ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿ ಜೋಗಿ ಇಲ್ಲಿದ್ದಾರೆ…

ಇಲ್ಲಿಯೂ ಅಲ್ಲಿಯೂ ಸಲ್ಲುತ್ತಾ..
 -ಜೋಗಿ


ಹತ್ತೋ ಹದಿನಾರೋ?
ಜೋಗಿ ಸುಮ್ಮನೆ ಕೂತರೆ
ಸೋಮಾರಿತನ.
ಯೋಗಿ ಕುಳಿತರೆ ಧ್ಯಾನ.
ಬಾಣಂತಿಗಾದರೆ ವಿರಾಮ.
ಕವಿಗೆ ರಸನಿಮಿಷ, ಕಡುಶ್ರೀಮಂತನಿಗೆ
ಐಷಾರಾಮ.
 
ಏಕಾಂತವೆಂದರೆ
ಜಂಗುಳಿ.
ಒಳಮನೆಯಲ್ಲಿ ಜನಸಂದಣಿ.
ತೂಗುಮಂಚದ ಮೇಲೆ
ಅಡ್ಡಾದಿಡ್ಡಿ ಕೈಕಾಲು.
ಅಷ್ಟು ಕಾಲ ಹೊತ್ತು ಸಾಗಿದ
ರುಂಡಮುಂಡದ
ಪ್ರಚಂಡ ವೈರಾಗ್ಯ.
 
ಇಪ್ಪತ್ತೋ ಎಪ್ಪತ್ತೋ?
ಹಾಗೇ ಸುಮ್ಮನೆ ಕೂತರೆ
ದಿವಂಗತ.
ಪ್ರಾಣಪಕ್ಷಿ ಹಾರಿಹೋಗಿ
ಕಾಯಕದ ಕಾಯ
ಕಾಲವಾದ ಮೇಲೆ
ನನ್ನ ಆಲೋಚನೆ, ವ್ಯಾಮೋಹ,
ಮತ್ಸರ, ಕಾಮ, ಒಳ್ಳೇತನ,
ಅಹಂಕಾರ
ನೆಲೆ ಕಳಕೊಂಡು
ಎಲ್ಲಿ ನೆಲೆಸುತ್ತದೆ ಎಂಬ
ಶೇಷಪ್ರಶ್ನೆಯ ಮುಂದೆ
ನಾನು ಪ್ರಶ್ನಾರ್ಥಕ ಚಿನ್ಹೆ
ಮತ್ತು
ವಿನಯವಂತ
ಹತ್ತೋ ಹದಿನಾರೋ
ಇಪ್ಪತ್ತೋ ಎಪ್ಪತ್ತೋ
ಶ್ರಾದ್ಧದ ಮುನ್ನಾದಿನ ಹಿರಿಮಗನಿಗೆ ಒಪ್ಪತ್ತು.

‍ಲೇಖಕರು avadhi

4 October, 2008

6 Comments

  1. KUNTINI

    EE PADYA JOGI HATTANE CLASSALLI IDDAGA BAREDIDDU.EEGA SVLPA CHANGE MADALAGIDE ASTE. AAGA ARTHAVAGIRALILLA.EEGA ARTHAVAGIDE

  2. subramani

    very nice

  3. ಅನ್ನಮಿಕೆ

    🙂 ಅವಾಗ್ಲೇ ಇಷ್ಟು ಚನ್ನಾಗಿ ಬರೀತಿದ್ರಾ???? ಲವ್ಲೀ…

  4. neelihoovu

    ಓಹ್ ! ಚೆನ್ನಾಗಿದೆ.
    ಹತ್ತನೇ ಕ್ಲಾಸಿನಲ್ಲಿದ್ದಾಗ ಬರೆದದ್ದಾ?
    ನಿಜಕ್ಕೂ ಗ್ರೇಟ್ !

  5. rj

    ಎಲ್ಲಿ ಕಾಣೆಯಾಗಿದ್ದೀರಿ ಸ್ವಾಮೀ..
    ಮಿಸ್ಸಿಂಗ್ ಯೂ!
    -rj

  6. Guru Baliga

    ಕ್ಲಾಸಿಕ್!
    ಎಕಾಂತವೆಂದರೆ ಜಂಗುಳಿ!
    ಇದು ಜೋಗಿಯಷ್ಟೇ ಬರೆಯಲು ಸಾಧ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading