2-10-2013 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುವಸೌರಭ ಕಾರ್ಯಕ್ರಮ
ಸ್ಥಳ: ನಯನ ರಂಗಮಂದಿರ, ಕನ್ನಭವನ, (ರವೀಂದ್ರ ಕಲಾಕ್ಷೇತ್ರದ ಆವರಣ)
ರೂಪಶ್ರೀ-ಶಿಲ್ಪಶ್ರೀ ಕಲ್ಲಿಗನೂರ್ ಸಹೋದರಿಯರ ಕಿರು ಪರಿಚಯ
1990 ರಿಂದ ಲಂಕೇಶ್ ಪತ್ರಿಕೆಯ ಮೂಲಕ ರೇಖಾಚಿತ್ರ ಕಲಾವಿದರಾಗಿ ಕಾರ್ಯ ನಿರ್ವಹಿತ್ತಿರುವ ಪುಂಡಲೀಕ ಕಲ್ಲಿಗನೂರ್ ಅವರ ಮಕ್ಕಳು. ತಾಯಿ ಕಸ್ತೂರಿ ಶಿಲ್ಪಶ್ರೀ ಕಲ್ಲಿಗನೂರ್
ಶಾಲಾದಿನಗಳಿಂದ ಸಂಗೀತದಲ್ಲಿ ಅಪಾರ ಆಸಕ್ತಿ. ಕಲಾಮಂದಿರ ಕಲಾಶಾಲೆಯಲ್ಲಿ ಚಿತ್ರಕಲೆಯಲ್ಲಿ ಪದವಿ. ಜನಪದ ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿ. ವಿಜಯವಾಣಿ ಹಾಗೂ ಸಿಟಿ ಟುಡೆ ಪತ್ರಿಕೆಗಳಲ್ಲಿ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಉಸ್ತಾದ್ ಫಯಾಜ್ಖಾನರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ.

ರೂಪಶ್ರೀ ಕಲ್ಲಿಗನೂರ್
ಶಾಲಾದಿನಗಳಿಂದ ಕಲೆಯಲ್ಲಿ ಆಸಕ್ತಿ. ಚಿತ್ರಕಲೆಯಲ್ಲಿ ಕಲಾಮಂದಿರ ಕಲಾಶಾಲೆಯಲ್ಲಿ ಪದವಿ. 9ನೇ ತರಗತಿಯಲ್ಲಿ ಬರೆದ ಕಾಡೊಳಗ ಕಳದಾವು ಮಕ್ಕಾಳು ಎಂಬ ಮಕ್ಕಳ ನಾಟಕಕ್ಕೆ ಸಾಹಿತ್ಯ ಪರಿಷತ್ತಿನ ಅರಳು ಸಾಹಿತ್ಯ ಪ್ರಶಸ್ತಿ ಹಾಗೂ ಅಖಿಲ ಭಾರತ ಮಕ್ಕಳ ಮನೆಯ ಸಾಹಿತ್ಯ ಪ್ರಶಸ್ತಿ ದೊರಕಿದೆ. ನಂತರ ಪ್ರಜಾವಾಣಿಯ ಕಲಾವಿದೆಯಾಗಿ ಒಂದು ವರ್ಷ ಕೆಲಸ. ಅದರ ಜೊತೆ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಸಂಗೀತ ಕಲಾವಿದರುಗಳ ಬಗ್ಗೆ ಲೇಖನ ಬರವಣಿಗೆ. ಹಾಗೂ ಚಿತ್ರಕಲಾವಿದೆಯಾಗಿಯೂ ಕಾರ್ಯನಿರ್ವಹಣೆ… ಇದೀಗ ಉಸ್ತಾದ್ ಫಯಾಜ್ಖಾನರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ

ಕನ್ನಡ ಸಾಹಿತ್ಯ ಸಮ್ಮೇಳನ- ಗಂಗಾವತಿ
ದೆಹಲಿ ಕರ್ನಾಟಕ ಸಂಘ- ದೆಹಲಿ
ಇನ್ಫೋಸಿಸ್ ಪ್ರತಿಷ್ಟಾನ
ಅದ್ದೆ ಗ್ರಾಮದ ಭೂಮಿ ಹಬ್ಬ ಸೇರಿದಂತೆ
ಮೈಸೂರು, ಮಂಗಳೂರು, ಶಿವಮೊಗ್ಗ, ಗದಗ ಸೇರಿದಂತೆ ಕನರ್ಾಟಕದ ಹಲವು ಜಿಲ್ಲೆಗಳಲ್ಲೂ ನೂರಾರು ಸುಗಮ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ







0 Comments