ನಿನ್ನೆ ಜುಗಾರಿ ಕ್ರಾಸಿನಲ್ಲಿ ಜಿ ಪಿ ಬಸವರಾಜು ಅವರ
’ವೇದಕಾಲದಲ್ಲಿ ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರು ಎನ್ನುವ ಮಾತು…’
ಎಂಬ ಲೇಖನ ಪ್ರಕಟವಾಗಿತ್ತು, ಅದಕ್ಕೆ ಕುಂ ವೀ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ.
ಪ್ರಿಯ ಮಿತ್ರ ಬಸವರಾಜ್
ನಿಮ್ಮ ಲೇಖನ ಆಹಾರ ವ್ಯಸನಿಗಳ ಕಣ್ತೆರೆಸುವಂತಿದೆ, ಈ ವ್ಯತ್ಯಾಸಗಳನ್ನು ಆರೋಪಿಸಿಕೊಂಡಿರುವುದು ಈ ಶತಮಾನದಲ್ಲಿ, ಅದೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ, ಮಾನವನ ದೇಹದ ಜೀರ್ಣಾಂಗಗಳಲ್ಲಿ ಮುಖ್ಯವಾಗಿ ಬಾಯಿಯಲ್ಲಿ ದವಡೆಹಲ್ಲುಗಳಿರುವುದು, ಒಳಗೆ ಕೆಲವು ಹಾರ್ಮೋನುಗಳು ಮಾಂಸಾಹಾರ ಪಚನಕ್ಕೆ ಸಂಬಂಧಿಸಿದಂತೆ, ವೇದಕಾಲೀನ ಸಮಾಜದಲ್ಲಿ ಮಾಂಸಾಹಾರ ಎಲ್ಲಾ ವರ್ಗದ ಜನರಿಗೆ ಅನಿವಾರ್ಯವಾಗಿತ್ತು,
ಉದಾಹರಣೆಗೆ ವಾಜಪೇಯಿ ಎಂಬ ಪುರೋಹಿತ್ಯಕ್ಕೆ ಸಂಬಂಧಿಸಿದ ಪದವನ್ನೇ ತೆಗೆದುಕೊಳ್ಳುವುದಾದರೆ ವಾಜ್ ಎಂದರೆ ಕುದುರೆ, ಪೇಯಿ ಎಂದರೆ ತಿನ್ನುವವನು, ಇಂಥ ಉದಾಹರಣೆಗಳು ವೇದೋಪನಿಷತ್ತುಗಳಲ್ಲಿ ಸಾಕಷ್ಟಿವೆ, ಅದನ್ನು ಸೋಕಾಲ್ಡ್ ಮೇಲ್ಜಾತಿಯವರು ಸಾರ್ವಜನಿಕವಾಗಿ ಒಪ್ಪಿಕೊಂಡರೆ ಅವರ ಸಾಮಾಜಿಕ ವರ್ಚಸ್ಸಿಗೆ ದಕ್ಕೆ ಖಂಡಿತ ಬರುವುದಿಲ್ಲ, ವೆಜಿಟೇರಿಯನ ಪುಲಾವ್, ಬೋಂಡಾ ಇಂಥ ಖಾದ್ಯಗಳು, ಕುಂಬಳಕಾಯಿ ಬಲಿಕೊಡುವುದು ಇತ್ಯಾದಿ ಮಾಂಸಾಹಾರ ಮತ್ತು ಪ್ರಾಣಿಬಲಿಯ ಆಧುನಿಕ ರೂಪಗಳೆ. ಇವರೆಲ್ಲ ಒಣಧಿಮಾಕು ತೋರಿಸುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ, ನಿಮ್ಮಂಥ ಪ್ರಜ್ಜಾವಂತರು ಈ ಕುರಿತು ಬರೆಯುತ್ತಿರುವುದು ಸಂತೋಷ, ಅಭಿನಂದನೆಗಳು
ಇನ್ನೊಂದು ಮಾತು ಹೇಳೋದಿತ್ತು, ಅದೆಂದರೆ ಪರಿಣತರು ಈ ಬಗ್ಗೆ ನಿಜ ಸಂಗತಿಗಳನ್ನು ಬಹಿರಂಗಪಡಿಸುವುದು ತುಂಬಾ ಮುಖ್ಯ, ಸತ್ಯ ಹೇಳಲು ಹಿಂದೆಮುಂದೆ ನೋಡುವವರು ಸಮಾಜದ ಶತ್ರುಗಳು, ನಾವು ಮನೆಯಲ್ಲಿ ಸಸ್ಯಾಹಾರಿಗಳು, ಅದೂ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ದುಡಿಯುವ ವರ್ಗಗಳ ಕೊರಳಿಗೆ ಲಿಂಗ ಕಟ್ಟಿರುವ ಕಾರಣದಿಂದ, ವೀರಶ್ಯವ ಸಮಾಜದ ಶೇಕಡಾ ಎಂಭತ್ತರಷ್ಟು ಜನ ಅದಕ್ಕೂ ಪೂರ್ವದಲ್ಲಿ ಮಾಂಸಾಹಾರಿಗಳಾಗಿದ್ದರು.
