಾ ಶಿಬಿರ ಆಗಸ್ಟ್ 29 ಮತ್ತು 30 ರಂದು ಕುಪ್ಪಳಿಯಲ್ಲಿ ನಡೆಯಲಿದೆ
ಎಂದಿನಂತೆ ವಿವಿಧ ಭಾಷೆಗಳ ಪ್ರದರ್ಶನ, ತಜ್ಞರೊಂದಿಗೆ ಸಂವಾದ, ಮಾಸ್ಟರ್ ಕ್ಲಾಸ್, ಗುಂಪು ಚರ್ಚೆ ಮತ್ತಿತರ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗುವುದು.
ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯುತ್ತಮ ತಜ್ಞರನ್ನು ಆಹ್ವಾನಿಸುವ ಪ್ರಯತ್ನ ನಡೆದಿದೆ. ಶಿಬಿರಕ್ಕೆ ಈಗಾಗಲೇ ನೊಂದಣಿ ಆರಂಭಿಸಿದ್ದು, 500 ರೂ. ಶುಲ್ಕವಾಗಿರುತ್ತದೆ. ಆಸಕ್ತರು ಇಮೇಲ್ (saangatya@gmail.com) ಗೆ ತಮ್ಮ ಹೆಸರು, ಆಸಕ್ತಿ, ವಿಳಾಸ, ಸಂಪರ್ಕ ಸಂಖ್ಯೆ (ಫೋನ್)ಯೊಂದಿಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ಸಾಂಗತ್ಯ ಬಳಗವು ನಿಮ್ಮ ಅರ್ಜಿಯನ್ನು ಅನುಮೋದಿಸಿದ ಮೇಲೆ ಹಣ ಪಾವತಿ ವಿವರಗಳನ್ನು ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಇಮೇಲ್ saangatya@gmail.com, 94483 48517.






0 Comments