ಕಾಜಾಣ ಬಳಗದ ವತಿಯಿಂದ ದಿನಾಂಕ 8,9 ಮತ್ತು 10, 2013 ರಂದು
ಉಮಾಶ್ರೀ ಸಿನಿಮೋತ್ಸವ ಕುಪ್ಪಳಿಯಲ್ಲಿ ಆಯೋಜನೆಗೊಂಡಿದೆ

ನಾವು ಈ ನಾಡಿನ ಬಹು ದೊಡ್ದ ಕಲಾವಿದೆ- ಸಿನಿಮಾ, ರಂಗಭೂಮಿ ಹಾಗು ಇನ್ನಿತರ ಕಲಾಪ್ರಕಾರಗಳಲ್ಲಿ ಸಾಂಸ್ಕೃತಿಕವಾಗಿ ಮತ್ತು ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿರುವ ಉಮಾಶ್ರೀ ಅವರ ಸಿನಿಮಾಗಳನ್ನು ಕುರಿತು, ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ಸಿನಿಮೋತ್ಸವ.
ಸಿನಿಮೋತ್ಸವದಲ್ಲಿ ಭಾಗವಹಿಸಲು ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶವಿದ್ದು.. ಆಸಕ್ತರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂರು ದಿನದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಾಜಾಣ ಮಾಡುತ್ತದೆ.
ಹಾಗು ಅದಕ್ಕಾಗಿ ೫೦೦ರೂಗಳನ್ನು ಮಾತ್ರ ಪಡೆಯುತ್ತಿದೆ.
ಮೂರು ದಿನಗಳು ನಾಡಿನ ಪ್ರಮುಖ ಸಾಹಿತಿಗಳು, ನಿರ್ದೇಶಕರು ಮತ್ತು ಚಿಂತಕರಿಂದ ಸಂವಾದ ಹಾಗು ಚರ್ಚೆಗಳಿರುತ್ತದೆ.
ಕಡೆಯ ದಿನ ಖುದ್ದು ಉಮಾಶ್ರೀಯವರು ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಆಸಕ್ತರು ದಿನಾಂಕ 30-10-2013ರ ಒಳಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9035051982, 9916009432.





Dear Organiser..
Congrats for the best movement..
i am participating in the event on 8,9 and 10 nov.13
REGDS
Samanvaya Kashi
9945387650