ಉದ್ದೇಶಪೂರ್ವಕವಾಗಿ ನನ್ನ ಮೂರು ಮಕ್ಕಳ ಆಹಾರಾಭ್ಯಾಸವನ್ನು ಮಾಂಸಾಹಾರಿಗಳನ್ನಾಗಿ ಬದಲಿಸಿದ್ದೇನೆ. ಅವರ ವ್ಯಾಸಂಗದವಧಿಯಲ್ಲಿ ನಾನ್ ವೆಜ್ ಅಲೊಯನ್ಸಂತ ಅಯ್ದು ನೂರು ರೂಪಾಯಿಗಳನ್ನು ಹೆಚ್ಚುವರಿ ಕಳಿಸುತ್ತಿದ್ದೆ, ಅವರೆಲ್ಲ ಗಟ್ಟಿಮುಟ್ಟಾಗಿರಲಿ, ಕದ್ದು ತಿನ್ನದಿರಲಿ ಎಂಬ ಸದುದ್ದೇಶದಿಂದ
ಕುಂವೀ






ಗಿಡವೂ ಮಾಂಸ; ಪ್ರಾಣಿಯೂ ಮಾಂಸ; ಎರಡನ್ನೂ ಕೂಯ್ದ ಬಳಿಕ ರಕ್ತ/ರಸ ಬಂದೇ ಬರುತ್ತದೆ ಅಂದಮೇಲೆ ಮಾಂಸ್-ಗೀಂಸ್ ವೇತಕೆ? ನಾವು ಮಾಂಸ ತಿನ್ನೊಲ್ಲವೆನ್ನುವವರು ಹಾಲನ್ನು, ತುಪ್ಪವನ್ನೂ ಬೆಣ್ಣೆಯನ್ನೂ ತಿನ್ನೋದ ಬಿಡಲಿ. ಚೇಚೇ! ನಾಲಿಗೆಗೆ ಬೇಸರವಾಗಬಹುದು. ಕ್ಶಮಿಸೋಣ ಅಂತವರನ್ನು?
For a moment, if you think logically, by the same argument as yours, even cannibalism should be fine. Is this what u want to promote?
ಕುಂವೀ ಯವರಿಗೆ ನಮಸ್ಕಾರ
ನೀವು ನಿಮ್ಮ ಪ್ರತಿಕ್ರಿಯೆಯಲ್ಲಿ ”ಪರಿಣತರು ಈ ಬಗ್ಗೆ ನಿಜ ಸಂಗತಿಗಳನ್ನು ಬಹಿರಂಗಪಡಿಸುವುದು ತುಂಬಾ ಮುಖ್ಯ, ಸತ್ಯ ಹೇಳಲು ಹಿಂದೆಮುಂದೆ ನೋಡುವವರು ಸಮಾಜದ ಶತ್ರುಗಳು” ಅಂತ ಬರೆದಿದ್ದೀರಿ. ತುಂಬಾ ಸಂತೋಷ. ಆದರೆ ನೀವು ಯಾರನ್ನು ”ಪರಿಣಿತರು” ಅಂತ ಪರಗಣಿಸಿದ್ದೀರಿ ? ನಿಮ್ಮ ಪರಿಗನಣೆಯ ಮಾನದಂಡ ಏನು? ಇಲ್ಲಿ ”ನಿಮ್ಮ” ಅಂದರೆ ವೈಯಕ್ತಿಕವಾಗಿ ನಿಮ್ಮೊಬ್ಬರಿಗೆ ಈ ಪ್ರಶ್ನೆಯಲ್ಲ. ಇದರಲ್ಲಿ ಎಲ್ಲ ವಿಚಾರವನ್ತರೂ ಒಳಗೋಳ್ಳುತಾರೆ.
