ವಸಂತ್ ಮೊಕಾಶಿ ಅವರು ನಿರ್ದೇಶಿಸಿದ ಚೊಚ್ಚಲ ಚಿತ್ರ “ಗಂಗವ್ವ ಗಂಗಾಮಾಯಿ” ಜೈನ್ ಮೂವೀಸ್ ಬ್ಯಾನರ್ನ ಅಡಿಯಲ್ಲಿ ೧೯೯೪ರಲ್ಲಿ ನಿರ್ಮಾಣಗೊಂಡಿತ್ತು, ಆದರೆ ಆ ಚಿತ್ರ ಬಿಡುಗಡೆಯ ಭಾಗ್ಯವನ್ನು ಕಾಣಲೇ ಇಲ್ಲ.
ಖ್ಯಾತ ಸಾಹಿತಿ, ತಂದೆ ಶಂಕರ ಮೊಕಾಶಿ ಪುಣೇಕರರಂತೆಯೇ ವಸಂತ್ ಚಲನಚಿತ್ರ ಕ್ಷೇತ್ರದಲ್ಲಿ ಪ್ರತಿಭಾವಂತರು, ಅದಕ್ಕೆ ಶಂಕರ್ ನಾಗ್ ನಿರ್ದೇಶಿಸಿದ “ಆಕ್ಸಿಡೆಂಟ್” ಚಿತ್ರವೇ ಸಾಕ್ಷಿ, ಆ ಚಿತ್ರಕ್ಕೆ ವಸಂತ್ ಚಿತ್ರಕತೆಯನ್ನು ಮಾಡಿಕೊಟ್ಟಿದ್ದರು. ಆ ಚಿತ್ರ ಅವರಿಗೆ ಅತ್ಯುತ್ತಮ ಚಿತ್ರಕತೆಗಾಗಿ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿತು.
“ಗಂಗವ್ವ ಗಂಗಾಮಾಯಿ” ವಸಂತ್ ಅವರ ಮೊದಲ ಮತ್ತು ಕೊನೆಯ ಚಿತ್ರವಾದದ್ದು ಕನ್ನಡಿಗರ ದುರ್ದೈವ. ಇಲ್ಲಿ ಎಷ್ಟೇ ಪ್ರತಿಭೆಯಿದ್ದರೂ ಅದನ್ನು ಗುರುತಿಸುವ ಮನಸ್ಸುಗಳಿಲ್ಲ ಎಂದು ಮತ್ತೊಮ್ಮೆ ಸಾಭೀತಾಯಿತು. ವಸಂತ್ ಮೊಕಾಶಿ ಅವರು ಇಂದು ನಮ್ಮನ್ನಗಲಿದ್ದಾರೆ. ಅವರ ತುಂಬು ಪ್ರೀತಿ, ಪ್ರೋತ್ಸಾಹ, ನೆನಪು ಸದಾ ಇರುತ್ತದೆ.
-ಎಂ ಎಸ್ ಪ್ರಕಾಶ್ ಬಾಬು

Dear friend Vasanth Mokashi, filmmaker, script writer, known for films like ACCIDENT, GANGAVVA GANGAAMAYI and many more left us this morning.
I remember Vasanth fondly as he visited us all the time in early 90’s at our Jayanagar house. He wrote the entire GANGAVVA GANGAAMAYI at our place. He was the son of renowned Kannada writer, Shakar Mokashi Punekar author of the novel GANGAVVA GANGAAMAYI.
Vasath was a brilliant filmmaker, kind person and a wonderful friend. He will be remembered by his friends fondly forever.
-Mamta Sagar






0 Comments