ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರೀಗೌಡ ಬೀಚನಹಳ್ಳಿ ಅಧಿಕಾರ ಸ್ವೀಕಾರ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಅವರನ್ನು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ , ಅವರ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಡಾ. ಕರೀಗೌಡ ಬೀಚನಹಳ್ಳಿ ಅವರು ಮಾತನಾಡುತ್ತಾ , ಕಳೆದ ಮೂರು ವರ್ಷಗಳಿಂದ ಲೇಖಕರು ಮತ್ತು ಪ್ರಕಾಶಕರು ಸಾಲ ಮಾಡಿ ಪುಸ್ತಕ ಪ್ರಕಟಿಸಿ ಸಂಕಷ್ಟದಲ್ಲಿ ಇದ್ದಾರೆ. ಕಾರಣ ಪುಸ್ತಕ ಸಗಟು ಖರೀದಿ ಯೋಜನೆ ಮೂರು ವರ್ಷದಿಂದ ಸ್ಥಗಿತವಾಗಿದೆ. ಇದಕ್ಕೆ ಸರ್ಕಾರ ಆರ್ಥಿಕ ನೆರವು ಮತ್ತು ಗ್ರಂಥಾಲಯದವರು ಸಹಕಾರ ನೀಡಬೇಕೆಂದು ವಿನಂತಿ ಮಾಡಿಕೊಂಡರು.

ಸರ್ಕಾರದ ಈ ಗೌರವ ಸ್ಥಾನವನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದ ಅವರು , ಇದು ನನಗೆ ಒಂದು ಅವಕಾಶವೇ ಹೊರತು ಅಧಿಕಾರ ಅಲ್ಲ. ಇದು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಸಮಿತಿಯ ಸದಸ್ಯರು ಹಾಗೂ ಗ್ರಂಥಾಲಯ ಸಿಬ್ಬಂಧಿಗಳು ಸಾಮೂಹಿಕವಾಗಿ ಪರಸ್ಪರ ಪುಸ್ತಕ ಪ್ರೀತಿ ಮತ್ತು ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕಾದ ಹೊಣೆ ಇದೆ ಎಂದು ಹೇಳಿದರು

‍ಲೇಖಕರು avadhi

28 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading