ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣೆ…

ಶಿವಾನಂದ ತಗಡೂರು

ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.
ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸರ್ಕಾರಕ್ಕೆ ಸಡ್ಡು ಹೊಡೆದ ಪರಿಷತ್ ಕನ್ನಡಿಗರ ಸ್ವಾಭಿಮಾನಿ ಸಂಸ್ಥೆ ಎನ್ನುವುದನ್ನು ಸಾರಿದ್ದನ್ನು ಯಾರೂ ಮರೆಯಲಾಗದು.

ಆರು ದಶಕಗಳಷ್ಟು ದೀರ್ಘ ಕಾಲ ಸಂಕ್ರಮಣ ಮಾಸಿಕವನ್ನು ಮುನ್ನಡೆಸುವುದರ ಮೂಲಕ ಕಿರು ಪತ್ರಿಕೆಗಳ ಪೈಕಿ ಮುಖ್ಯರಾಗಿದ್ದರು. ಆ ಮೂಲಕ ಕಿರು ಪತ್ರಿಕೋದ್ಯಮಕ್ಕೆ ಮಹತ್ವ ತಂದುಕೊಟ್ಟರು. ಭಾಷೆ, ಸೊಗಡು ಮತ್ತು ಸಾಹಿತ್ಯವನ್ನು ಒಟ್ಟಿಗೆ ಕನ್ನಡ ಮನಸುಗಳಿಗೆ ಉಣಬಡಿಸಿದ್ದು, ಕನ್ನಡಿಗರನ್ನು ಜಾಗೃತಗೊಳಿಸಿದ್ದು ಶ್ಲಾಘನೀಯ.

ಚಂಪಾ ಮತ್ತು ಅವರು ಪ್ರಕಟಿಸುತ್ತಿದ್ದ ಸಂಕ್ರಮಣ ವಿಚಾರವಾದದ ಬೆಸುಗೆಯಾಗಿತ್ತು. ಆದ್ದರಿಂದ ಚಂಪಾ ಹೆಸರಿನಲ್ಲಿ ವಿಚಾರವಾದಿ ಪತ್ರಿಕೋದ್ಯಮ ನಡೆಸಿದವರನ್ನು ಗುರುತಿಸಿ ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಗೌರವಿಸುವ ನಿಟ್ಟಿನಲ್ಲಿ ಕಸಾಪ ಮತ್ತು ಸರ್ಕಾರ ಕ್ರಮ ಕೈಗೊಳ್ಳಲಿ ಎನ್ನುವುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಭಿಮತ.

ಚಂಪಾ ಕನ್ನಡದ ಆಸ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘ ಪ್ರಾರ್ಥಿಸುತ್ತದೆ.

‍ಲೇಖಕರು Admin

10 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading