‘ಕವಿತೆ…!’ ಎನ್ನುತ್ತಾ ಕರೆ ಮಾಡಿದ..

ಬಿಡಿಸಿಟ್ಟ ಹೂಬುಟ್ಟಿ…

ನಂದಿನಿ ಹೆದ್ದುರ್ಗ

ನಾನು ಹಸೆ, ಮಂಟಪ ಎಂದೆ
ಹುಸಿನಕ್ಕ. 
ನಾನು ನೈವೇದ್ಯ, ಮಂಗಳಾರತಿ ಎಂದೆ
ಮೆಲ್ಲನೆದ್ದ.
ನಾನು ತುಳಸಿ, ಬಿಲ್ವ ಎಂದೆ
ಗಿಡಮರ ಎಂದ.

ಬಿಡಿಸಿಟ್ಟ ಹೂಬುಟ್ಟಿ ಕ್ಲಿಕ್ಕಿಸಿ‌ ಕಳುಹಿದೆ
ಉತ್ತರವೇ ಇಲ್ಲ.
ಸಾಲಂಕೃತ ಕಳಶ, ಕಣ್ಣುತಾಕುವಂತ 
ಹೆಣ್ಣು ಚಾಮುಂಡಿ, ಪಂಚಾರತಿ ಪತ್ರೆ
ಪಾದೋದಕ, ಉದ್ಧರಣೆ ಎಂದೆ.
ನೆಟ್ವರ್ಕ್ ಸಮಸ್ಯೆ ಎಂದ

ಸೋತು ಮೆಕ್ಕಾದ ದಿಕ್ಕು ಹುಡುಕಿ
ಅಲ್ಲಾಹುಗೆ ಹಣ್ಣುಕಾಯಿ
ಹರಕೆ ಹೊತ್ತೆ.
ಗಣೇಶ ಗುಡಿಯಾಚೆ ಹೋಗುತ್ತಿದ್ದವ 
ಗಂಟೆ ಸದ್ದಿಗೆ ಕಣ್ಣರಳಿಸಿ  
‘ಕವಿತೆ…!’
ಎನ್ನುತ್ತಾ ಕರೆ ಮಾಡಿದ.

ಪಾರುವೂ ಪೈಗಂಬರ್ರೂ
ಚುಕ್ಕಿ ನೋಡುತ್ತಾ ಹೊತ್ತು ಕಳೆಯುತ್ತಾರೆ
ಇತ್ತಿತ್ತಲಾಗಿ

‍ಲೇಖಕರು

December 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: