ಕಲ್ಲಪ್ಪ ಮಾಸ್ತರರ ಮಡಿವಂತಿಕೆಯ ಪುರಾಣ

–  ವೈ ಎಸ್ ಹರಗಿ


ಮೊನ್ನೆ ಬಹಳ ದಿನಗಳ ನಂತರ ನಮ್ಮೂರಿಗೆ ಹೋಗಿದ್ದೆನು. ಬಹಳ ದಿನಗಳು ಅನ್ನೋದಕ್ಕಿಂತ ಬಹಳ ವರ್ಷಗಳೇ ಕಳೆದ ನಂತರ ಊರಿಗೆ ಹೋಗಿದ್ದೆನೆಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಅಪ್ಪ ಅಮ್ಮ ತೀರಿ ಹೋದ ಮೇಲೆ ಊರಿನ ಸಂಪರ್ಕ ಬಹುಕಾಲ ಕಳದೇ ಹೋಗಿತ್ತು. ಆದರೆ ಮೊನ್ನೆ ಕಾರಣಾಂತರದಿಂದ ನಾನು ಹೋಗಲೇಬೇಕಾಗಿತ್ತು. ಬಾಲ್ಯದಲ್ಲಿ ಹಾಳೂರು ಕೊಂಪೆಯಂತಿದ್ದು ಮಳೆ ಬೆಳೆ ಆದಾಗ ಮಾತ್ರ ಋತುಕಾಲಿಕ ಸಂತಸದಿಂದ ವಿಜೃಂಭಿಸುವ ಯೋಗ ನನ್ನೂರಿನದಾಗಿತ್ತು. ಮೊನ್ನೆ ದಿಢೀರನೇ ಊರಿಗೆ ಹೋದಾಗ ನನಗೆ ಆ ಊರಿನ ಅದೃಷ್ಟ ಕಂಡು ದಿಕ್ಕೇ ತೋಚದಂತಾಗಿತ್ತು. ಯಾಕಂದ್ರೆ… ಮುರುಕಲು ಹಳೆಯ ಮನೆಗಳು ಮಾಯಾವಾಗಿ ಕಾಂಕ್ರೀಟ್ ಗೋಡೆಗಳಿಂದ ಹಳಹಳಿಸಿ ಸಾಲು ಸಾಲಾಗಿ ಸುಂದರವಾಗಿ ಕಾಣುತ್ತಿವೆ. ಸಾಲದಕ್ಕೆ ಕಾಂಕ್ರೀಟ್ ಮನೆಗಳ ಗೋಡೆಗಳ ಮೇಲೆ ಜಾಹೀರಾತುಗಳ ವರ್ಣಮಯ ಚಿತ್ರಗಳು ರಾರಾಜಿಸುತ್ತಿದ್ದವು.ಅವುಗಳು ನನಗೆ ಮಂತ್ರಮುಗ್ಧಗೊಳಿಸಿದ್ದವು. ಊರ ಸುತ್ತಲೂ ಬೆಳೆದ ನಿಂತ ಪೀಕಜಾಲಿ ಕಂಠಿಗಳು ಮಂಗಮಾಯವಾಗಿ ಸುಂದರವಾದ ಟಾರು ರಸ್ತೆ ನಿರ್ಮಾಣಗೊಂಡಿವೆ. ಇನ್ನು ಯಾವಾಗಲೂ ಶವದಂತೆ ಹಾಳು ಕಳೆಯನ್ನು ಧರಿಸಿ ಪುರಾತನ ಕಾಲವನ್ನು ನೆನಪಿಸುತ್ತಿದ್ದ, ನಮ್ಮೂರ ಮಣ್ಣು ರಸ್ತೆಗೆ, ಡಾಂಬರು ಮೆತ್ತಿಕೊಂಡು ಲವಲವಿಕೆಯ ಜೀವಕಳೆಯನ್ನು ತರಿಸಿತ್ತು. ಹಾಗೂ ನನ್ನ ಬಾಲ್ಯದಲ್ಲಿ ಆಡಿ ಬೆಳೆದ ಸಹಪಾಠಿಗಳು ಯಾರಾದರೂ ಸಿಕ್ಕಾರೆಂದು ತೀಕ್ಷ್ಣವಾಗಿ ಹುಡುಕಿದರೆ ಬರೇ ಅಪರಿಚಿತ ನವಯುವಕರ ತಂಡವೇ ಕಾಣುತ್ತಿತ್ತು. ಇದರಿಂದ ನನಗೆ ಕೊಂಚ ನಿರಾಶೆಯಾದರೂ… ಹಾಗೆ ಮುಂದೆ ನಾಲ್ಕಾರು ಹೆಜ್ಜೆಯನ್ನು ಕ್ರಮಿಸಿದಾಗ ಭೀಮಕಾಯದ ಕಪ್ಪನೆಯ ವ್ಯಕ್ತಿಯೊಬ್ಬ ಬಾಯಿಯಲ್ಲಿ ಮೋಟು ಬೀಡಿಯನ್ನು ಇರಿಸಿಕೊಂಡು.. ಬಸ್ ಬಸ್ನೇ…… ಹೊಗೆಯನ್ನು ಹೊರಬಿಡುತ್ತಾ ವಿಚಿತ್ರ ಆನಂದದಿಂದ ನಿಧಾನಗತಿಯಲ್ಲಿ ಬರುತ್ತಿದ್ದನು. ದೂರದಿಂದಲೇ ನನ್ನನ್ನು ಪ್ರಶ್ನಾರ್ಥಕ ನೋಟದಿಂದ ದುರುಗುಟ್ಟಿ ನೋಡುತ್ತ ಬರುತ್ತಿದ್ದ ಆ ವ್ಯಕ್ತಿಯು ತೀರ ಹತ್ತಿರಕ್ಕೆ ಬಂದಾಗ.. ಆ ದಪ್ಪನೆಯ ಕಪ್ಪು ಮುಖದಲ್ಲಿ ಅನಿಶ್ಚಿತತೆ, ಆತಂಕ ನಿರಾಶೆ ಮಡುಗಟ್ಟಿದಂತೆ ಕಾಣುತಿತ್ತು.
ಮೇಲಾಗಿ ಮೈ ತುಂಬಾ ಚಿಂದಿಬಟ್ಟೆಯನ್ನು ತೊಟ್ಟ ಅವನ ದೇಹ ಅಷ್ಟಕ್ಕೆ ಸಂತೃಪ್ತವಾಗಿತ್ತಾದರೂ ಬಡತನ ಅವನ ನಿತ್ಯಸಂಗಾತಿಯಾಗಿದ್ದನ್ನು ಅದು ಬಿಂಬಿಸುತ್ತಿತ್ತು. ಒಟ್ಟಾರೆ ನೋಡಲು ಮಂಕಾಗಿದ್ದ ಆ ವ್ಯಕ್ತಿಯು ನನ್ನನ್ನು ಸಮೀಪಿಸುತ್ತಿದ್ದಂತೆಯೇ ಅವನ ನೇರ ನೋಟ ನನಗೆ ತೀರ ಚಿರಪರಿಚಿತನೇನೋ.. ಅನಿಸುವಷ್ಟು ನಂಬಲರ್ಹವಾಗಿತ್ತು. ಆದರೆ ಆ ಸ್ನೇಹಮೂತರ್ಿ ಅನಾಮಿಕನನ್ನು ಗುರುತಿಸಲು ನಾನು ಬಹಳ ಶ್ರಮಿಸಿದರೂ.. ಕೊನೆಗೂ ಅವನನ್ನು ಗುರುತಿಸಲು ನನಗೆ ಆಗಲೇ ಇಲ್ಲ. ಆದರೆ ಅವನು ಮಾತ್ರ ಆತ್ಮೀಯತೆ, ಆನಂದದಿಂದ ಏನಪಾ.. ಗೆಳೆಯ ಆರಾಮ ಅದಿಯಾ? ಹೆಂಗಿದ್ದಿ ಹ್ಯಾಂಗಾದಿ.. ಎಲ್ಲಿ ಅದಿ ಏನು ಕತಿ? ಪರಿಚಿತನಂತೆ ಪ್ರಶ್ನಿಸಿದಾಗ.. ನಾನು ಕೃತಕವಾಗಿ ಸಣ್ಣಕ್ಕೆ ನಕ್ಕು ಸುಮ್ಮನಾದೆನು. ಅವನನ್ನು ಗುರುತಿಸಲು ಅಸಹಾಯಕನಾದ ನನ್ನ ಬೆಪ್ಪತನದ ಮುಖಭಾವನೆಯನ್ನು ಬಹು ಸೂಕ್ಷ್ಮವಾಗಿ ಗ್ರಹಿಸಿ, ನಾನು ನಿನಗ ಗುತರ್ು ಸಿಗಲಿಲ್ಲನು…? ನಾನಪಾ ನಿನ್ನ ಖಾಸಾ ಗೆಳೆಯ ಇದ್ನೆಲ್ಲಾ.. ಭೋಜ ಎಂದು ಹೇಳುತ್ತಾ ಬಾಯ್ತುಂಬಾ ಪಾಚಿಗಟ್ಟಿದ ಹಲ್ಲನ್ನು ಕಾಣಿಸಿ ನಕ್ಕಾಗ.. ನನಗೆ ಆತ್ಮೀಯ ಗೆಳೆಯ ಭೋಜನೆಂದು ಗೊತ್ತಾಗಿ ಓಹೋ.. ಭೋಜನೆ ಎಂದು ಅವನ ನಗುವಿಗೆ ನನ್ನ ನಗೆಯನ್ನು ಸೇರಿಸಿ ಪರಸ್ಪರ ಆತ್ಮೀಯತೆಯನ್ನು ಹಂಚಿಕೊಂಡೆವು.
ಮತ್ತೇ.. ಮತ್ತೇ ನಾನು ಅವನ ಮುಖವನ್ನು ನೋಡುತ್ತ ಭೋಜ.. ನನ್ನ ಪ್ರಾಣ ಸ್ನೇಹಿತ ಏನಪ ನಿನ್ನ ಆವಾಂತರ ಹೆಂಗಿದ್ದೀ ಹೆಂಗಾದಿ? ಎಂದು ನಾನು ಅವನ ಮೈ ಕೈ ಮುಟ್ಟಿ ಸಂತಸವನ್ನು ಹಂಚಿಕೊಂಡಾಗ.. ಅವನಿಗಾದ ಆನಂದ ವಣರ್ಾನಾತೀತವಾಗಿತ್ತು. ಹಳೆಯ ಸ್ನೇಹದ ಹಳವಂಡೆ ಅವನ ಮುಖದಲ್ಲಿ ಹಳಹಳಿಸುತ್ತಿತ್ತು. ಹಾಗೆಯೇ ತೀವೃ ಅಂತಮರ್ುಖಿಯಾಗಿ ಭೋಜ ಹಿಂದಕ್ಕೆ ಸರಿದು ನಿಂತಾಗ ಅವನ ಕಣ್ಣಿನಿಂದ ನೀರು ಜಿನುಗುತ್ತಿತ್ತು… ಮನಸ್ಸಿನಲ್ಲಿ ಯಾವದೋ ಅಸಹನೀಯ ದುಗುಡವನ್ನು ಅನುಭವಿಸುತ್ತಿದ್ದನು… ಆದರೂ ತನ್ನ ದುಗುಡವನ್ನು ಮುಖದಲ್ಲಿ ತೋರ್ಪಡಿಸಲಾರದೆ ಕೃತಕ ನಗೆಯ ಮುಸುಕು ಹಾಕಲು ಪ್ರಯತ್ನಿಸುತ್ತಿದ್ದನು.
ಅಂತೂ ಚಲೋತ್ನಾಗ ವಿದ್ಯಾಕಲಿತು ದೊಡ್ಡ ನೌಕರಿ ಸೇರಿ ನೀನು ಒಳ್ಳೆಯ ಜೀವನ ನಡೆಸ್ತೀದಿ. ಆದರೆ…ನನ್ನ ಜೀವನ ಬಾಳಾ.. ಖೊಟ್ಟಿ ಐತಿ ಎಂದು ನಿಟ್ಟುಸಿರು ಹೊರಹಾಕುತ್ತಾ ತನ್ನ ದುರಾದೃಷ್ಟವನ್ನು ಹಳಿಯುತ್ತಾ ಖಿನ್ನಮನಸ್ಕನಾದನು.. ನನಗೂ ಭೋಜನ ಸ್ಥಿತಿಯನ್ನು ಕಂಡು ಕನಿಕರವೆನಿಸಿತು. ಅವನು ಓದಿನಲ್ಲಿ ಬಹಳ ಚುರುಕಿನ ವಿದ್ಯಾಥರ್ಿ. ಎಂತಹದೇ ಕಠಿಣ ಲೆಕ್ಕವೇ ಇರಲಿ ನಿರಾತಂಕವಾಗಿ ಬಿಡಿಸಿ ಬೇಷ್ ಅನ್ನಿಸಿಕೊಳ್ಳುತ್ತಿದ್ದವನು. ಆದರೆ ಭೋಜ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿ ಅಕ್ಷಮ್ಯ ಅಪರಾಧ ಮಾಡಿದನೆಂದು.. ಪದೇ ಪದೇ ಮನಸ್ಸು ಬೇಸರದಿಂದ ಅವನನ್ನು ಹಳಿಯುತ್ತಿತ್ತು. ಅವನೊಂದಿಗೆ ಮಾತನಾಡುವ ಹಂಬಲ, ಅವನ ಬಾಯಿಯಿಂದ ಊರ ಉಸಾಬರಿಯನ್ನು ತಿಳಿಯುವ ಕುತೂಹಲ, ಇನ್ನಿತರ ಗೆಳೆಯ ಮಜಕೂರ ತಿಳಿಯುವ ತವಕ ಹೆಚ್ಚಾಯಿತು. ಬಾಲ್ಯದ ಗೆಳೆಯ ಅಪರೂಪಕ್ಕೆ ಸಿಕ್ಕಿದಕ್ಕೋ ಅಥವಾ ಅವನ ಸ್ನೇಹದ ಸೆಳೆತಕ್ಕೋ ಗೊತ್ತಿಲ್ಲ.. ರಸ್ತೆಯಲ್ಲಿ ನಿಂತು ಅವನೊಂದಿಗೆ ಉಭಯ ಕುಶಲೋಪರಿ ಹರಟುತ್ತಿದ್ದಾಗ.. ಅದೇ ರಸ್ತೆಯಲ್ಲಿ ಮಹಾಮಡಿವಂತ ಹಾಗೂ ಸಿಡುಕ ಮಾಸ್ತರನೆಂದೇ ಹೆಸರುವಾಸಿಯಾಗಿದ್ದ ಬಾಲಿಹಳ್ಳಿ ಕಲ್ಲಪ್ಪ ಮಾಸ್ತರರು ದಪ್ಪನೆಯ ಕನ್ನಡಕವನ್ನು ಧರಿಸಿ ನಿಧಾನವಾಗಿ ಇತ್ತ ಬರುತ್ತಿರುವದನ್ನು ಕಂಡು ಇವರು ಬಾಲಿಹಳ್ಳಿ ಕಲ್ಲಪ್ಪ ಮಾಸ್ತರರೇ ಎಂದು ಖಾಯಸ್ ಆಯಿತು.
ಮಾಸ್ತರರ ಮೊದಲಿನ ಖದರು ಮಾಸಿರಲಿಲ್ಲವಾದರೂ ಅವರ ಗತ್ತು ನಿವೃತ್ತಿ ನಂತರವೇ ಮೆತ್ತಗಾಗಿತ್ತು. ಮಲ್ಲಿನ ಧೋತರದ ಚುಂಗನ್ನು ಮಾರುದ್ದ ಇಳಿ ಬಿಟ್ಟುಕೊಂಡು ಹಾದಿಯುದ್ದಕ್ಕೂ ಕರ್ಕಶವಾಗಿ ಕೆಮ್ಮುತ್ತಾ ಹಾದಿಯ ಪಕ್ಕದಲ್ಲಿಯೇ ಕಫವನ್ನು ಥೂ ಅಂತ ಉಗುಳಿ ಮುಜುಗರ ಪಡುತ್ತ, ಯಾರಾದರೂ ತಾನು ಕಫ ಉಗುಳುವದನ್ನು ನೋಡಿಯಾರೆ? ಎಂದು ಹಿಂದಕ್ಕೆ ತಿರುಗಿ ನೋಡಿ ಮತ್ತೆ ನಿಧಾನವಾಗಿ ಸಾಗಿ ಇತ್ತಲೇ ಬರುತ್ತಿದ್ದರು. ಕಲ್ಲಪ್ಪ ಮಾಸ್ತರರನ್ನು ಕಂಡಿದ್ದೇ ತಡ ಎದೆಯಲ್ಲಿ ಏನೋ ಒಂಥರಾ ಅವ್ಯಕ್ತ ಭಯ ನನ್ನ ಮನಸ್ಸನ್ನು ಥರ ಗುಡುವಂತೆ ಮಾಡಿತು. ಬಹಳ ಕಟ್ಟು ನಿಟ್ಟಿನ ಮಾಸ್ತರರು ಕಲಿಸುವದರಲ್ಲಿ ಬಾಲಹಳ್ಳಿ ಕಲ್ಲಪ್ಪ ಮಾಸ್ತರರನ್ನು ಸರಿದೂಗಿಸಲು ಬೇರೆ ಯಾವ ಮಾಸ್ತರರಿಂದಲೂ ಅಸಾಧ್ಯದ ಮಾತು ಅಂತ ಹಳ್ಳಿಯಲ್ಲಿ ಜನಜನಿತ ಮಾತು ರೂಢಿಯಲ್ಲಿತ್ತು. ಬಹಳ ಸಿಟ್ಟಿನ ಮಾಸ್ತರ ಲಿಂಬೆ ಹಣ್ಣಿನ ಗಾತ್ರದ ಕಣ್ಣು ಕಿಸಿದ್ರ ಸಾಕು ನಮಗೆಲ್ಲಾ ಉಚ್ಚೆಹೊಯ್ದುಕೊಳ್ಳುವಷ್ಟು ಭಯವಾಗುತ್ತಿತ್ತು. ಮಾಸ್ತರರು ಬಹಳ ಮಡಿವಂತಿಕೆಯವರು ಹಣೆಗೆ ವಿಭೂತಿ, ಅದರ ಮಧ್ಯದಲ್ಲಿ ನಾಜೂಕಿನಿಂದ ಇರಿಸಿದ ಕುಂಕುಮ ಬೊಟ್ಟು, ಕಿವಿಯ ಹಾಲಿಯ ಎರಡೂ ಬದಿಗೆ ಹಚ್ಚಿದ ಗಂಧ ಮತ್ತು ಕುಂಕುಮದ ಬೊಟ್ಟು… ಒಟ್ಟಾರೆ ಅವರ ವ್ಯಕ್ತಿತ್ವನ್ನು ನೋಡಿದ್ರೆ ಎಂತವರಿಗೂ ಭಕ್ತಿ ಬರುವಂತಿತ್ತು… ಅದಕ್ಕಾಗಿ ಸಾಕ್ಷಾತ್ ಕಲ್ಲಪ್ಪ ಮಾಸ್ತರರೇ ಎದುರಿಗೆ ಬರುವದನ್ನು ಕಂಡವನೇ ವಿದ್ಯಾರ್ಥಿ ದೆಸೆಯಲ್ಲಿ ಅವರ ಬಗ್ಗೆ ನನಗಿರುವ ಭಯ ಭಕ್ತಿಯನ್ನು ಒಟ್ಟುಗೂಡಿಸಿ ಅದೇ ಮುಗ್ಧತೆಯಿಂದ ಅವರ ಕಾಲಿಗೆರಗಿ ನಾನು ನಮಸ್ಕರಿಸಿದೆನು..

ಆಗ ಬಾಲಹಳ್ಳಿ ಕಲ್ಲಪ್ಪ ಮಾಸ್ತರರು ನನ್ನ ಮುಖವನ್ನೊಮ್ಮೆ ಹುಳು ಹುಳು ನೋಡುತ್ತ ದಂಗಾಗಿ ನಡುದಾರಿಯಲ್ಲಿ ನಿಂತಾಗ ಅವರಿಗೆ ನನ್ನ ಪರಿಚಯ ಆಗಲಿಲ್ಲ ಅನಿಸಿತು. ಸರ್ ನಾನ್ರೀ ರವಿ ನಿಮ್ಮ ಶಿಷ್ಯ ಎಂದಾಗಲೂ ನನ್ನ ಹಳೆಯ ಶಿಷ್ಯತ್ವವನ್ನು ನೆನಪಿಸಿಕೊಳ್ಳಲು ಒಂದೆರಡು ನಿಮಿಷವೇ ಆಯಿತು ಆಗ ನಾನು ನನ್ನ ಮನೆತನದ ಮೂಲವನ್ನು ಸವಿಸ್ತಾರವಾಗಿ ಬಿಚ್ಚಿಟ್ಟಾಗ ತಲೆ ಅಲ್ಲಾಡಿಸಿ ಓಹೋ..! ನೀನು ಶಿವಪ್ಪನ ಮಗ ರವಿ ಅಲ್ಲಾ? ಹೌದ್ರಿ.. ಸರ್ ಎಷ್ಟು ದೊಡ್ಡವನಾಗಿ ಬಿಟ್ಟಿಯಲ್ಲಪಾ ಈಗ ಎಷ್ಟು ಚಂದ ಕಾಣಸ್ತೀದಿ ಏ…. ನಿಮ್ಮಪ್ಪ ನಿನ್ನ ಸಡಗರ ನೋಡಲಾರದ ಲಗೂನ ಸತ್ತು ಹೋಗಿ ಬಿಟ್ಟ ಪಾಪ… ಏನ್ಮಾಡೋದು ಅವನ ನಸೀಬು ಹಾಂಗಿತ್ತು ಎನ್ನುತ್ತ ಅವರೇ ಮಾತನ್ನು ಮುಂದುವರೆಸಿ
ಏನು ಊರಕಡೆ ಬರೋದ ಬಿಟ್ಟು ಬಿಟ್ಟಿಯಲ್ಲ ಹೋದ್ರ ಹೋದ ಕಡೇನ ಗಪ್ ಆಗ ಬ್ಯಾಡ ಹುಟ್ಟಿದ ಊರು ಮರಿಬ್ಯಾಡ ತಿಳಿತನು, ಎಂದಾಗ ಅವರ ಮಾತಿಗೆ ನನ್ನ ಮನಸ್ಸು ತೀವ್ರ ಭಾವುಕವಾಯಿತು. ಮಾಸ್ತರರ ಮಮಕಾರ ನನ್ನ ಬಗ್ಗೆ ಇರಿಸಿದ ಕಾಳಜಿ ನನಗೆ ಹೆಚ್ಚು ಅಪ್ಯಾಯಮಾನವೆನಿಸಿತು. ಹಾಗೆಯೇ ಪಕ್ಕದಲ್ಲಿ ನಿಂತಿದ್ದ ಬೋಜನಿಗೂ ಇದೇ ಕಲ್ಲಪ್ಪ ಮಾಸ್ತರರು ಕಲಿಸಿದ್ದರಿಂದ ಏ ಬೋಜ ಮಾಸ್ತರ ನನಗ ನಿನಗ ಶಾಲೆ ಕಲಿಸಿದ ಮಾಸ್ತರ ಅದಾರ ಇವ್ರು ಅಂತವರ ಕಾಲಿಗೆ ನಮಸ್ಕಾರ ಮಾಡು ಎಂದಾಗ ಮಾಸ್ತರ ಬಗ್ಗೆ ಅವನಿಗೆ ಇರುವ ಎಲ್ಲಿಲ್ಲದ ಕೋಪ ಅವನ ಮೈತುಂಬಿಕೊಂಡಂತಾಗಿ ಮಾಸ್ತರ ಬಗ್ಗೆ ಅವನಿಗಿರುವ ಅಸಡ್ಡೆ ಅನಾದರ ಅವನ ಮುಖದಲ್ಲಿ ಪ್ರತಿಫಲಿಸಿತ್ತಿತ್ತು.
ರವಿ ಮಹಾ ಮಡಿವಂತ ಕಲ್ಲಪ್ಪ ಕಲಿಸಿದ ಗಣಿತ, ವಿಜ್ಞಾನ ಎಲ್ಲಾ ಪಾಠವನ್ನು ನಾನು ಆವಾಗ್ಲೇ ಮರೆತು ಬಟ್ಟೇನಿ ಅಷ್ಟ ಯಾಕ ನಾನು ತಪ್ಪು ಮಾಡಿದಾಗ ಬೆತ್ತದಿಂದ ನೀಡಿದ ಏಟನ್ನೂ ಮರೆತು ಬಿಟ್ಟೇನಿ, ಆದರೆ ಅಂವಾ ಕಲಿಸಿದ ಜಾತಿಯತೆಯ ಪಾಠ, ನನ್ನ ಜಾತಿ ಹೆಸರು ಹಿಡಿದು ಹಿಗ್ಗಾಮಗ್ಗಾ ಬೈದಂತ ಜೀವನದ ಕಹಿ ಪಾಠನ ನನಗ ಮರೆಯಾಕ ಆಗವಲ್ತು ನೋಡು, ಈ ಬಾಲಹಳ್ಳಿ ಕಲ್ಲಪ್ಪ ಮಾಸ್ತರರ ಮಹಾ ಮಡಿವಂತಿಕೆನ ನನ್ನ ಜೀವನಾನ ಹಾಳು ಮಾಡಿ ಬಿಟ್ಟೈತಿ ಎಂದು ಎದೆಯ ಸಂಕಟದಿಂದ ಜೋರಾಗಿ ಹೇಳಿದ ಮಾತು ವಯೋ ವೃದ್ಧ ಮಾಸ್ತರರ ಕಿವಿ ತಮಟೆಗೆ ಸ್ಪಷ್ಟವಾಗಿ ಅಪ್ಪಳಿಸಲೇ ಇಲ್ಲವಾಗಿದ್ದರಿಂದ ಮಾಸ್ತರರು ಅವನತ್ತ ಒಮ್ಮೆ ತಿರುಗಿ ನೋಡಿ, ದೇಶಾವಠಿ ನಗೆ ಬೀರುತ್ತಾ ಆಂಗಿಕಭಾಷೆಯಿಂದ ನನ್ನನ್ನೂ ಅವನನ್ನು ಬೀಳ್ಕೋಟ್ಟು ಮುಂದೆ ಕೆಮ್ಮುತ್ತ ಸಾಗಿ ಹೋದರು. ಕಲ್ಲಪ್ಪ ಮಾಸ್ತರರನ್ನು ಕಂಡು ಭಾವೋದ್ವೇಗದಿಂದ ಕಣ್ಣೀರು ಹಾಕುತ್ತ ನಿಂತಿದ್ದ ಬೋಜನನ್ನು ಸಂತೈಸುತ್ತಾ ಅವನೊಂದಿಗೆ ಅಲ್ಲಿಯೇ ಬೇವಿನ ಮರದ ನೆರಳಿಗೆ ನಿಂತಾಗ ನನ್ನ ವಿದ್ಯಾರ್ಥಿ ಜೀವನದ ನೆನಪುಗಳ ಒಂದೊಂದಾಗಿ ಮನಸ್ಸಿನ ಪರದೆಯ ಮೇಲೆ ಕಪ್ಪು ಬಿಳುಪಿನ ಚಿತ್ರದ ರೀಲಿನಂತೆ ಮೂಡುತ್ತಿದ್ದವು.
