ಮಾಧ್ಯಮ ಸಂಶೋಧನೆಗೆ ಹೊಸ ಕೊಡುಗೆ
-ಜಿ ಎನ್ ಮೋಹನ್
ಮಾಧ್ಯಮದ ಬಗ್ಗೆ ಇರುವ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಮಾಧ್ಯಮ ಕುರಿತ ಅಧ್ಯಯನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಬಿ ಜಿ ಕಲಾವತಿ ಒಂದು ಉತ್ತಮ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅವರು ಸಲ್ಲಿಸಿದ ‘ಜಾಹೀರಾತುಗಳಲ್ಲಿ ಮಹಿಳಾ ಪ್ರನಿಧೀಕರಣ’ಪ್ರೌಢ ಪ್ರಬಂಧ ಈಗ ಪ್ರಕಟವಾಗಿದೆ. ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಕೃತಿಯನ್ನು ಹೊರತಂದಿದೆ.
ಜಾಹಿರಾತು, ಆ ಮೂಲಕ ಮಾರುಕಟ್ಟೆ ಪ್ರಪಂಚ ಇಂದು ಮಾಧ್ಯಮದ ರೀತಿಯನ್ನೇ ಬದಲಾಯಿಸಿದೆ. ಜಾಹಿರಾತು ಮಾಧ್ಯಮಗಳನ್ನು ಮಾತ್ರವಲ್ಲ ಬದುಕಿನ ಶೈಲಿಯನ್ನೇ ಬದಲಿಸಿದೆ. ಜಾಹಿರಾತು ಎಂದಾಕ್ಷಣ ಅದು ಮಹಿಳೆಯನ್ನು ಹೇಗೆ ಮೂಲೆಗೆ ತಳ್ಳುತ್ತಾ ಆಕೆಯನ್ನು ಲೈಂಗಿಕ ವಸ್ತುವಾಗಿ ಚಿತ್ರಿಸುತ್ತಾ ಹೋಗುತ್ತದೆ ಎನ್ನುವುದೇ ಇದುವರೆಗಿನ ಚರ್ಚೆಯ ವಸ್ತುವಾಗಿತ್ತು. ಜಾಹಿರಾತು ಕುರಿತ ಮಾತುಗಳು ಅಷ್ಟರ ಮಟ್ಟಿಗೆ ಸೀಮಿತವಾಗಿತ್ತು. ಆದರೆ ಕಲಾವತಿ ಆ ಚರ್ಚೆಯ ಕ್ಯಾನ್ವಾಸ್ ಅನ್ನು ವಿಸ್ತರಿಸಿದ್ದಾರೆ. ಜಾಹಿರಾತು ಎನ್ನುವುದು ಲಾಭದ ಒಂದೇ ನೆಲೆಯ ಮೇಲೆ ನಿಂತಿರುವ ಕ್ಷೇತ್ರ. ಅದು ತನಗೆ ಅನುಕೂಲವಾಗುವ ಎಲ್ಲಾ ಪ್ರತಿಮೆಗಳನ್ನೂ ಬಳಸಿಕೊಳ್ಳುತ್ತದೆ. ಅದರಲ್ಲೂ ಜನರ ಮನದಲ್ಲಿ ಆಳವಾಗಿ ಬೇರು ಬಿಟ್ಟಿರುವ ನಂಬುಗೆಗಳನ್ನು ಕೈಗೆತ್ತಿಕೊಳ್ಳುವುದು ಅದಕ್ಕೆ ಸುಲಭ ಎನ್ನುವುದಕ್ಕೆ ಅಧ್ಯಯನದ ಮೂಲಕ ಸಾಕ್ಷಿ ನೀಡಿದ್ದಾರೆ.
ಆದರೆ ಜಾಹಿರಾತು ಪ್ರಪಂಚ ಅಷ್ಟೇ ಅಲ್ಲ. ಜಾಹಿರಾತು ಅದರ ಹಿಂದೆ ನಿಂತಿರುವ ಮಾರುಕಟ್ಟೆ ಶಕ್ತಿಗಳು ಸರ್ಕಾರವನ್ನು ಕೊಳ್ಳಬಲ್ಲವು, ಸರ್ಕಾರವನ್ನು ಬೀಳಿಸಬಲ್ಲವು, ದೇಶ ದೇಶಗಳ ಬಜೆಟ್ ಬರೆಯಬಲ್ಲವು. ತಮಗೆ ಬೇಕಾದ ಮೌಲ್ಯಗಳನ್ನು ಬಿತ್ತಬಲ್ಲವು. ಆದರೆ ಈ ಅಂಶಗಳ ಬಗ್ಗೆ ಬೆಳಕು ಚೆಲ್ಲುವುದು ಜಾಹೀರಾತಿನ ಜಾಗತೀಕರಣದ ಸ್ವರೂಪವನ್ನೇ ಬಯಲಿಗೆಳೆಯಲು ಸಾಧ್ಯವಾಗುತ್ತಿತ್ತು. ಕಲಾವತಿ ಜಾಹೀರಾತುಗಳಲ್ಲಿ ಮಹಿಳೆಯ ಪ್ರತಿನಿಧೀಕರಣವನ್ನು ಮಾತ್ರ ಕೈಗೆತ್ತಿಕೊಂಡಿದ್ದಾರೆ. ಆದರೆ ಹೀಗೆ ಚರ್ಚಿಸುವಾಗಲೂ ಜಾಹೀರಾತಿನ ಸಾಂಸ್ಕೃತಿಕ ರಾಜಕೀಯವನ್ನು ಮುಟ್ಟದೇ ಹೋಗಲು ಸಾಧ್ಯವಾಗುವುದಿಲ್ಲ. ಕಲಾವತಿ ತಮ್ಮೆಲ್ಲಾ ಮಿತಿಗಳ ಮಧ್ಯೆಯೂ ಜಾಹೀರಾತಿನ ಆಟವನ್ನು ಸಾಕಷ್ಟು ಚಿತ್ರಿಸಿದ್ದಾರೆ ಎಂಬುದು ಈ ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಮುನ್ನುಡಿಯಲ್ಲಿ ವಿ ಬಿ ತಾರಕೇಶ್ವರ್ ಅವರು ಸಂಶೋಧನೆ ಎನ್ನುವುದೇ ಕಣ್ಣಪಟ್ಟಿ ಕಟ್ಟಿಕೊಂಡ ಕುದುರೆಯ ನೋಟ ಎಂದು ವಿಷಾದಿಸಿದ್ದಾರೆ. ಆದರೆ ಕಲಾವತಿ ಅವರ ಅಧ್ಯಯನ ಹಾಗೆ ಆಗಿಲ್ಲ ಎನ್ನುವುದು ಸಮಾಧಾನದ ಅಂಶ. ಕಲಾವತಿ ಅವರಿಗೆ ಡಾಕ್ಟರೇಟ್ ಸಿಕ್ಕ ನಂತರವೂ ಸಂಶೋಧನೆ ನಡೆಸಲು ಈ ವಸ್ತು ಅನುವು ಮಾಡಿಕೊಡುತ್ತದೆ. ಹಾಗಾಗಿ ಈ ಪುಸ್ತಕ ಜಾಹೀರಾತಿನ ಲೋಕದ ಬಗ್ಗೆ ಮೊದಲ ಮೆಟ್ಟಿಲು. ಇನ್ನಷ್ಟು ಅಧ್ಯಯನ ಇವರಿಂದ ಜರುಗಲಿ.







ಬಿ.ಜಿ ಕಲಾವತಿ ಅವರ ಸಂಶೋಧನ ಪ್ರಬಂಧವನ್ನು ಓದಿದ್ದೇನೆ. ಆದರೆ ಪುಸ್ತಕ ರೂಪದಲ್ಲಿ ಮುದ್ರಿಸುವ ಮುನ್ನ ಮತ್ತೆ ಕೆಲವು ಸಂಗತಿಗಳನ್ನು ತಿದ್ದಿದ್ದಾರೋ ಇಲ್ಲವೋ ತಿಳಿಯದು. ಪುಸ್ತಕ ನೋಡಬೇಕಿದೆ. ಕಲಾವತಿ ಒಳ್ಳೆಯ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದಾಳೆ ಎನ್ನುವ ಮೆಚ್ಚುಗೆ ನಮಗೆಲ್ಲಾ ಇತ್ತು. ಕಾರಣ ಕಲಾವತಿ ನಾನು ಒಂದೇ ಬ್ಯಾಚಿನ ಸಂಶೋಧನಾ ವಿದ್ಯಾರ್ಥಿಗಳು. ಕಲಾವತಿ ಒಮ್ಮುಖದ ಚರ್ಚೆಯನ್ನು ಮಾಡುತ್ತಿದ್ದರು. ಈ ಗುಣ ಅವರ ಸಂಶೋಧನೆಯಲ್ಲೂ ಬಳಕೆಯಾಯಿತು. ಇದು ಅವರ ಸಂಶೋಧನೆಯ ಮಿತಿಯೂ ಆಗಿತ್ತು. ಜಾಹೀರಾತಿನದು ನಿರಂತರ ಬದಲಾಗುವಂತಹ ಪಾದರಸದಂತ ಚಲನೆ. ಹೀಗೆ ತೀವ್ರ ಬದಲಾಗುವ ಸಂಗತಿಯ ಕುರಿತು ಸಂಶೋಧನೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿ. ಕಾರಣ ಒಂದು ಕಾಲದ ಜಾಹಿರಾತಿನ ಅಧ್ಯಯನದಿಂದ ಪಡೆದ ಪಲಿತ, ಇನ್ನೊಂದು ಕಾಲಕ್ಕಾಗಲೆ ಹಳತಾಗಿರುತ್ತದೆ. ಕೆಲವು ಮಿತಿಗಳ ಮಧ್ಯೆಯೂ ಕಲಾವತಿ ಅವರ ಸಂಶೋಧನೆ ಉಪಯುಕ್ತವಾಗಿದೆ. ಅವರ ಸಂಶೋಧನೆ ಪುಸ್ತಕ ರೂಪದಲ್ಲಿ ಬರುತ್ತಿರುವ ಈ ಹೊತ್ತಿನಲ್ಲಿ ಅವರಿಗೆ ಅಭಿನಂದನೆಗಳು. ಹಾಗೆಯೇ ಈ ಪುಸ್ತಕದ ಗಮನಸೆಳೆದ ಮೋಹನರಿಗೂ…
ishtu olleya pustaka ommukha charcheyannu hondiruva sadhyategalu kadime enisuttade.paadarasadante chalisuva jaaheeratugalu mahileyannu chitrisuva reeti matra ninta neere aagiruvudu angaihunninashutu satya mattu kolaku kuda.
kalavatiyavarige, mohanaravarige mattu arthapurna mukhaputakkagi, prashastigaagi sudhakar darbheyavarige haardika abhinandanegalu.
ಆಸಕ್ತಿದಾಯಕವಾದ ವಿಷಯವೇ. ಪುಸ್ತಕವನ್ನು ನನಗೂ ಓದಬೇಕೆನಿಸಿದೆ. ಜಾಹೀರಾತಿನಲ್ಲಿ ಮಹಿಳೆಯ ವಿಚಾರವಾಗಿ ಈವರೆಗಿನ ಚರ್ಚೆಗಳ ಮುಂದೆ ಇನ್ನೇನಿದೆ ಅಂತ ತಿಳಿಯಲು ನನಗೂ ಕಾತರ.
pustaka pratrikeyege dhanyvaadagalu.
hello madam. naanu mva 2nd year madthidini. “ಆಧುನಿಕ ಮಹಿಳೆ ಮತ್ತು ಜಾಹಿರಾತು” ee vishayada bagge barithidini. dayavittu nimma phone number kottare nimage call maduthene. plz help me mam.
and can u give me u r email address also plzz madam. plzzzzz.