ಕಬ್ಬನ್ ಪಾರ್ಕ್
ತ್ರಿಭುವನ್ ಜಿ
ಎರಡು ಸಾವಿರದ ಐದನೆಯ ವರ್ಷದಲ್ಲಿ ಪದವಿ ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆಗಷ್ಟೆ ಬಂದಿದ್ದ ನನಗೆ ಸ್ಥಳ ಪರಿಚಯ ಇರಲಿಲ್ಲವಾದರು ಕಬ್ಬನ್ ಪಾಕರ್್ನ ಗ್ರಂಥಾಲಯ ನನ್ನ ಅಚ್ಚುಮೆಚ್ಚನ ತಾಣವಾಗಿತ್ತು. ಕೆಲಸವಿಲ್ಲದ ಸಮಯದಲ್ಲಿ ಗ್ರಂಥಾಲಯಕ್ಕೆ ತೆರಳಿ ಅಲ್ಲಿ ಪೇಪರ್ ಓದುವುದು ಅಥವಾ ಪುಸ್ತಕ ಓದುವ ಅಭ್ಯಾಸವಿತ್ತು.
ಆಗಸ್ಟ್ ತಿಂಗಳ ಒಂದು ದಿನ ಒಂದು ಕಂಪೆನಿಯಲ್ಲಿ ಅಕೌಂಟೆಂಟ್ ಉದ್ದೆಗಾಗಿ ಸಂದರ್ಶನಕ್ಕೆ ಕರೆಯಲಾಗಿತ್ತು. ಮುಂಜಾನೆ 7.30 ಸುಮಾರಿಗೆ ಎದ್ದು ಸಂದರ್ಶನಕ್ಕೆ ಹೊರಟೆ. ಬೆಳಿಗ್ಗೆ 9.30 ರಿಂದ 10 ರ ವರೆಗೂ ಸಂದರ್ಶನ ನಡೆಯಿತು ಆದರೆ ಕೆಲಸ ಪಡೆಯವಲ್ಲಿ ವಿಫಲನಾಗಿದ್ದೆ. ಬೇಸರದಲ್ಲಿ ಕಂಪನಿಯಿಂದ ಹೊರ ಬಂದವನಿಗೆ ಎಲ್ಲಿ ಹೋಗುವುದೋ ತಿಳಿಯದೆ ಕಬ್ಬನ್ ಪಾಕರ್್ನತ್ತ ಹೆಜ್ಜೆ ಹಾಕಿದೆ.
ಸುಮಾರು 10.30 ರ ಸುಮಾರಿಗೆ ಕಬ್ಬನ್ ಪಾರ್ಕ್ ಬಳಿ ಬಂದೆ. ಆ ಸಮಯದಲ್ಲಿ ಅಷ್ಟೊಂದು ಜನ ಸಂಚಾರವಿರಲಿಲ್ಲ ಸುತ್ತಲೂ ಬಿದಿರು ಮತ್ತು ಕಾಡು ಮರಗಳು, ಚಿಲಿಪಿಲಿಗುಟ್ಟುವ ಪಕ್ಷಿಗಳ ಇಂಚರ ಮನಸಿಗೆ ಮುಧ ನೀಡುತಿತ್ತು. ಅಲ್ಲೊಂದು ಮರದ ಕೆಳಗೆ ಕುಳಿತುಕೊಳ್ಳಲು ಒಂದು ಬೆಂಚು ಹಾಕಲಾಗಿತ್ತು ಅಲ್ಲಿಯೆ ನಾನು ಕುಳಿತಿದ್ದೆ. ಸ್ವಲ್ಪ ಸಮಯದ ನಂತರ ಒಂದು ಯುವತಿ ಅಲ್ಲಿ ಬಂದು ನನ್ನ ಪಕ್ಕದಲ್ಲಿಯೇ ಕುಳಿತಳು. ಅವಳ ವಯಸ್ಸು ಸುಮಾರು ಇಪ್ಪತ್ತರಡರಿಂದ ಇಪ್ಪತೈದರ ಆಸುಪಾಸಿರಬಹುದು. ನೋಡಲು ಸುಂದರವಾಗಿದ್ದಳು ಸಣಕಲು ದೇಹ, ತೀಕ್ಷ್ಣವಾದ ಕಣ್ಣು, ಸ್ವಲ್ಪ ಗುಂಗುರಾದ ಕೂದಲು, ಹಣೆಯಲ್ಲಿ ಕುಂಕುಮ, ಹಸಿರು ಸೀರೆ ಮತ್ತು ಕಂದು ಬಣ್ಣದ ಸ್ವೆಟರ್ ದರಿಸಿದ್ದಳು. ಅವಳ ಹಿಂದೆ ಅನೇಕರು ಇಂಬಾಲಿಸಿ ಬಂದು ಸ್ವಲ್ಪ ದೂರ ನಿಂತು ನಮ್ಮತ್ತಲ್ಲೇ ನೋಡುತಿದ್ದರು. ನನಗೆ ಅವಳ ಸನಿಹ ಕುಳಿತುಕೊಳ್ಳಲು ಮುಜುಗರವೆನಿಸುತಿತ್ತು ಆದರೂ ಅಲ್ಲಿಯೇ ಕುಳಿತೆ.
ಸ್ವಲ್ಪ ಸಮಯದ ನಂತರ ಅವಳೆ ಮಾತು ಆರಂಭಿಸಿದಳು, ಸಂಭಾಷಣೆ ನಡೆದದ್ದು ಹೀಗೆ :-
ಅವಳು : ನೀವು ಯಾವ ಊರು?
ನಾನು : ನನ್ನ ಪರಿಚಯ ಹೇಳಿಕೊಂಡೆ
ಅವಳು : ಇಲ್ಲಿ ಎಲ್ಲಿ ಇರೋದು?
ನಾನು : ವಿಜಯನಗರ
ಅವಳು : ಏನ್ ಕೆಲ್ಸ ಮಾಡ್ತೀರೋದು?
ನಾನು ; ಕೆಲಸಕ್ಕಾಗಿ ಪ್ರಯ ತ್ನ ಮಾಡ್ತಾ ಇದ್ದೀನಿ
ಅವಳು ; ಸಿನಿಮಾ ಹೋಗೋಣ ಬರ್ತೀರಾ?
ನನಗೆ ಏನು ಹೇಳಬೇಕೋ ತಿಳಿಯಲಿಲ್ಲ ಅವಳ ಜೊತೆ ಮಾತಾಡಲು ಮುಜುಗರವೆನಿಸುತಿತ್ತು ಆದರೂ ಸಂಭಾಷಣೆ ಮುಂದುವರಿಸಿದೆ
ನಾನು ; ಇಲ್ಲ. ನನಗೆ ಸಿನಿಮಾ ನೋಡೋದು ಇಷ್ಟ ಆಗಲ್ಲ
ಅವಳು : ನನಗೆ 200 ಕೊಡಿ ಮತ್ತೆ ಟಿಕೆಟ್ ತಗೋಳ್ಳಿ ಅಷ್ಟೆ ಸಾಕು ಜಾಸ್ತಿ ಕೇಳಲ್ಲ
ನಾನು ; ನನಗೆ ಈ ರೀತಿ ಅಭ್ಯಾಸ ಇಲ್ಲ ಬೇಕಿದ್ರೆ ಇಲ್ಲೇ ತುಂಬಾ ಜನ ಇದ್ದಾರೆ ಅವರ ಜೊತೆ ಹೋಗಿ
ಅವಳು : ನನಗೆ ಅವರನ್ನೆಲ್ಲ ನೋಡಿದ್ರೆ ಭಯ ಆಗುತ್ತೆ ನೀವು ಒಳ್ಳೆಯವರ ಹಾಗೆ ಕಾಣ್ಸ್ತೀರ ಅದಕ್ಕೆ ನಿಮ್ಮ ಹತ್ತಿರ ಬಂದೆ
ನಾನು : ನೀವು ಭಯದಲ್ಲಿ ಈ ಕೆಲ್ಸ ಮಾಡೋದು ಯಾಕೆ? ನಿಮಗೆ ಮದ್ವೆ, ಆಗಿಲ್ವಾ ಗಂಡನ ಜೊತೆ ಸುಖವಾಗಿ ಇರೋದು ಬಿಟ್ಟು ಈ ದಾರಿ ಯಾಕೆ ಬೇಕು?
ಅವಳು ಅವಳ ಕಥೆ ಪ್ರಾರಂಬಿಸಿದಳು..
ಅವಳ ಹೆಸರು ಅನಿತ ಮೂಲತಹ ಕೋಲಾರದವಳು. ತಮಿಳು ಜನಾಂಗಕ್ಕೆ ಸೇರಿದವಳಾಗಿದ್ದರೂ ಕನ್ನಡ ಸ್ಪಷ್ಟವಾಗಿ ಮಾತನಾಡುತಿದ್ದಳು. ಚಿಕ್ಕಂದಿನಲ್ಲೇ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದರು. ಅವರ ಸಂಬಂದಿಕರೊಬ್ಬರು ಅವಳನ್ನು ತಮ್ಮ ಮನೆಯಲ್ಲೇ ಬೆಳೆಸಿದ್ದರು. 16 ನೇ ವರ್ಷಕ್ಕೆ ಅವಳಿಗೆ ಮದುವೆ ಮಾಡಲಾಗಿತ್ತು. ಮದುವೆಯ ನಂತರ ಕೋಲಾರದಲ್ಲಿ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟವಾಗಿ ಬೆಂಗಳೂರಿಗೆ ವಲಸೆ ಬಂದಿದ್ದರು. ಆಷ್ಟೀನ್ ಟೌನ್ನ ಒಂದು ಶಾಲೆಯಲ್ಲಿ ಅವರಿಗೆ ಆಶ್ರಯ ನೀಡಿಲಾಗಿತ್ತು. ಅವಳ ಗಂಡ ಸೆಕ್ಯೂರಿಟಿ ಕೆಲಸ ಮಾಡುತಿದ್ದ ಅವಳಿಗೆ ಮೂರು ವರ್ಷದ ಒಂದು ಗಂಡು ಮಗು ಇತ್ತು.
ಆರಂಭದಲ್ಲಿ ಅವಳ ಸಂಸಾರ ಸುಖವಾಗೇ ಸಾಗುತಿತ್ತು ಆದರೆ ನಂತರ ಅವಳ ಗಂಡ ಕುಡಿತಕ್ಕೆ ದಾಸನಾಗಿ ಹೋಗಿದ್ದ ಹೆಂಡತಿಗೆ ಮನ ಬಂದಂತೆ ತಳಿಸುತ್ತಿದ್ದ. ಅನಿತ ಶಾಲೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಹೋಗುತ್ತಿದ್ದಳು. ತಿಂಗಳಿಗೆ 1500 ರೂ ಸಿಗುತಿತ್ತು. ಗಂಡ ಇದೆ ನೆಪವಾಗಿಸಿ ಕೆಲಸ ಬಿಟ್ಟಿದ್ದ. ಕುಡಿಯಲು ಹಣ ಇಲ್ಲವಾದಾಗ ತನ್ನ ಸ್ನೇಹಿತರನ್ನು ಕರೆತಂದು ಅನಿತಾಳನ್ನ ಅವರ ಬಳಿ ಮಲಗಲು ಹೇಳಿ ಅವರ ಬಳಿ ಹಣ ಪಡೆಯುತ್ತಿದ್ದ. ಅನಿತ ಪ್ರತಿಭಟಿಸುವಂತಿರಲಿಲ್ಲ ತಪ್ಪಿದರೆ ಅವಳಿಗೆ ಮನ ಬಂದಂತೆ ತಳಿಸಿ ಮಗು ಮತ್ತು ಅವಳು ಇಬ್ಬರನ್ನೂ ಕೊಲ್ಲುವುದಾಗಿ ಎದರಿಸುತ್ತಿದ್ದ. ನೊಂದು ಜರ್ಜರಿತಳಾದ ಅನಿತ ಒಂದು ನಿರ್ಧಾರಕ್ಕೆ ಬಂದಿದ್ದಿಳು ಹೇಗಿದ್ದರೂ ಅವಳ ಜೀವನ ಮುಗಿದು ಹೋದ ಕತೆ ಆದರೆ ಅವಳ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಿ ಅವನ ಜೀವನ ರೂಪಿಸಬೇಕಿತ್ತು. ಆ ಕಾರಣಕ್ಕಾಗಿ ಅವಳಿಗೆ ಹಣದ ಅವಶ್ಯಕತೆ ಇತ್ತು ಅದಕ್ಕಾಗಿ ಅವಳು ಆರಿಸಿಕೊಂಡ ದಾರಿಯೇ ಕಬ್ಬನ್ ಪಾರ್ಕ್.
ಅದು ಅವಳು ಪಾರ್ಕ್ ಗೆ ಬಂದ ಎರಡನೇ ದಿನವಾಗಿತ್ತು, ಮೊದಲನೆ ದಿನ ಅವಳು 500 ರೂ ಗಳಿಸಿದ್ದಳು, ಆ ದಿನ ಇನ್ನು ಹೆಚ್ಚಿನ ಗಳಿಸುವ ಬರವಸೆಯಲ್ಲಿದ್ದಳು,
ಪಾರ್ಕ್ ನನ ಇನ್ನೊಂದು ಮೂಲೆಯತ್ತ ಕೈ ತೋರಿಸಿದಳು ಅನಿತ. ಅಲ್ಲಿ ಇಬ್ಬರು ವಯಸ್ಸಾದ ಹೆಂಗಸರು ಮತ್ತು 5 ಜನ ಗಂಡಸರು ನಿಂತು ಗಿರಾಕಿಗಳಿಗೆ ಬಲೆ ಬೀಸುತ್ತಿದ್ದರು. ಹೆಂಗಸರು ಗಿರಾಕಿಗಳೊಡನೆ ಬಿದರಿನ ಮರೆಗೆ ಕರೆದೊಯ್ಯುವಲ್ಲಿ ನಿರತರಾಗಿದ್ದರೆ ಗಂಡಸರು ಬೆರೆಯವರು ಅಲ್ಲಿ ಹೋಗದಂತೆ ತಡೆಯವಲ್ಲಿ ಮತ್ತು ಪೋಲಿಸರ ಆಗಮನದ ಸುಳಿವು ನೀಡುವುದರಲ್ಲಿ ನಿರತರಾಗಿದ್ದರು. ಮೊದಲನೆಯ ದಿನ ಆ ಗುಂಪಿನ ಒಂದು ಹೆಂಗಸು ಅನಿತಾಳಿಗೆ ಅವರೊಡನೆ ಸೇರಲು ಆಹ್ವಾನ ನೀಡಿದ್ದಳು ಆದರೆ ಅನಿತ ಭಯದ ಕಾರಣ ಅವರೊಡನೆ ಹೋಗಲು ನಿರಾಕರಿಸಿದ್ದಳು.
ಅಂದು ಅನಿತಾಳ ಕತೆ ಕೇಳಿ ಮನ ಕಲಕಿತು ಅವಳಿಗೆ ನನ್ನ ಬಳಿ ಇದ್ದ ಸ್ವಲ್ಪ ಹಣ ನೀಡಿ ಹೊರಡಲು ಅನುವಾದೆ. ಅವಳಿಗೆ ಏನನ್ನಿಸಿತೋ ಗೊತ್ತಿಲ್ಲ ಅವಳು ತನ್ನನ್ನು ಬಸ್ ನಿಲ್ದಾಣದವರಿಗು ಜೊತೆಯಲ್ಲಿ ಬರಲು ಕೇಳಿಕೊಂಡಳು. ನಾನು ಅವಳನ್ನು ಬಸ್ ನಿಲ್ದಾಣದ ವರೆಗೂ ಜೊತೆಯಲ್ಲಿ ಹೋಗಿ ಬಸ್ ಅತ್ತಿಸಿ ನಿಟ್ಟುಸಿರು ಬಿಟ್ಟು ಮನೆಯತ್ತ ಹೊರಟೆ.
ದಿನ ಕಳೆದಂತೆ ನಾನು ಆ ಘಟನೆ ಮರೆತಿದೆ.್ದ ಸುಮಾರು ಒಂದು ಒಂದೂವರೆ ತಿಂಗಳಿರಬಹುದು ಒಮ್ಮೆ ಗ್ರಂಥಾಲಯಕ್ಕೆ ಹೋಗಿದ್ದಾಗ ಅನಿತಾಳನ್ನು ನೋಡಬೇಕಾಗಿ ಬಂತು. ಮೊದಲ ದಿನ ಅವಳು ನನಗೆ ತೋರಿಸಿದ ಆ ಗುಂಪಿನ ಸದಸ್ಯರಲ್ಲಿ ಅನಿತಾ ಕೂಡ ಒಬ್ಬಳಾಗಿದ್ದಳು. ಬೆಳಗ್ಗೆ 11 ರಿಂದ ಸಂಜೆ 3 ಗಂಟೆಯವರೆಗೆ ಯಾವ ಸಮಯದಲ್ಲಾದರೂ ಅವಳನ್ನು ಅಲ್ಲಿ ನೋಡಬಹುದಿತ್ತು. ಅವಳು ನನ್ನೊಡನೆ ಆತ್ಮೀಯತೆಯಿಂದ ಮಾತನಾಡುತ್ತಿದ್ದಳು ಆದರೆ ನನಗೆ ಏನೋ ಮುಜುಗರವಾಗುತ್ತಿತ್ತು ಕೆಲವೊಮ್ಮೆ ಅವಳನ್ನು ನೋಡಿದರೂ ನೋಡದ ಹಾಗೆ ಹೋಗಿಬಿಡುತ್ತಿದ್ದೆ.
ಹಾಗೆ ಸುಮಾರು ಐದು ವರ್ಷ ಕಳೆಯುವುಷ್ಟರಲ್ಲಿ ಅವಳ ಗಂಡ ತೀರಿಕೊಂಡಿದ್ದ ಅವಳೂ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಗೊಮ್ಮೆ ಈಗೊಮ್ಮೆ ಕಬ್ಬನ್ ಪಾಕರ್್ನತ್ತ ಬರುತ್ತಿದ್ದಳಾದರೂ ಮೊದಲಿನ ಹಾಗೆ ಗಿರಾಕಿಗಳು ಅವಳ ಬಳಿ ಸುಳಿಯುತ್ತಿರಲಿಲ್ಲ ಹೀಗಾಗಿ ಅವಳು ಆ ಗುಂಪಿನಿಂದ ಹೊರ ಬಿದ್ದಿದ್ದಳು. ಒಂದು ತುತ್ತಿನ ಊಟ ಒಂದಿಸುವುದು ಅವಳಿಗೆ ಅಸಾದ್ಯವಾಗಿತ್ತು ಕೊನೆಗೆ ಬಿಕ್ಷುಕಿಯಾಗಿ ಅದೇ ಪಾರ್ಕ್ ನಲ್ಲಿ ಹಣಕ್ಕಾಗಿ ಅಲ್ಲಿ ಬರುವವರ ಅಂಗಲಾಚುತ್ತಿದ್ದದನ್ನು ಕಣ್ಣಾರೆ ಕಂಡಿದ್ದೆ.
ಒಂದೆರಡು ವರ್ಷಗಳಿಂದ ಕಬ್ಬನ್ ಪಾರ್ಕ್ ಬಳಿ ನಾನು ಹೊಗಿರಲಿಲ್ಲ ಆದರೆ ಒಂದೆರಡು ವಾರಗಳ ಹಿಂದೆ ಗ್ರಂಥಾಲಯದಲ್ಲಿ ನನಗೆ ಸ್ವಲ್ಪ ಕೆಲಸವಿದ್ದರಿಂದ ಅಲ್ಲಿಗೆ ಹೋಗಬೇಕಾಗಿ ಬಂತು. ಅನಿತಾಳ ನೆನಪಾಗಿ ಸುತ್ತ ಕಣ್ಣಾಡಿಸಿದೆ ಆದರೆ ಅಲ್ಲಿ ಅವಳ ಸುಳಿವಿರಲಿಲ್ಲ. ಅಲ್ಲೇ ಅವಳಿಗೆ ಪರಿಚಯವಿದ್ದ ಆ ಗುಂಪಿನ ಒಬ್ಬ ವ್ಯಕ್ತಿಯಲ್ಲಿ ಅವಳ ಬಗ್ಗೆ ವಿಚಾರಿಸಿದೆ. ಅವಳು ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ತೀರಿಕೊಂಡಿದ್ದಳು. ಅವಳ ಮಗನನ್ನು ಒಂದು ಅನಾಥಾಲಯದಲ್ಲಿ ಸೇರಿಸಲಾಗಿತ್ತು. ಅನಿತಾ ಕಬ್ಬನ್ ಪಾಕರ್್ನಲ್ಲಿ ಕಾಲಿರಿಸಿದ ದಿನದಿಂದ ಇಂದನವರೆಗೂ ಎಲ್ಲವನ್ನು ಕಣ್ಣಾರೆ ನೋಡಿ ಅಸಾಹಯಕತೆಯಿಂದ ಇದ್ದ ನನಗೆ ಇಂದು ನನ್ನವರನ್ನೇ ಕಳೆದುಕೋಂಡ ಅನುಭವವಾಗಿತ್ತು. ಹೇಳಿಕೊಳ್ಳಲಾಗದ ನೋವಿನೊಂದಿಗೆ ಮನೆಯ ದಾರಿ ಹಿಡಿದೆ.






0 Comments