ಮನುಷ್ಯರ ಭಾವನೆಗಳು..ಹಾಗೂ ಮನೆಯ ಮುಂದಿನ ಬೋರ್ಡ್ !
ಪ್ರಕಾಶ್ ಶ್ರೀನಿವಾಸ್
ಮೊದಲೆಲ್ಲ ಮನೆಯ ಮುಂದಿನ ಫಲಕದಲ್ಲಿ! ಅತಿಥಿ ”ದೇವೋಭವ”! ಎಂದಿರುತ್ತಿತ್ತು ಆಗಿನ ಕಾಲದಲ್ಲಿ ಮನೆಗೆ ಬರುವ ಸ್ನೇಹಿತರು,ಸಂಬಂಧಿಕರು..ಯಾರನ್ನೇ ಆಗಲಿ ತುಂಬಾ ಪ್ರೀತಿಯಿಂದ ಉಪಚರಿಸುತ್ತಿದ್ದರು! ನಗು ಮುಖದೊಂದಿಗೆ ಸ್ವಾಗತ! ಹೋಳಿಗೆಯೊಂದಿಗೆ ಊಟ! ಕೆಲವು ಶತಮಾನಗಳು ಕಳೆದ ಮೇಲೆ.. ಮನೆಯ ಮುಂದಿನ ಫಲಕದಲ್ಲಿ! ”ಸ್ವಾಗತ ಸುಸ್ವಾಗತ!” ಬರುವವರಿಗೆ ಹೋಳಿಗೆಯ ಊಟ ಇಲ್ಲದಿದ್ದರೂ ದಾಹಕ್ಕೆ ನೀರಾದರೂ ಕೊಡುತ್ತಿದ್ದರು! ಈಗಿನ ಕಾಲದಲ್ಲಿ! ಮನೆಯ ಮುಂದಿನ ಫಲಕದಲ್ಲಿ! (ಕೆಲವು ಕಡೆ ನಾಯಿ ಇದ್ದರೂ, ಇಲ್ಲದಿದ್ದರೂ) ”ಒಳಗೆ ನಾಯಿ ಇದೆ ಎಚ್ಚರಿಕೆ!” ಬರುವವರೂ ಕೂಡ ಬರದೆ ಇರಲಿ ಎಂದು ! ಬರುವವರ ಜೊತೆ ನಗು ಮುಖದೊಂದಿಗೆ ಮಾತನಾಡಿಸುವುದಿರಲಿ ಯಾಕಾದರೂ ಬಂದರೋ ಅನ್ನೋ ಹಾಗೆ ಅವರ ವರ್ತನೆ! ಇದು ಮನುಷ್ಯ ಸಂಬಂಧಗಳಿಗೆ ಬೆಲೆ ಕಮ್ಮಿಯಾಗಿದೆ ಎನ್ನುವ ಸೂಚನೆಯ? ಇಲ್ಲ ದಿನನಿತ್ಯದ ವಸ್ತುಗಳ ಬೆಲೆ ಗನನಕ್ಕೆ ಏರಿರುವ ಸೂಚನೆಯ? ಕಾಲವೇ ಉತ್ತರಿಸಬೇಕು! ]]>


nim manelu hagena?