ಬಾಲಹಳ್ಳಿಯ ಕಲ್ಲಪ್ಪ ಮಾಸ್ತರರ ಮಡಿವಂತಿಕೆ ಮತ್ತು ಜಾತಿಯತೆಯ ಕೊಂಕು ನುಡಿಗಳು ನಿಷ್ಕರಣೀಯವಾಗಿದ್ದವು… ಬಹುಶಃ ಹಿಟ್ಲರ ಅನುಯಾಯಿಯಂತೆ ಕ್ರೂರವಾಗಿ ವತರ್ಿಸಿ ಮುಗ್ಧ ಮಕ್ಕಳ ಅದೂ ಕೆಳಜಾತಿಯ ಮಕ್ಕಳನು ನಿಷ್ಕರುಣೀಯವಾಗಿ ಕಾಡುತ್ತಿದ್ದರು.
ಜಾಲಹಳ್ಳಿ ಕಲ್ಲಪ್ಪ ಮಾಸ್ತರರು ಮಹಾ ಮಾನವತಾವಾದಿಯಂತೆ ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದರು. ಜಾತ್ಯಾತೀತಯ ನಿಲವು ಅವರ ತುಟಿಯಂಚಿನಲ್ಲಿ ಕುಣಿಯುವ ಮೂಲ ಮಂತ್ರದಂತೆ ಅಗಸ್ಟ್ 15ರ ಸ್ವಾತಂತ್ರ್ಯೋತ್ಸವ ಹಾಗೂ ಗಾಂಧೀ ಜಯಂತಿಯ ದಿನಗಳಂದು ಓತೋಪ್ರೋತವಾಗಿ ಅವರ ಭಾಷಣದಲ್ಲಿ ಸೇರಿ ಹೊರಬರುತ್ತಿದ್ದವು. ಆದರೆ ಅವರ ಮಾತಿಗೂ ಕೃತಿಗೂ ಹಾಗೂ ವಾಸ್ತವಕ್ಕೂ ಒಂದಕ್ಕೊಂದು ತಾಳಮೇಳ ಇರುತ್ತಿರಲಿಲ್ಲವೆನ್ನುವದು ಅದು ಬೇರೆ ವಿಷಯ.
ನಮಗೆಲ್ಲಾ ತೋಟದಲ್ಲಿ ಊಟ ಎಂಬ ಪಾಠವನ್ನು ಪ್ರಾಯೋಗಿಕವಾಗಿ ಮಾಡುವದಕೋಸ್ಕರ ಶಾಲಾ ಮಕ್ಕಳನ್ನು ಹಳ್ಳದ ದಡದಲ್ಲಿರುವ ಬಂಜೇಗೌಡ್ರ ತರಕಾರಿ ತೋಟಕ್ಕೆ ಕರೆದುಕೊಂಡು ಹೋಗಿದ್ರು ತೋಟದಲ್ಲಿಊಟ ಎಂಬುದು ನಮಗೆಲ್ಲಾ ಹೊಸ ಅನುಭವ ನೀಡಿತ್ತು ಎಲ್ಲಾ ಮಕ್ಕಳು ಸಾಲಾಗಿ ಒಂದೇ ಒಂದೇ ನಾವೆಲ್ಲರೂ ಒಂದೇ ಎಂಬ ಏಕತೆಯ ಹಾಡನ್ನು ಹಾಡುತ್ತ ಸಂತಸದಿಂದ ಸಾಗುತ್ತಿದ್ದೆವು. ಆಗತಾನೆ ವೈಶಾಖ ಹೊಸದಾಗಿ ಮದುವೆಯಾವ ಮದುವಣಗಿತ್ತಿಯಂತೆ ನಾಜೂಕಾಗಿದ್ದರಿಂದ ಅಷ್ಟೊಂದು ಪ್ರಖರವಲ್ಲದ ಉರಿ ಬಿಸಿಲನ್ನು ಹರಡಿತ್ತು. ಅಂದರೆ ಉತ್ತರಾಯಣ ಕಾಲ ಆಗ ತಾನೆ ಪ್ರಾರಂಭವಾಗಿದ್ದರಿಂದ ಬಿಸಿಲಿನ ಅನುಭವ ಅಷ್ಟೊಂದು ತಾಪದಾಯಕವಾಗಿರಲಿಲ್ಲ. ತೋಟದಲ್ಲಿ ಟೊಮೆಟೋ ಪುಂಡಿ, ಮೆಂತೆಸೊಪ್ಪು, ಮೂಲಂಗಿ, ಮೆಣಸಿನಕಾಯಿ ಸಸಿಗಳು ಸೋಂಪಾಗಿ ಬೆಳೆದು ತೋಟದ ಹಸಿರು ಕಳೆ ಕಣ್ಣಿಗೆ ರಾಚುತ್ತಿತ್ತು. ಆ ತೋಟ ತಂಗಾಳಿಯ ಆಡಂಬೋಲಿನಂತಾಗಿದ್ದರಿಂದ ಬಿಸಿಲಿನಲ್ಲಿ ತಂಗಾಳಿ ಸುಳಿಯುತ್ತಾ ಪ್ರಖರತೆಯನ್ನು ಹನಿದ ಅನುಭವವಾಗಿತ್ತು.ಅಂತೂ ಎಲ್ಲ ಮಕ್ಕಳು ತಮ್ಮ ಬುತ್ತಿಗಂಟನ್ನು ಒಂದೆಡೆ ಸೇರಿಸಿ ಇಡುವಂತೆ ಮಾಸ್ತರರು ಹುಕುಂ ನೀಡಿದ್ದರಿಂದ, ಎಲ್ಲಾ ಮಕ್ಕಳು ತಮ್ಮ ಬುತ್ತಿ ಗಂಟನ್ನು ಜಾತಿ, ಅಂತಸ್ತು ಯಾವ ಬೇಧವಿಲ್ಲದೇ ಒಟ್ಟಾಗಿ ಸೇರಿಸಿಟ್ಟಿದ್ದರು. ನಾವೆಲ್ಲರೂ ಒಂದೇ ಎಂದು ಹಾದಿಯುದ್ದಕ್ಕೂ ಹಾಡುತ್ತ ಬಂದಿದಕ್ಕೋ.. ಏನೋ ಇಲ್ಲಿ ಏಕತೆಯನ್ನು ಸಾಧಿಸಿದ ಸಾರ್ಥಕತೆಯಂತೆ ಪ್ರಾರಂಭಿಕವಾಗಿ ಅನಿಸಿತ್ತು. ಆದರೆ ನಾವು ಅಂದುಕೊಂಡಿದ್ದೇ ಸತ್ಯ ಆಗಿರಲಿಲ್ಲ. ಮೇಲ್ಜಾತಿಯ ಮಕ್ಕಳ ಬುತ್ತಿಯೊಂದಿಗೆ ದಲಿತರ ಕೇರಿಯ ಮಕ್ಕಳು ಬುತ್ತಿಯನ್ನು ಸೇರಿಸಿಟ್ಟಿದ್ದೇ ಮಹಾ ಪ್ರಮಾದಕ್ಕೆ ಕಾರಣವಾಗಿತ್ತು.
ಎಲ್ಲಾ ಮಕ್ಕಳ ಬುತ್ತಿ ಗಂಟಿನೊಂದಿಗೆ ಕಲ್ಲಪ್ಪ ಮಾಸ್ತರರ ಬುತ್ತಿ ಗಂಟು ಸೇರಿಕೊಂಡಿದ್ದು ಮತ್ತೊಂದು ಪ್ರಮಾದವಾಗಿತ್ತು. ಇದರಿಂದ ಕೆಂಡಾಮಂಡಲರಾದ ಕಲ್ಲಪ್ಪ ಮಾಸ್ತರರು ದಲಿತರ ಕೇರಿ ಮಕ್ಕಳಾದ ಬೋಜ, ಮಂಜ, ಮಾಚ, ಕರಿಯರನ್ನು ಲೇ ಹೊಲಿಯ ಸೂಳೆ ಮಕ್ಕಳಾ ಬರ್ರೀ ಇಲ್ಲಿ ಎನ್ನುತ್ತಾ ಕರೆದು ಫಟಾರನೇ ಕೆನ್ನೆಗೆ ಬಾರಿಸಿ ನನ್ನ ಮಡಿವಂತಿಕೆ ಹಾಳು ಮಾಡಿಬಿಟ್ರಲ್ಲೋ ಮುಂಡೆ ಮಕ್ಕಳ ಎಂದು ಹಿಗ್ಗಾ ಮುಗ್ಗಾ ಬೈದರು. ದಲಿತ ಮಕ್ಕಳ ಬುತ್ತಿ ಗಂಟು ಕಲ್ಲಪ್ಪ ಮಾಸ್ತರ ತಾಗಿಕೊಂಡೇ ಇದ್ದುದರಿಂದ ಮಾಸ್ತರರು ತಳಮಳಸಿ ತತ್ತರಗೊಂಡು ವರ ಮಡಿವಂತಿಕೆಗೆಗೆ ಮೈಲಿಗೆಯ ಭೂತ ಹಿಡಿದಂತಾಗಿ,ತೋಟದಲ್ಲಿಯ ಪುಂಡಿಯ ಸಸಿಯನ್ನು ಕಿತ್ತು ಅದರ ಬಲರ್ಿನಿಂದ ರಣ ರಣ ಉರಿಯುವ ಬಿಸಿಲಿನಲ್ಲಿ ದಲಿತ ಕೇರಿಯ ಮಕ್ಕಳ ಬೆನ್ನಿಗೆ ರಪ ರಪನೇ ಬಾರಿಸುತ್ತ ಅವರ ಮೈಯಲ್ಲಿ ಮಹಾ ಪ್ರೇತ ಆವಾಹನೆಯಾದವರಂತೆ ವತರ್ಿಸುತ್ತಿದ್ದರು. ತಮ್ಮ ಆ ಜನ್ಮ ವೈರಿಯ ಮೇಲೆ ಧಾಳಿಗಿಳಿದವರಂತೆ ಹಲ್ಲು ಗಿಟಕರಿಸಿ ಲೇ ಹೊಲೆಯ ಸೂಳೆ ಮಕ್ಕಳ ಮಡಿ ಮೈಲಿಗಿ ಅನ್ನೋದು ನಿಮಗ ಗೊತ್ತಾಗುದಲ್ಲನು? ಎನ್ನುತ್ತಿದ್ದಾಗ ಮಡಿವಂತಿಕೆಯ ಬಾಯಲ್ಲಿ ಎಂದೂ ಬಾರದ ಕರ್ಣಕಠೋರ ಅಶ್ಲೀಲ ಪದಗಳನ್ನು ಪ್ರಯೋಗಿಸಿ ವಾಚಾಮಗೋಚರ ಬೈಯುತ್ತಿದ್ದರು. ನಿಮ್ಮ ಬುತ್ತಿಗಂಟು ಪ್ರತ್ಯೇಕ ಯಾಕ ಇಡಲಿಲ್ಲ ಎಲ್ಲಾ ಮಕ್ಕಳ ಜಾತಿ ಕೆಡಿಸಿ ಬಿಟ್ರೆಲ್ಲೋ ನಿಮ್ಮೌರ…ಎಂದು ಅವರ ಬೆನ್ನ ಮೇಲೆ ಮತ್ತೆ ಪುಂಡಿಯ ಬರ್ಲಿನಿಂದ ಬಾರಿಸಿದಾಗ ಆ ಮಕ್ಕಳು ಕಣ್ಣೀರು ಸುರಿಸುತ್ತ ಪ್ರಾಣ ಸಂಕಟದಿಂದ ಗೋಳಿಡುತ್ತ ನಾವು ಮನುಷ್ಯರಾಗಿ ಹುಟ್ಟಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಿದ್ದರು.
