ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕವನ ಸ್ಪರ್ಧೆ'ಗೆ ಆಹ್ವಾನ

‘ನೇಸರು’ ಜಾಗತಿಕ ಕನ್ನಡ ‘ಕವನ ಸ್ಪರ್ಧೆ’-2018
ಆತ್ಮೀಯರೇ, 
ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇಡೀ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕವಿತೆಗಳನ್ನು ರಚಿಸಬಹುದಾಗಿದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ಪ್ರಥಮ ಬಹುಮಾನ: ರೂ. 10,000/-
ದ್ವಿತೀಯ ಬಹುಮಾನ: ರೂ. 5,000/-
ತೃತೀಯ ಬಹುಮಾನ: ರೂ. 3,000/-
ಪ್ರೋತ್ಸಾಹಕ ಬಹುಮಾನ : ರೂ. 1,000/- (ಇಬ್ಬರಿಗೆ)
ಸ್ಪರ್ಧೆಯ ನಿಯಮಾವಳಿಗಳು:
1) ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು.
2) ಕವನಗಳು ಸುಮಾರು 30 ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ಇಮೈಲ್ kavana.nesaru@gmail.com  ಮೂಲಕವೂ ಕಳುಹಿಸಬಹುದು.
3) ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಿ.
4) ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಿರಬಾರದು.
5) ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸಬೇಕು.
6) ಸ್ಪರ್ಧೆಗೆ ಬಂದ ಕವನಗಳನ್ನು ಮರಳಿಸಲಾಗುವುದಿಲ್ಲ.
7) ತೀರ್ಪುಗಾರರ ತೀರ್ಮಾನವೇ ಅಂತಿಮ.
8) ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 30.04.2018
9) ತೀರ್ಪುಗಾರರ ತೀರ್ಮಾನವನ್ನು 15.06.2018ರ ನಂತರ ಜಾಹೀರುಗೊಳಿಸಲಾಗುವುದು.
ಆಯ್ಕೆಯಾದ ಕವನಗಳ ಫಲಿತಾಂಶವನ್ನು www.mysoreassociation .in ನಲ್ಲಿ ಪ್ರಕಟಿಸಲಾಗುವುದು.
Postal Address : The Mysore Association, Mumbai
393, Bhau Daji Road, Matunga (E), Mumbai – 400019.
Tel: 022- 2402 4647, 2403 7065 (11.00am to 7.00pm)
 

‍ಲೇಖಕರು avadhi

9 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading