ಬಷೀರ್ ಸ್ಟಾಂಪ್ ನೋಡಿದಾಗ ಒಂದು ಘಟನೆ ನೆನಪಾಯಿತು.
ನನ್ನ ಬಳಿ ಇದ್ದ ಬಷೀರ್ ಅವರ ಅನುವಾದಿತ ಕನ್ನಡ ಕಥಾಸಂಕಲನವನ್ನು ಕಿ ರಂ ತೆಗೆದುಕೊಂಡಿದ್ದರು. ಅವರ ಬಳಿಯೂ ಬಷೀರ್ ಕಥೆಗಳಿದ್ದವು . ಅವರ ಪುಸ್ತಕಗಳ ರಾಶಿಯಲ್ಲಿ ಅದೆಲ್ಲೋ ಮುಳುಗಿಹೊಗಿತ್ತ್ತು. ಅದರ ಬೆನ್ನುಡಿ ಅವರದ್ದೇ.
ನಾನು ನನ್ನ ಪುಸ್ತಕವನ್ನು ಹಿಂದಕ್ಕೆ ಪಡೆಯಲು ಹೋದಾಗ ಅವರು ಬಷೀರ್ ಅವರ ಒಂದು ಸ್ಟಾಂಪ್ ನನಗೆ ಕೊಟ್ಟು ಇದನ್ನು ಇಟ್ಟುಕೊಂಡಿರಿ ಪುಸ್ತಕ ಆಮೇಲೆ ಕೊಡುತ್ತೇನೆ ಎಂದರು. ಸ್ಟಂಪ್ ನಿಮಗೆ ಬೇಡವೇ ಎಂದು ಕೇಳಿದಾಗ, ನನ್ನ ಬಳಿ ಇನ್ನೊಂದು ಸ್ಟಾಂಪ್ ಇದೆ ಎಂದು ಅವರ ಬಳಿ ಇದ್ದ ಸ್ಟಾಂಪ್ ತೋರಿಸಿದ್ದರು.
ಅವರು ಕೊಟ್ಟ ಬಷೀರ್ ಸ್ಟಾಂಪ್ ನನ್ನ ಬಳಿ ಇದೆ. ನನ್ನ ಪುಸ್ತಕ …….?
-ಕಾ ನಂ ನಾಗರಾಜ್







0 Comments