ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ

ಅಮೃತ ಸ್ವಾತಂತ್ರ್ಯದ ಅಂಗವಾಗಿ
ಪತ್ರಿಕೋದ್ಯಮದ ಹಿರಿಯರಿಗೆ
‘ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಮೃತ ಸ್ವಾತಂತ್ರ್ಯದ ಪ್ರಯುಕ್ತ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನ ಮಾಸಾಂತ್ಯದ ತನಕ ನಡೆಯಲಿದೆ ಎಂದು ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ..

ಕನ್ನಡ ಪತ್ರಿಕೋದ್ಯಮವನ್ನು ಶ್ರದ್ಧೆ ಮತ್ತು ಬದ್ದತೆಯಿಂದ ರೂಪಿಸಿದ ಸುದ್ದಿಮನೆಯ ಹಿರಿಯ ಪತ್ರಕರ್ತರು ನಮ್ಮೆಲ್ಲರಿಗೆ ಆದರ್ಶ ಮತ್ತು ಸ್ಪೂರ್ತಿಯ ಬೆಳಕು. ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಕರ್ತರಾಗಿ ಬದ್ದತೆಯಿಂದ ಕೆಲಸ ಮಾಡಿದ ಹಿರಿಯರು ನಮ್ಮ ನಡುವೆ ಇದ್ದಾರೆ. ಅವರನ್ನು ಒಳಗೊಂಡು ಸ್ವಾತಂತ್ರ್ಯ ನಂತರದ ಕಾಲಘಟ್ಟದ ಹಿರಿಯ ಪತ್ರಕರ್ತರನ್ನು ಗೌರವಕ್ಕೆ ಆಯ್ಕೆ ಮಾಡಿ, ಸಂಘವೇ ಅವರ ಮನೆ ಅಂಗಳಕ್ಕೆ ತೆರಳಿ ವೃತ್ತಿ ಗೌರವ ಸಮರ್ಪಣೆ ಮಾಡುವುದು ಈ ಕಾರ್ಯಕ್ರಮ ಆಶಯ.

ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಬೆಂಗಳೂರಿನಲ್ಲಿ 14ರಂದು ಭಾನುವಾರ ಚಾಲನೆ ನೀಡಲಾಗುವುದು

ವಿಶಾಲ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಜನಪ್ರಗತಿ ಪತ್ರಿಕೆಯ ಸಂಪಾದಕರಾಗಿದ್ದ ಹಿರಿಯ ಚೇತನ ಕಲ್ಲೆ ಶಿವೋತ್ತಮ ರಾವ್ ಅವರಿಗೆ ತೊಂಬತ್ತರಡು (92) ವಸಂತಗಳು ತುಂಬಿದ ಸಂಭ್ರಮ. ಈ ಹೊತ್ತಿನಲ್ಲಿ
ಮೊದಲಿಗೆ ಅವರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು
ದಿನಾಂಕ 14.8.2022 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಅವರ ಮನೆಯ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.

ಮನೆಯಂಗಳದಲ್ಲಿ ಮನೆದುಂಬಿ
ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.

ಅಭಿಯಾನ:
ಆಯಾ ಜಿಲ್ಲೆ ಮತ್ತು ತಾಲ್ಲೂಕು ಪತ್ರಕರ್ತರ ಸಂಘಗಳು ಇದೇ ಮಾದರಿಯಲ್ಲಿ ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿ ಗೌರವ ಸಲ್ಲಿಸುವ ಅಭಿಯಾನ ಮಾಸಾಂತ್ಯದ ತನಕ ನಡೆಯಲಿದೆ ಎಂದು ತಗಡೂರು ತಿಳಿಸಿದ್ದಾರೆ.

‍ಲೇಖಕರು Admin

13 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading