ಎಲ್ಲ ಬಹುಮಾನಿತರಿಗೂ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿತ ಪುಸ್ತಕಗಳ ಪೈಕಿ ಶೇಕಡಾ ಐವತ್ತನ್ನು ಓದಿರುವೆ ಎಂಬುದು ಅಲ್ಪ ಸಮಾಧಾನವಾದರೆ ಉಳಿದವನ್ನು ಜೀವಿತಕಾಲದಲ್ಲಿ ಓದಲಾದೀತೇ ಎನಿಸುವುದು ನಿತ್ಯದ ಅಸಮಾಧಾನ.
ಎಷ್ಟೊಂದು ಮೌಲಿಕ ಪುಸ್ತಕಗಳು , ಎಷ್ಟು ಬಗೆಯ ಪುಸ್ತಕಗಳು ಬರುತ್ತವೆ ವರ್ಷವೊಂದರಲ್ಲಿ !! ಕನ್ನಡದ ಈ ಎಲ್ಲವನ್ನು ಓದಲು ಇನ್ನೊಂದು ಅಡಿಷನಲ್ ಜನ್ಮ ಬೇಕು.
ಮೇಲಿನ ದತ್ತಿನಿಧಿ ಪ್ರಶಸ್ತಿಗಳಲ್ಲಿ ಕೆಲವು ಐನೂರು ರೂಪಾಯಿ , ಒಂದು ಸಾವಿರ ರೂಪಾಯಿ ಮೊತ್ತದಲ್ಲಿ ಇವೆ. ಹಣದಿಂದ ಪ್ರಶಸ್ತಿಯ ಮೌಲ್ಯ ನಿಗದಿಯಾಗುವುದಿಲ್ಲ ನಿಜ. ಆದರೆ ಇದು ಗಿಣಿಮಾತು.
ವಾಸ್ತವವಾಗಿ ಹೊಸ ಲೇಖಕಿ/ಲೇಖಕರು ಪ್ರಕಾಶಕರೊಬ್ಬರನ್ನು ಹುಡುಕಿಕೊಳ್ಳುವುದೇ ದೊಡ್ಡ ಕಷ್ಟ. ಇನ್ನು ಸ್ವಂತ ಪ್ರಕಟಣೆ ಎಂಬುದು ಕನಿಷ್ಟ ನಲವತ್ತು ಸಾವಿರ ರೂ ವೆಚ್ಚದ ಬಾಬ್ತು. ಈ ಹೊತ್ತಿನ ಈ ಕಟುವಾಸ್ತವವನ್ನು ಲೆಕ್ಕದಲ್ಲಿಟ್ಟುಕೊಂಡು ಕಸಾಪ ಈ ದತ್ತಿನಿಧಿಗಳ ಕನಿಷ್ಟ ಮೊತ್ತ ಐದು ಸಾವಿರ ರೂಪಾಯಿಗಳಾದರೂ ಇರುವಂತೆ ನೋಡಿಕೊಳ್ಳುವುದು ಸೂಕ್ತ ಅನಿಸುತ್ತದೆ.