ಈಗ ಪರಿಣಿತರು ಈ ಬಗ್ಗೆ ನಿಜ ಸಂಗತಿಗಳನ್ನು ಬಹಿರಂಗ ಪಡಿಸಲಿಕ್ಕೆ ಸಿದ್ಧರಿದ್ದಾರೆ ಅಂತ ಕಲ್ಪಿಸಿಕೊಂಡರೆ, ಅವರ ಎಲ್ಲ ಮಾತುಗಳನ್ನು ಪ್ರಕಾಶಿಸಲಿಕ್ಕೆ ಯಾರು ಸಿದ್ಧರಿದ್ದಾರೆ..? ಎಲ್ಲರಿಗೂ ಅವರವದೇ ಆದ ಸಿದ್ಧಾಂತಗಳಿವೆ. ಆ ಸಿದ್ಧಾಂತಕ್ಕೆ ಬೆಂಬಲ ಸೂಚಿಸುವ ಬರಹ ಅಥವಾ ಹೇಳಿಕೆಗಳನ್ನು ಮಾತ್ರ ಪ್ರಕಟಿಸುತ್ತಾರೆ. ಈ ರೋಗಕ್ಕೆ ಮದ್ದು ಇದೆಯೇ? ಚರ್ಚೆ ಪೂರ್ಣವಾಗಬೇಕಾದರೆ ಎರಡೂ ಕಡೆಯ ವಾದಗಳಿಗೆ ಸಮಾನ ಗೌರವ ಮತ್ತು ಅವಕಾಶ ಸಿಗಬೆಕು. ಅದು ಸಾಧ್ಯವಿಲ್ಲ. ಹೀಗಾಗಿ ಆತ್ಮ ಗೌರವ ಹೊಂದಿರುವ ಪರಿಣಿತರು ಇಂತಹ ಚರ್ಚೆಗಳಿಗೆ ಬರುವುದಕ್ಕೆ ಇಚ್ಚಿಸುವುದೆ ಇಲ್ಲ.
prmaanika pratikriye..sir
KUM.VEE.yavarige nannasahamata ide.
ಈ ವ್ಯತ್ಯಾಸಗಳನ್ನು ಆರೋಪಿಸಿಕೊಂಡಿರುವುದು ಈ ಶತಮಾನದಲ್ಲಿ, ಅದೂ”ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ”….
ಬಿಜೆಪಿ ಕೇಂದ್ರದಲ್ಲಿದ್ದ 4 ಚಿಲ್ಲರೆ ವರ್ಷಗಳಲ್ಲಿ, ರಾಜ್ಯದಲ್ಲಿದ್ದ 5 ವರ್ಷಗಳಲ್ಲಿ ಇಷ್ಟೊಂದು ಸಾಮಾಜಿಕ ಬದಲಾವಣೆಗಳಾಗಿದೆಯಾ..? ಅಧ್ಭುತ ಬದಲಾವಣೆ….!!!
Dear Srinivasamurthy/Kumvee,
Agreed plants do have life but there is a major difference between plants and animals, in that plants lack a central nervous system which is responsible for experiencing pain. Animals have well developed CNS..hence feel excruciating pain when killed. Also there is always some violence involved in any food habit but the idea is to keep it to the minimum. I personally feel that after humans started growing crops (agriculture) there was no need to continue with meat eating. But eventually, it is one’s own choice to be a meat eater or not. Showing selective compassion to certain animals and eating others is absurd. Either be compassionate to all animals or to none. As the old sanskrit saying goes Jeevo Jeevasya Jeevanam.
Beautifully said.
Dear Kumvee,
There was no need to bring the name of a particular political party into the discussion. All parties are equally culpable in this mess. I feel all political parties and all religions should stop micromanaging people’s lives. When my religion starts telling me what to eat and what not to eat, I am out of that religion.