ಆದಿನ ಮಡಿವಂತ ಕಲ್ಲಪ್ಪ ಮಾಸ್ತರರ ಮಡಿಭಂಗ ಆಗಿದ್ದರಿಂದ ಅವರು ಇಡೀ ದಿನ ಉಪವಾಸವೇ ಉಳಿಯಬೇಕಾಯಿತು. ಆದರೆ ಇನ್ನುಳಿದ ಮಕ್ಕಳು ಒಟ್ಟಾಗಿ ಊಟ ಮಾಡಿದರೆ, ಮಾಸ್ತರರ ಅಣತಿಯಂತೆ ದಲಿತ ಮಕ್ಕಳೇ ಪ್ರತ್ಯೇಕವಾಗಿ ಕುಳಿತ ಆ ಕೆಟ್ಟ ದೃಶ್ಯ ಹಾಗೂ ಮಾಸ್ತರರು ನೀಡಿದ ಪುಂಡಿ ಬಲರ್ಿನ ಏಟು ತಿಂದ ನರಕ ಸದೃಶ್ಯ ಸ್ಥಿತಿ ಬೋಜಪ್ಪನನ್ನು ಸದಾ ಕಾಡುತ್ತಿತ್ತು.. ಪ್ರತಿ ಸಾರಿ ಕಲ್ಲಪ್ಪ ಮಾಸ್ತರರು ಕಂಡಾಗ ನಮ್ಮ ಜೀವನ ಹಾಳು ಮಾಡಿದ ಮಹಾನುಭಾವರಿವರು ಎಂದು ಅಸಹಾಯಕತೆಯಿಂದ ಉಸಿರು ಹಾಕುತ್ತಿದ್ದನು.
ಬೋಜಪ್ಪ ಬಹಳ ಬುದ್ಧಿವಂತ ಚುರುಕಿನ ಹುಡುಗ ಲೆಕ್ಕದಲ್ಲಿ ಪಟಪಟನೇ ಉತ್ತರಿಸುತ್ತಿದ್ದು ಇಡೀ ಕ್ಲಾಸಿಗೆ ಹೈಕ್ಲಾಸ ವಿದ್ಯಾಥರ್ಿಯಾಗಿದ್ದನು. ಅವನ ಚುರುಕುತನಕ್ಕೆ ಶಿಕ್ಷಣಾಧಿಕಾರಿಯೊಬ್ಬರು ಶಾಲೆಗೆ ವಿಸಿಟ್ ಮಾಡಿದಾಗ ದಲಿತ ವಿದ್ಯಾಥರ್ಿ ಬಹಳ ಹುಷಾರ್ ಅದಾನ್ರೀ ಎಂದು ಬೆನ್ನುತಟ್ಟಿ ಬಹುಮಾನ ಕೊಟ್ಟಿದ್ದರು. ಆದ್ರೇ ಅದ್ಯಾಕೋ ಕಲ್ಲಪ್ಪ ಮಾಸ್ತರರು ಬೋಜಪ್ಪನನ್ನು ಕಂಡರೆ ಸಾಕು ಕೆಂಡಾಮಂಡಲ ಆಗಿ ಬಿಡುತ್ತಿದ್ದರು. ಅವನು ಸರಿಯಾಗಿ ಲೆಕ್ಕ ಮಾಡಿದ್ರೇ ಹೊಗಳುವುದನ್ನು ಬಿಟ್ಟು ತೆಗಳುತ್ತಾ, ಹೋಗು ನೀನೇನು ಬಾಳಾ ಶಾಣ್ಯಾ ಆಗಿ ಏನು ಉದ್ದಾರ ಮಾಡ್ತೀದಿ?.
ನೀವು ಗೌರ್ನಮೆಂಟು ಮಕ್ಕಳು ಗೌರ್ನಮೆಂಟು ನಿಮಗ ಬಾಳಾ ಸೌಲತ್ತು ಕೊಡತೈತಿ ಎಂದು ತಿರಸ್ಕಾರದ ಮಾತನಾಡಿದಾಗ, ಸೂಕ್ಷ್ಮ ಮನಸ್ಸಿನ ಬೋಜಪ್ಪನಿಗೆ ಮಮರ್ಾಘಾತವಾದಂತಾಗಿ ತಲೆತಗ್ಗಿಸಿ ಮಾಸ್ತರರ ಮೂದಲಿಕೆಯ ಮಾತಿಗೆ ಇಡೀದಿನ ಕದ್ದು ಮುಚ್ಚಿ ಅತ್ತಿದ್ದೂ ಉಂಟು, ಒಂದು ಸಾರಿ ಸೋಮವಾರ ಶ್ರಾವಣಮಾಸದಲ್ಲಿ ಪಕ್ಕದ ಊರಿನಲ್ಲಿ ಜಾತ್ರಾ ಪ್ರಯುಕ್ತ ಸಾರ್ವಜನಿಕ ಅನ್ನ ಸಂತರ್ಪಣೆ ಇರೋದರಿಂದ ದಲಿತರ ಕೇರಿಯ ಮಕ್ಕಳು ಊಟಕ್ಕೆಂದು ಹೋಗಿದ್ದು ಆ ದಿನ ಶಾಲೆಗೆ ಚಕ್ಕರ ಆಗಿ ಸಾರ್ವಜನಿಕ ಅನ್ನ ಸಂತರ್ಪಣೆಯ ಊಟಕ್ಕೆ ಹಾಜರಾಗಿದ್ದರಿಂದ ಅವರ ಗೈರು ಹಾಜರಾತಿ ಮಾಸ್ತರರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಆ ದಿನ ಹೇಗೋ ಸಿಟ್ಟನ್ನು ಸಹಿಸಿಕೊಂಡ ಮಾಸ್ತರರು ಮಂಗಳವಾರ ಮರುದಿನದವರೆಗೆ ಅವರು ಶಾಲೆಗೆ ಬರುವುದನ್ನೇ ಕಾಯುತ್ತಿದ್ದರು. ಮರುದಿನ ಶಾಲಾ ಪ್ರಾರ್ಥನೆಯಾಯಿತು. ಆದ ನಂತರ ನಾವೆಲ್ಲಾ ತರಗತಿ ಕೊಠಡಿಗೆ ಹೋದೆವು ಎಲ್ಲಾ ಮಕ್ಕಳ ಹೆಸರನ್ನು ಪ್ರತ್ಯೇಕವಾಗಿ ಕೂಗಿ ಹೇಳುತ್ತಾ ಕಲ್ಲಪ್ಪ ಮಾಸ್ತರರು ಬೋಜಪ್ಪನ ಹೆಸರು ಕೂಗುತ್ತಿದ್ದಂತೆಯೇ ಸಿಟ್ಟಿನಿಂದ ಕೈಯಲ್ಲಿ ಬೆತ್ತವನ್ನು ಆಡಿಸುತ್ತ
ಹೊಲೆಯಾರ ಹುಡುಗೂರ…. ಎದ್ದು ನಿಲ್ರೀ.. ಎಂದಿದ್ದಷ್ಟೇ ತಡ ಬೋಜ, ಮಂಜ, ಕರಿಯಾ, ಕೆಪ್ಪ ಎದ್ದು ನಿಂತರು.
ನಿನ್ನೆ ಎಲ್ಲಿಗೆ ಹೋಗಿದ್ರೋ ಬೋಳಿ ಮಕ್ಕಳ? ಎಂದಾಗ ಪಕ್ಕದ ಹಳ್ಳಿಯಲ್ಲಿ ಜಾತ್ರೆ ಸಲುವಾಗಿ ಊಟ ಇತ್ತು ಸರ್ ಊಟಕ್ಕೆ ಹೋಗಿದ್ದೇವು. ಎಂದಿದ್ದೇ ತಡ ಮೊದಲು ಬೋಜನನ್ನು ಮೈ ಹುಣ್ಣುಬರುವಂತೆ ಬೆತ್ತದಿಂದ ಬಾರಿಸಿಯೇ ಬಿಟ್ಟರು. ಬೋಜನಿಗೂ ಈ ಚಿತ್ರ ಹಿಂಸೆ ಸಾಕಾಗಿತ್ತು. ಅವನು ಬಹುಕಾಲದಿಂದ ಮಾಸ್ತರರಿಂದ ಸಹಿಸಿಕೊಂಡು ಬಂದಿದ್ದ ಅವಮಾನ ನೋವು ಒಮ್ಮಲೇ ಸ್ಫೋಟಗೊಂಡು ರ್ರೀ ಕಲ್ಲಪ್ಪ ಮಾಸ್ತರ, ನೀವು ನನಗ ಹೊಡಿಬ್ಯಾಡ್ರೀ ನಾವು ಇನ್ನು ಯಾವ ಕಾಲಕ್ಕೂ ಈ ಶಾಲೆಯ ಹತ್ತಿರ ಸುಳಿಯೋದಿಲ್ಲ ಲೇ ಮಂಜ, ಕರಿಯಾ, ಕೆಪ್ಪ, ನೀವು ಹೊಡಿಸಿಗೋ ಬ್ಯಾಡ್ರೀ ಓಡ್ರೀ ಇಲ್ಲಿಂದ ಎಂದಿದ್ದೇ ತಡ ದಲಿತ ಕೇರಿಯ ಮಕ್ಕಳು ಆವತ್ತು ಓಟಕಿತ್ತು ತರಗತಿಯಿಂದ ಮಾಯಾವಾಗಯೇ ಬಿಟ್ಟರು.. ಬೋಜನೇ ತಮಗೆ ಮಹಾಮುಕ್ತಿ ನೀಡಿದನೆಂದು ಆ ಮಕ್ಕಳು ಅವನನ್ನು ಹೊಗಳಿರಬೇಕು. ಅಂತೂ ಬೋಜನೂ ಮಾಸ್ತರ ಕೈಯಾಗಿನ ಬೆತ್ತವನ್ನು ಕಸಿದುಕೊಂಡು ತರಗತಿಯ ಇನ್ನೂಳಿದ ಮಕ್ಕಳಿಗೆ ಬತರ್ಿನ್ರೋ ಗೆಳೆಯರೆ ಎಂದು ಕಣ್ಣೀರು ಸುರಿಸಿ ಈ ಮಡಿವಂತಿಕೆಯ ಕಲ್ಲಪ್ಪ ಮಾಸ್ತರರಿಗೆ ಈ ಶಾಲೆ ಸೀಮಿತವಾಗಿರಲಿ ಎಂದು ಸಿಟ್ಟಿನಿಂದ ಕೂಗಿ ಕಲಿಯಲು ವಿಧಾಯ ಹೇಳಿ ಭರಾಟೆಯಿಂದ ಅಲ್ಲಿಂದ ಓಡ ಕಿತ್ತ ಬೋಜನನ್ನು ಹಿಡಿಯಲು ಎಷ್ಟೇ ಹರಸಾಹಸಪಟ್ಟರೂ ಅವನು ಕೈಗೆ ಸಿಗಲೇ ಇಲ್ಲ ಅಂತೂ ಆವತ್ತು ಶಾಲೆಯಿಂದ ಕಾಲ್ಕಿತ್ತ ಆ ದಲಿತ ಮಕ್ಕಳು ಇನ್ನುವರೆಗೂ ಶಾಲೆಯತ್ತ ಮುಖಮಾಡಿಲ್ಲ. ಬಂಜೇಗೌಡ್ರ ಹಾಗೂ ದಾದಪ್ಪ ಸಾಹುಕಾರರ ತೋಟದಲ್ಲಿ ಕೂಲಿ ಆಳುಗಳಾಗಿ ಜೀವಂತ ನಿದರ್ಶನಗಳಾಗಿ ಶ್ರಮಿಕ ಗೊಂಬೆಗಳಾಗಿ ಕಾಣುತ್ತಿದ್ದವು.
ಇದೆಲ್ಲವನ್ನು ನೆನಪಿಸಿಕೊಂಡು ಮನೆಯ ದಾರಿಯನ್ನು ಕ್ರಮಿಸುತ್ತಿದ್ದಾಗ ಬೋಜು ಅತಿಭಾವುಕನಾಗಿ ಜೀವಂತ ಶವದ ಕಳೆಯನ್ನು ಹೊತ್ತ ಶಿಕ್ಷಣದಿಂದ ವಂಚಿತನಾದ ತನ್ನ ಬದುಕನ್ನು ಹಳಿಯುತ್ತಾ ನನ್ನೊಂದಿಗೆ ಆತ್ಮೀಯವಾಗಿ ಬರುತ್ತ ತನ್ನೊಂದಿಗೆ ಅವತ್ತು ಶಾಲೆಯಿಂದ ಓಡಿ ಹೋಗಿದ್ದ ಇತರ ಮಕ್ಕಳಾಗಿದ್ದ ಮಂಜ, ಕರಿಯಾ, ಕೆಪ್ಪ ಧನಿಕರ ತೋಟದಲ್ಲಿ ಕೂಲಿ ಆಳುಗಳಾಗಿ ಬುಟ್ಟಿ ಹೊತ್ತು ಹೋಗುತ್ತಿರುವುದನ್ನು ನನಗೆ ತೋರಿಸಿದಾಗ ನನಗೆ ಅಯ್ಯೋ ಎನಿಸಿತು. ನನ್ನ ಪಾಲಿನ ಆದರ್ಶ ಮಾಸ್ತರರಾಗಿದ್ದ ಕಲ್ಲಪ್ಪ ಮಾಸ್ತರರು ಹೀಗೆ ಮಾಡಿದ್ದು ಸರಿಯೇ? ಎಂದು ಪ್ರಶ್ನೆ ನನ್ನೆದುರಿಗೆ ಬೃಹದಾಕಾರವಾಗಿ ಮೂಡಿತ್ತು….

‍ಲೇಖಕರು G

April 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: