ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ?

ಸುರೇಶ ಕಂಜರ್ಪಣೆ

ಇಂದು ಕಂಡದ್ದು

ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ?
ಮುತ್ತಿಕ್ಕಿದ ಹೆಣ್ಣು ಮಕ್ಕಳಿದ್ದೀರಾ?
ಮದುವೆ ಮಾಡಿಸುವುದಿದೆ, ಕಪ್ಪೆಗೆ
ಆದರೂ ಅದಕ್ಕೇನು ಬೇಕು ಕೇಳಿದ್ದೇವಾ?
ನೀರು, ಜೌಗು,ಕಾನು, ಗದ್ದೆ..
ಎಂಥ ರಮಣೀಯ..! ಸೆಲ್ಫಿಗೊಂದು ಹಿನ್ನೆಲೆ
ಕಪ್ಪೆಗೋ ಅದುವೇ ಜೀವತಾಣ
ಇದೆಲ್ಲಾ ಕಪ್ಪೆಯೇ ಹೇಳಿದ್ದು
ಬೆಳ್ಳಂಬೆಳಿಗ್ಗೆ ಕನ್ನಡಿಯ ಅಪ್ಪಿ ಕೂತಿತ್ತು ; ಎಲ್ಲಿಂದ ಬಂತೋ,
ತನ್ನ ಮುಖವನ್ನೇ ನೋಡದೇ ಎಷ್ಟು
ಕಾಲವಾಗಿತ್ತೋ..
ಕಾಲವಾಗುವುದರ ಮೊದಲೊಮ್ಮೆ ಆದರ್ಶ.
ಬಾಚಣಿಗೆ ಕೊಟ್ಟೆ, ನಕ್ಕಿತು
ನೀನೊಮ್ಮೆ ನೋಡು ಎಂಬಂತೆ
ನಾನೀಗ ಕನ್ನಡಿ ನೋಡಿದರೆ
ಕಪ್ಪೆಯೇ ಕಾಣುತ್ತಿದೆ, ಜೊತೆಗೆ ಬತ್ತಿದ ಕೆರೆ, ಬರಡು ನೆಲ

‍ಲೇಖಕರು Avadhi GK

17 March, 2018

1 Comment

  1. Nasrin

    Very nice sir….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading