ಕಳೆದಿದೆ ನೋಡಾ ಬೆಂಗಳೂರು ನಗರಾ..

ಬಿ ಕೆ ಸುಮತಿ

ಮೊನ್ನೆ ವಿಧಾನ ಸೌಧ ಮೆಟ್ರೋ ನಿಲ್ದಾಣದ ಬಳಿ ಎಂದಿನ peak ಸಮಯದ ಜನರ ಓಕುಳಿ. ಬಸ್ ನಲ್ಲಿ ಹೋಗುವುದೋ ಮೆಟ್ರೋ ದಲ್ಲಿ ಹೋಗುವುದೋ ಎಂಬ ಆಲೋಚನೆ..ಯಲ್ಲಿ ಇದ್ದಂತೆ ..
“ಅರೆ .. ಮೆಟ್ರೋ ಬಂದು ಬೆಂಗಳೂರು ಗಬ್ಬೆದ್ದು ಹೋಯ್ತು.” ಧ್ವನಿ ಒಂದು ತೂರಿ ಬಂತು.
“ಏನು ಬೆಂಗಳೂರೋ .. 36 degree ತಾಪ ..
Cool city ಅಂತಾರೆ ” ವ್ಯಂಗ್ಯ ಮುಗುಳು ನಗೆ ಇನ್ನೊಂದು ಮುಖದಲ್ಲಿ.

ಸೀರೆಯ ನೆರಿಗೆ ಸರಿಪಡಿಸಿಕೊಳ್ಳುತ್ತ ಇದನ್ನು ಕೇಳಿಯೂ ಕೇಳದಂತೆ ಬಸ್ ಕಡೆ ಭರದಿಂದ ಸಾಗಿದ ನಾರಿಮನ್ ಗಳು..
“Ya.. Bangalore traffic hopeless man ..”
ಅಂತ ಭುಜದಲ್ಲಿ bag ಹಾರಿಸಿ ಆ ಕಡೆ ಈ ಕಡೆ
ನೋಡುತ್ತಿದ್ದ ಭಾರೀ ಮನ್ ಗಳು…

ಮೂಕ ಮುದ್ದು ವಿಧಾನ ಸೌಧ.. ಸರ್ಕಲ್ ನಲ್ಲಿ ಇದ್ದ ಗೋಪಾಲಗೌಡರನ್ನು ನೋಡಿತು.
ಗೌಡರು ಮುಗುಳು ನಗೆ ಇಂದ  ವಿಧಾನಸೌಧ ಕ್ಕೆ “ಸಮಾಧಾನ .. ಸಮಾಧಾನ..” ಅಂದ್ರು.
ಇವರೆಲ್ಲ ಹೀಗೆ ಮಾತಾಡೋದು ಕಂಡೂ ಸುಮ್ಮನಿರುವುದು ಹೇಗೆ ಸಾಧ್ಯ?
ಅಲ್ಲಪ್ಪಾ.. ನಿಂಗೆ 60 ತುಂಬಿತು ಅಂತ ಏನೇನೋ ಆಡಂಬರ ಅಬ್ಬರ ಮಾಡಿದ್ರು..
ನೀನು ಸುಮ್ಮನೆ ಇರಲಿಲ್ಲವೇ….
ಗೋಪಾಲಗೌಡರು ನಕ್ಕರು.
ವಿಧಾನಸೌಧ ನಗಲಿಲ್ಲ.

“ಅಂದದೂರು ಬೆಂಗಳೂರು ಹೊಯ್..
ಆನಂದದ ತವರೂರು ..
ರಾಜಧಾನಿ ನಮ್ಮ ಸುಂದರ ನಗರಿ .. ಈಗ software ನಗರ ಅಲ್ಲ. ಅದು ಹುಟ್ಟಿದಾಗಿನಿಂದ soft  ಆಗಿತ್ತು ಎಂದು ಯಾರಿಗೆ ಹೇಳುವುದು…
ಯಾರಿಗೂ ಹೇಳೋದು ಬೇಡ. ಬೆಂಗಳೂರನ್ನು ಯಾರೂ ನಮ್ಮೂರು ಅಂತ ಅಂದುಕೊಳ್ಳುವುದೇ ಇಲ್ಲವೇನೋ..
ಬೆಂಗಳೂರು  ಎಲ್ಲರ ಊರೂ ಹೌದು.
ಆದರೆ ಯಾರ ಊರೂ ಅಲ್ಲ .

ಕಡ್ಲೆಕಾಯಿ ಪೊಟ್ಟಣ ತುಂಬಿ ಕೊಡುತ್ತಾ ನಗುತಾ ನಗುತಾ ಚುರುಕಾಗಿ ಓಡಾಡ್ತಾ ಇರೋ ಆ ಹುಡುಗ ಆಂಧ್ರ ಮದನಪಲ್ಲಿ ಇಂದ ಬಂದಿದ್ದಂತೆ. ಇಲ್ಲಿ ಪೇರಲ ಹಣ್ಣನ್ನು cut ಮಾಡ್ತಾ ಕುಳಿತಿದ್ದಾನಲ್ಲ ಅವನು ಪಕ್ಕದ ಹೊಸೂರು ಬಳಿಯ ಯಾವುದೋ ಹಳ್ಳಿಯಿಂದ ಬಂದಿದ್ದನಂತೆ.
ಸಾಫ್ಟ್ ವೇರ್ ಉದ್ಯೋಗಿಗಳು ಭಾರತದ ಬೇರೆ ಬೇರೆ ನಗರಗಳಿಂದ ಇಲ್ಲಿಗೆ ಬಂದಿರುವುದು… ಗೊತ್ತಿದೆ ಅಲ್ವೇ..”?

ಗೋಪಾಲಗೌಡರು ವಿಧಾನ ಸೌಧ ಹೇಳೋದನ್ನ ಕೇಳ್ತಾ ಇದ್ದರೂ..
ಅವರ ಮನಸ್ಸು  ರಾಜಭವನದ ಅಧಿಕಾರಿಗಳು.. ಕೇಂದ್ರ ಸರಕಾರದ ನೌಕರಿಗೆ ವರ್ಗಾವಣೆ ಆದಾಗ..
ಬೆಂಗಳೂರಿಗೆ ಮಾಡಿಸಿ ಅಂತ ದುಂಬಾಲು ಬೀಳ್ತಾ ಇದ್ದವರನ್ನು ನೆನೆಸಿಕೊಳುತ್ತಾ ಇತ್ತು.
“ಎಲ್ಲರೂ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ.  ಕಬ್ಬನ್ ಪಾರ್ಕ್ ನಲ್ಲಿ ಮಾತಿಗೆ ಕೂಡ್ತಾರೆ..
ಅವರ ಊರಿನ ಪ್ರಕೃತಿ ಎಂಥ ಚೆಂದ.. ಬೆಂಗಳೂರು ಕೆಟ್ಟುಹೋಯ್ತು ಅಂತ ಘಂಟಾ ಘೋಷ ಮಾತಾಡ್ತಾರೆ.
ನಾನು ಈಗ ಎಲ್ಲ ಭಾಷೆ ಕಲ್ತಿದೀನಿ ಗೊತ್ತಾ”..
ಅಂದಾಗ ಗೋಪಾಲಗೌಡರಿಗೆ ಬೆಂದಕಾಳೂರು, ಕೆಂಪೇಗೌಡ, 4 ಗೋಪುರ…ಇವೆಲ್ಲ ತಲೆಗೆ ಬಂತು..

ಮೆಟ್ರೋ ಬಂದಾಗಿನಿಂದ ನಮ್ಮ ವಿಧಾನ ಸೌಧ.. ಆ  ಕಾಮಗಾರಿ ಧೂಳು ತೊಳೆದುಕೊಂಡಿಲ್ಲ… ಯಾವಾಗಲೂ ಸಪ್ಪೆ ಆಗಿದೆ ..ಎಂದುಕೊಂಡ ಗೌಡರು… ದೀರ್ಘ ನಿಟ್ಟುಸಿರು ಬಿಟ್ಟರು . ಆವತ್ತೇ .”ಬೆಳೆದಿದೆ ನೋಡ ಬೆಂಗಳೂರು ನಗರ ಅಂತ..” ಹಾಡು ಬಂತು.. ನೀವ್ಯಾರೂ care ಮಾಡ್ಲಿಲ್ಲ.. ಈಗ ಕಳೆದಿದೆ ನೋಡ ಬೆಂಗಳೂರು ನಗರಾ .. ಅಂತ ಹೇಳಬೇಕಾಯ್ತೆ?   ತಪ್ಪು ಎಲ್ಲಿ ಆಯ್ತು ..?

ಆಲೋಚನೆ ಸರಮಾಲೆ.
ಹುಟ್ಟಿದಾಗಿನಿಂದ ಬೆಂಗಳೂರಲ್ಲೇ ಇರೋ ಹುಡುಗಿ ಜ್ಯೋತಿ . ಅವಳಿಗೆ ತೆಲುಗು ಇಷ್ಟ.
ಮನೆ ಮಾತು ತೆಲುಗು. ರಜೆ ಬಂದರೆ ಅಜ್ಜಿ ಮನೆ ಓಡ್ತಾಳೆ.
Central ಶಾಲೆ ಓದಿದ್ದು. ಕನ್ನಡ ಬರಲ್ಲ.
ಇಲ್ಲಿ ತೆಲುಗು news paper, ತೆಲುಗು ಚಂದಮಾಮ ಓದಿಯೇ ಬೆಳೆದದ್ದು.
ಅವಳ ಅಜ್ಜಿ ಊರಲ್ಲಿ ಕನ್ನಡ ಪತ್ರಿಕೆ ಸಿಗಲ್ಲ ಆದರೆ ಬೆಂಗಳೂರಲ್ಲಿ ಯಾವ ಭಾಷೆಯ ಪತ್ರಿಕೆ ಬೇಕಾದರೂ ಸಿಗುತ್ತೆ. ಜ್ಯೋತಿ ತರಾನೇ ಎಷ್ಟು ಜನ ಇಲ್ಲಿ ತಮ್ಮ ತಮ್ಮ ಭಾಷೆ, ತಮ್ಮ ತಮ್ಮ ಸಂಸ್ಕೃತಿ ,ತಮ್ಮ ತಮ್ಮ ಹುಟ್ಟಿದ ಊರು , ತಮ್ಮ ತಮ್ಮ ಬಾಲ್ಯದ ನೆನಪುಗಳ ಜೊತೆಗೆ ಬೆಂಗಳೂರಲ್ಲಿ ಇದ್ದಾರೆ.

ಇಪ್ಪತ್ತು ಇಪ್ಪತ್ತೈದು ವರ್ಷ ಗಳಿಂದ ಇಲ್ಲಿಯೇ ಇದ್ದರೂ ಬೆಂಗಳೂರು ನನ್ನದು ಎಂದು ಯಾರಿಗೂ ಅನಿಸುವುದೇ ಇಲ್ಲ ..

ಏನಾದ್ರೂ ಮಾಡಬೇಕು . ತೀವ್ರ ವಾಯಿತು ಚಿಂತನೆ.
“ಬೆಂಗಳೂರಿನ ಒಂದು ಕಥೆ ಮಾಡಬಹುದೆ.”
“ಅಯ್ಯೋ.. ಬೆಂಗಳೂರಿಗೆ ಕತೆಯಾಗುವ ಯಾವ ಗುಣವೂ ಇಲ್ಲ” ಅಂತ  ಕತೆ ಬರೆಯುವ ದೊಡ್ಡ ಮಂದಿ declare ಮಾಡಿದ್ದಾರೆ…ಮೊನ್ನೆ ಮೊನ್ನೆ ಯಾರೋ ಹೇಳಿದ್ದು ಓದಿದ ನೆನಪಾಯ್ತು. ಕತೆ ಸಿಗಲಾರದು.

ಸರೀ. ಎಲ್ಲಿ ಹೋದರೂ ನಮ್ಮ ಮೂಲ ಬೆಂದಕಾಳೂರು ಕಂಡ ಬಸವನಗುಡಿ , ಮಲ್ಲೇಶ್ವರ ಪ್ರಜೆಗಳು.. ಯೋಚನೆ ಬಂದಿದ್ದೆ ತಡ, ಹೊರಟರು ಸಂಶೋಧನೆಗೆ. ತೀವ್ರ ಶೋಧ..ಹುಡುಕಾಟ..
ಡಿವಿಜಿ ರಸ್ತೆಗೆ ಬಂದ್ರು. ಎಲ್ಲ ಕೋರ್ಟ್ ವ್ಯಾಜ್ಯ ಮನೆಗಳು.. ಬಸವನಗುಡಿ, ಶಂಕರಪುರ, ಮೂಲನಿವಾಸಿಗಳು
Power of attorney ಬರೆದುಕೊಟ್ಟು ಎಲ್ಲಾ ವಿದೇಶದಲ್ಲಿ ನೆಲೆಸಿದ್ದಾರೆ. ಮಲ್ಲೇಶ್ವರದ ಮಂದಿ ಅಪಾರ್ಟ್ ಮೆಂಟ್ ಗಳಿಗೆ ಎಡೆಮಾಡಿಕೊಟ್ಟು ಜಾಗವನ್ನು ಮಾರಿ ಊರಿನಾಚೆ ದೂರದಲ್ಲಿ ಪುಟ್ಟ ಸೂರು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ದೊಡ್ಡ ದೊಡ್ಡ ಮನೆಗಳನ್ನು ನೋಡಿಕೊಳ್ಳುವವರು ಇಲ್ಲ ಎಂದು ಮನೆಗಳನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಮಕ್ಕಳನ್ನು ವಿದೇಶಗಳಲ್ಲಿ ಬಿಟ್ಟು ತಾವು ಹೈಫೈ ವೃದ್ಧಾಶ್ರಮಗಳಲ್ಲಿ ಇದ್ದಾರೆ ನಮ್ಮ ಶುದ್ಧ ಕನ್ನಡ ಸಂತತಿ . ” ಮಾತಾಡಿ ಬನ್ನಿ.. ಯಾಕೋ ನಮ್ಮ ವಿಧಾನಸೌಧ ಮಂಕಾಗಿದೆ, ಅದರ ಹಿರಿಮೆಯನ್ನು ಮತ್ತೆ ತೋರಿಸಬೇಕಾಗಿದೆ,ಬನ್ನಿ, ಕೈ ಜೋಡಿಸಿ,” ಗೋಪಾಲಗೌಡರು ಕರೆದರು.

ಸರ್  ನೀವು   ಹೇಳಿ.. ಬೆಂಗಳೂರಲ್ಲೇ ಇದ್ದು ಏನ್ ಮಾಡಿದ್ರಿ ಸರ್.. ಯಾರು ಸರ್ ಬೆಂಗಳೂರಿಗರು..
ನಮ್ಮ ಮಕ್ಕಳೆಲ್ಲ ಫಾರಿನ್ ನಲ್ಲಿ ಇದ್ದಾರೆ ಇಲ್ಲಿಂದ ಅಲ್ಲಿಗೆ ಕಲಾವಿದರನ್ನು ಸಾಹಿತಿಗಳನ್ನು ಜನಪದವನ್ನು ಕರೆಸಿ ಅಲ್ಲಿ ದೊಡ್ಡ ದೊಡ್ಡ ಉತ್ಸವಗಳನ್ನು ಮಾಡ್ತಾರೆ.. ಇಲ್ಲಿರೋದು ದೇಹ ..ನಮ್ಮ ನಿಜವಾದ ಬೆಂಗಳೂರು ಆತ್ಮಅಲ್ಲಿದೆ ಅಂದ್ರು.

ಓಹೋ…ಬೆಂಗಳೂರು ಎಂಬ ಈ ದೇಹದಲ್ಲಿ, ಧಾರವಾಡ, ಉತ್ತರಕನ್ನಡ, ಬಿಜಾಪುರ, ಗುಲ್ಬರ್ಗ, ಹೈದರಾಬಾದ್, Bombay.. ಈ ಆತ್ಮಗಳೇ ತುಂಬಿವೆ.

ಹಾಗೇ ಬೆಂಗಳೂರು ಎಂಬ ಆತ್ಮ ವಿದೇಶಕ್ಕೆ ಹಾರಿದೆ..
ಸಾಹೇಬರಿಗೆ ಏನೋ ಹೊಳೆದಂತಾಯ್ತು.
ಥಟ್ಟನೆ ಓಡಿ ಬಂದರು … ವಿಧಾನ ವೀಧಿಯಲ್ಲಿ ಸಣ್ಣ ನೆರಳಿನಲ್ಲಿ..ಹಾಡು ಕೇಳಿ ಬಂತು..ಕೇಳಿದ ದನಿ!..ಆಪ್ತ ದನಿ!!.. ಯಾರೂ.. ಗೋಪಾಲ ಗೌಡರು ಕುತೂಹಲದಿಂದ , ತದೇಕ ಚಿತ್ತದಿಂದ ಕಣ್ಣರಳಿಸಿ ನೋಡಿದರು.
‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅಂತ ಡಿವಿಜಿ’ ಕವನ ಹೇಳ್ತಾ ಇದ್ದರೆ.. ಅಲ್ಲಿ ವಿಶ್ವೇಶ್ವರಯ್ಯ, ಸಜ್ಜನರಾಯರು, ನೆಟ್ಕಲ್ಲಪ್ಪ, ಬಸಪ್ಪ, ಎಲ್ಲರೂ ತಲೆದೂಗ್ತಾ ಇದ್ರು.

ಕಳೆದಿದೆ ನೋಡ ಬೆಂಗಳೂರು ನಗರ ..
ಹೊರಗಿದೆ ನೋಡ ಇಲ್ಲಿಯ ಆತ್ಮ..
ಅಂತ .. ವಿಧಾನ ಸೌಧ ನೋಡಿದರು ..
ಅರ್ಥ ಆಗದ ಅಯೋಮಯ ಸ್ಥಿತಿ..

ಬೆಂಗಳೂರು ಸುಂದರ ಊರು.
ಸೋಲಿಲ್ಲದ ಊರು. ಸೂರು ಕೊಡೋ ಊರು. ಆದರೆ ಸೊಲ್ಲು ಇಲ್ಲದ ಊರು.
ಸಲ್ಲದ ಊರು. ದಿಗ್ಭ್ರಮೆ, ದಣಿವು..ನೋವು..
ಕಣ್ಣಂಚಿನ ನೀರು ಕಾಣಲೊಲ್ಲದು.

ಮಳೆ ಬಂತು..
vaah.. so sweet . Bangalore is cool .. man..
ಧ್ವನಿಗಳು ಮೊಳಗತೊಡಗಿದವು..
ವಿಧಾನಸೌಧ ಮೋಡಗಳ ರಾಶಿಯಲ್ಲಿ
ಮುಚ್ಚಿ ಹೋದಂತೆ ಕಾಣಿಸಿತು..
Metro ಬೆಳಕು ಕಣ್ಣು ಕುಕ್ಕಿತು.

‍ಲೇಖಕರು avadhi

May 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sarayu

    Chendada baraha Sumathi. Nija, Bengaloorina ella savalattugalannu balasikondu , beledu dooda hesaru madikondru, Bengaloorannu tegaluva hagu kannada basheyannu kaliyada janare hetchu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: