ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲಹಳ್ಳಿಯಲ್ಲಿ ವೀಣಾ ಎಂಬ ಕಥೆಗಾರ್ತಿ

 kl.jpg

ಎಚ್ಚರದ ಕನಸು
ವೀಣಾ ಬನ್ನಂಜೆ
ರವೀಂದ್ರ ಪುಸ್ತಕಾಲಯ
ಚಾಮರಾಜಪೇಟೆ
ಸಾಗರ- ೫೭೭೪೦೧

ವೀಣಾ ಬನ್ನಂಜೆ ಉಡುಪಿಯಿಂದ ಎದ್ದು ದಿಢೀರನೆ  ಬಾಗಲ ಕೋಟೆಯ   ಕಲ್ಲಹಳ್ಳಿಯ ಕಡೆ ನಡೆದು ಹೋದರು. ಇದೇ ಒಂದು ಜಗತ್ತು ಎನ್ನುವ ಆ ಉಡುಪಿಗೂ, ಲೋಕಕ್ಕೆ ಸಂಪರ್ಕವೇ ಇಲ್ಲ ಎನ್ನುವಂತಿರುವ ಕಲ್ಲ  ಹಳ್ಳಿಗೂ ಏನೇನೂ ಸಂಭಂದ ಇಲ್ಲ. ಆದರೂ..ಆದರೂ ವೀಣಾ ಬನ್ನಂಜೆ ಹೊರಟೇ ಬಿಟ್ಟರು. ಸತ್ಯಕಾಮರನ್ನು ಕಂಡರು.

ಈ ಜಗದಲ್ಲಿ, ಈ ಬದುಕಿನ ರೀತಿಯಲ್ಲಿ ನಮಗೆ ಬೇಕಾದಾಗ ಹೀಗೆ ಬುದ್ಧನಂತೆ ನಡೆದು ಹೋಗಿಬಿಡುವುದು ಎಲ್ಲರಿಗೂ ಸಾದ್ಯವೇ?. ಆದರೆ ವೀಣಾಗೆ ಅದು ಸಾದ್ಯವಾಯಿತು. ಉಡುಪಿಯಲ್ಲಿ ಹಸಿ ಹಸೀ ಸ್ತ್ರೀವಾದಕ್ಕೆ ಇನ್ನೂ ದನಿಯಾಗುತ್ತಿದ್ದ ಈಕೆ ಇದೆಲ್ಲವನ್ನೂ ಬಿಟ್ಟು ನಡೆದರು. ಬಸ್ನಲ್ಲಿ ಮಹಿಳೆಯರಿಗೆ ಬೇಕಾಗಿಲ್ಲ ಸ್ಪೆಷಲ್ ಸೀಟು ಎಂದು ಉದಯವಾಣಿಗೆ ಪತ್ರ ಬರೆಯುತ್ತಿದ್ದ ಹುಡುಗಿ ಇವರೇನಾ ಎಂದು ಈಗಲೂ ನಂಬಲಾಗುತ್ತಿಲ್ಲ.

ವೀಣಾ ಬದಲಾದ ಕಾಲದಲ್ಲಿ ಹುಟ್ಟಿದ ಕಥೆಗಳನ್ನು ಒಂದೆಡೆ ಸೇರಿಸಿ ಗಂಟು ಹಾಕಿದ್ದಾರೆ. ಓದಿದರೆ ಒಂದು ಗುಂಗು ಹಿಡಿಯುತ್ತದೆ. ಸತ್ಯಕಾಮರ ಕಥನದ ಚುಂಗು ಹಿಡಿದು ಹೊರಟಿದ್ದಾರೇನೋ ಎನಿಸುವಂತಿದೆ. ಸತ್ಯಕಾಮರ ಬಗೆಗೂ ಇದರಲ್ಲಿ ಒಂದು ಆತ್ಮಕಥೆ ಇದೆ.

ನನಗೆ ಹೇಳಲಿಕ್ಕೆ ಏನೂ ಇಲ್ಲ
ಇಲ್ಲಿ ಏಳು ಕಥೆಗಳಿವೆ
ಎಲ್ಲವೂ
ನನ್ನ ಬದುಕಿನ ಒಂದೊಂದು ಅವಸ್ಥೆ
ಅವು ಹಾಗೆ ಹುಟ್ಟಿಲ್ಲ
ನನ್ನನ್ನು ಹುಟ್ಟಿಸಿವೆ
ಬದುಕು ವರ್ತಮಾನದಲ್ಲಿ ಒಂದು ಘಟನೆ
ಮುಗಿದ ಬಳಿಕ ಕಥೆ
ನನ್ನ ಪಾಲಿನ ಘಟನೆಗಳೇ ಇಲ್ಲಿ ಕಥೆಗಳಾಗಿವೆ
ಓದುವ ಘಟನೆ ನಿಮಗೆ ಸೇರಿದ್ದು  
ಅದು ನಿಮ್ಮ ಕಥೆಯೂ ಆದರೆ ಸಾರ್ಥಕ……
ಎನ್ನುತ್ತಾರೆ
ವೀಣಾ ವಿಳಾಸ :
‘ಸುಮ್ಮನೆ’
ಕಲ್ಲ ಹಳ್ಳಿ ಅಂಚೆ 
ಜಮಖಂಡಿ  ತಾಲೂಕು – ೫೮೭೧೧೯
ಬಾಗಲಕೋಟೆ

‍ಲೇಖಕರು avadhi

21 January, 2008

1 Comment

  1. ಚೇತನಾ ತೀರ್ಥಹಳ್ಳಿ

    ವೀಣಾ ಬನ್ನಂಜೆಯವರ ಹೆಸರು ಕೇಳಿರುವೆ. ಎಲ್ಲಿ, ಯಾವಾಗ, ಗೊತ್ತಿಲ್ಲ.
    ನನ್ನ ಪಾಲಿಗೆ ಸತ್ಯಕಾಮರೊಂದು ಬೆರಗು. ನನ್ನ ಮಟ್ಟಿನ ಸ್ತ್ರೀವಾದ ನನ್ನಲ್ಲಿ ಮೊಳೆತಿದ್ದೆ ಅವರನ್ನೋದತೊಡಗಿದಾಗಿಂದಲೇ. ಅದರ ಸಂಬಂಧ ಹೇಗೆ ಕಲ್ಪಿಸಿಕೊಳ್ಳುವಿರೋ ನನಗೆ ಗೊತ್ತಿಲ್ಲ. ಅಂತೂ, ಹೇಳಲೇಬೇಕನಿಸಿತು, ಹೇಳಿದೆ.
    ಸತ್ಯಕಾಮರ ಹೆಸರು ಕೇಳಿದಾಗಲೆಲ್ಲ ಪ್ರತಿಕ್ರಿಯಿಸಿ ನನ್ನ ಸಪ್ರೇಮ ಗೌರವ ಸಲ್ಲಿಸೋದು ವಾಡಿಕೆ.
    ವೀಣಾ ಅವರ ಕೃತಿ ಖಂಡಿತ ಓದಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading