ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿವಿ ಹಿಂಡಿದ ಬಾದಲ್ ನಂಜುಂಡಸ್ವಾಮಿ ಕಲೆ

ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಬಾದಲ್ ನಂಜುಂಡಸ್ವಾಮಿ ಅವರ ಪ್ರಯತ್ನ

ನಮ್ಮ ಜನ ತುಂಬಾ ಒಳ್ಳೆಯವ್ರು. ಪರರಿಗೆ ಉಪಕಾರ ಮಾಡೋಕೆ ಹೋಗೋವಂಥ ಯಾವ ಸೋ ಕಾಲ್ಡ್ ರಿಸ್ಕನ್ನ ತಗೋಳೋಕೆ ಹೋಗದಷ್ಟು ಒಳ್ಳೆಯವ್ರು ಅಂತಾ ಗೊತ್ತಿತ್ತು. ಆದ್ರೆ ತಮಗಾದ ಒಳ್ಳೇತನಕ್ಕಾದ್ರೂ ಸಣ್ಣದೊಂದು ಕೃತಜ್ಞತೆ ಸಲ್ಲಿಸದೇ ಇರೋವ್ರು ಅಂತಾ ಮಾತ್ರ ಗೊತ್ತಿರಲಿಲ್ಲ.
ನೆನ್ನೆ ಅಂತೂ ಎರಡು ವಾರದಿಂದ ಸಾಲು ಸಾಲು ಅತ್ಯಾಚಾರಗಳ ಸುದ್ದಿ ಕೇಳಿ ಒಳಗೆ ದುಗುಡ ಮತ್ತು ಇಷ್ಟೆಲ್ಲ ಓದಿದ್ದೀವಿ ಅಂತ ತುತ್ತೂರಿ ಊದೋ ನಾವ್ಗಳೇನು ಮಾಡ್ತಿದ್ದೀವಿ. ಒಂದೇಒಂದು ಪ್ರತಿಭಟನೆ ಸದ್ದಾಗಲಿಲ್ವಲ್ಲ ಎಂದುಕೊಳ್ಳುತ್ತಿದ್ದ ಸಮಯಕ್ಕೆ, ಈ ಟಿವಿ ಯಲ್ಲಿ ಗೆಳೆಯ ಬಾದಲ್ ಸುಲ್ತಾನ್ ಪಾಳ್ಯದ ಒಂದು ರಸ್ತೆಯಲ್ಲಿ ಬಹಳ ದಿನದಿಂದ ತೆರೆದಿಟ್ಟಿದ್ದ ಮ್ಯಾನ್ ಹೋಲ್ನ ಸುತ್ತ ಯಮ ಚಿತ್ರ ರಚಿಸಿ, ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಿದ ವರದಿ ಬಂತು. ನೋಡಿ ಅಯ್ಯೋ ನಮ್ಮೇರಿಯಾದಲ್ಲೇ ಒಂದೊಳ್ಳೆ ಕೆಲಸ ಮಾಡಿದ್ದಾರಲ್ಲ ಅಂತ ಫೋನಾಯಿಸಿ, ಇವತ್ತು ಭೇಟಿ ಮಾಡಿದೆ.

ಆ ಸ್ಥಳಕ್ಕೆ ಬಾದಲ್ ನನ್ನನ್ನ ಕರೆದುಕೊಂಡು ಹೋಗೋ ಹೊತ್ತಿಗಾಗಲೇ, ಆ ಮ್ಯಾನ್ ಹೋಲಿಗೊಂದು ಮುಚ್ಚಳ ಎಸೆದು ಹೋಗಿದ್ದ ಬಿಬಿಎಂಪಿ ಮಹಾಶಯರು ಆಟವಾಡುವ ಮಕ್ಕಳ ಗಮನ ತಪ್ಪಿದರೆ ಕಾಲು ಸಿಲುಕಿಕೊಳ್ಳಬಹುದಾದಷ್ಟು ಜಾಗವನ್ನೂ ಬಿಟ್ಟಿದ್ದರು. ಸಾಮಾಜಿಕ ಕಳಕಳಿಯುಳ್ಳ ಬಾದಲ್, ಮತ್ತೆ ತಾವೇ ಹರಸಾಹಸ ಪಟ್ಟು ಒಂದಿಷ್ಟು ಆ ಮುಚ್ಚಳವನ್ನು ಜರುಗಿಸಿದ ಮೇಲೆ, ಸಂಭವಿಸಿಬಹುದಾಗಿದ್ದ ಪುಟ್ಟ ಅಪಾಯಕ್ಕೂ ತೆರೆ ಬಿದ್ದಿತು. ನಾವು ಹೋಗುವ ಮುಂಚೆಗಾಗಲೇ ಅಲ್ಲೊಬ್ಬ ಆಸಾಮಿ ಕಪ್ಪು ಬಣ್ಣದ ಡಬ್ಬಿ ಹಿಡಿದು ಬಾದಲ್ ರಚಿಸಿದ ಚಿತ್ರಕ್ಕೆ ಬಣ್ಣ ಬಳಿಯುತ್ತಿದ್ದ. ನಾನು ಗಾಬರಿ ಬಿದ್ದು ಆತನನ್ನು ಕೇಳಿದಾಗ, ಗುಂಡಿಯ ಎದುರಿನ ಮನೆಯಾಕೆ, ಸಾವಿರ ರೂಗಳನ್ನು ಖರ್ಚು ಮಾಡಿಸಿ ಆ ಚಿತ್ರವನ್ನು ಮುಚ್ಚಿಹಾಕಲು ಹೇಳಿದುದು ನನಗೆ ಅತ್ಯಾಶ್ಚರ್ಯವೆನಿಸಿತು.

ಅರೇ… ಇವರು ಸಾವಿರ ಸಲ ಹೇಳಿದ್ರೂ ತಲೆಕೆಡಿಸಿಕೊಳ್ಳದ ಜನ, ಕಲಾವಿದನೊಬ್ಬನ ಏಟಿಗೆ ಎಚ್ಚೆತ್ತು, ಮಾಡಬೇಕಿದ್ದ ಕೆಲಸವನ್ನು ಕಾರ್ಯರೂಪಕ್ಕೆ ತಂದಿದ್ದರು. ಎಲ್ಲರಿಗಿಂತ ಅವರ ಮನೆ ಮಂದಿಗೆ ಹೆಚ್ಚು ಕಿರಿಕಿರಿಯಾಗುತ್ತಿದ್ದ ಸಮಸ್ಯೆಯೊಂದನ್ನ ಅಳಿಸಿಹಾಕಿದ ಕಲಾವಿದನ ಕಾರ್ಯಕ್ಕೆ ಸಮಾಧಾನ ಪಟ್ಟುಕೊಳ್ಳದೇ ಅದನ್ನು ಅಳಿಸಿ ಹಾಕಿದ ಮನಸ್ಥಿತಿ ಎಂಥದ್ದು ಎಂದು ನನಗೆ ಅರ್ಥವಾಗಲೇ ಇಲ್ಲ.
– ರೂಪಶ್ರೀ ಕಲ್ಲಿಗನೂರು
 

‍ಲೇಖಕರು G

10 June, 2014

3 Comments

  1. ಪರಮೇಶ್ವರ ಗುರುಸ್ವಾಮಿ

    ನಿಜವಾದ ಯಮ ಬಾಯ್ತೆರೆದುಕೊಂಡು ಮನೆ ಮುಂದೆ ಕಾಯುತ್ತಿದ್ದರೆ ಆಯಮ್ಮನಿಗೆ ಏನೂ ಅನಿಸಿಲ್ಲ ! ಯಮನ ಚಿತ್ರಕ್ಕೆ ಹೆದರಿ ಸಾವಿರ ಖರ್ಚು ಮಾಡಿದ್ದಾಳೆ!! ಅಂತೂ ಬಾದಲ್ ಬಿಬಿಎಂಪಿಗೆ ಹಾಕಿದ ಮಂತ್ರ ಸ್ವಲ್ಪವಾದರೂ ತಟ್ಟಿದೆ.ಆದರೆ ಜೋರಾಗಿ ಎಫೆಕ್ಟ್ ಆಗಿರುವುದು ಆಯಮ್ಮನಿಗೆ.

  2. vidyashankar

    Super Badal and Roopashri!

  3. ಯಮನೂರಪ್ಪ ನಗನೂರ

    ಬಾದಲ್​​ ನಂಜುಂಡಸ್ವಾಮಿ ಸರ್​ ತುಂಬಾ ಕ್ರಿಯಾಶೀಲರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading