ಕನ್ನಯ್ಯ ಎಫೆಕ್ಟ್ : ಜೈಪುರ ಸಾಹಿತ್ಯೋತ್ಸವಕ್ಕೂ ಬಹಿಷ್ಕಾರದ ಬಿಸಿ

ಜೆ ಎನ್ ಯು ವಿವಾದಾದ ಬಿಸಿ ಈಗ ಜೈಪುರ ಸಾಹಿತ್ಯ ಉತ್ಸವಕ್ಕೆ ತಟ್ಟಿದೆ

ಬೆಂಗಳೂರು ಲಿಟೆರೆರಿ ಫೆಸ್ಟಿವಲ್ ಗೆ ತಟ್ಟಿದ ಬಿಸಿಯೇ ಈಗ ಜೈಪುರ್ ಲಿಟರರಿ ಫೆಸ್ಟಿವಲ್ ನ್ನೂ ಸುಡಲಿದೆ

jaipur lit festಕನ್ನಯ್ಯ ಕುಮಾರ್ ಬಂಧನಕ್ಕೆ ಕಾರಣವಾದದ್ದು ಟಿ ವಿ ಚಾನಲ್ ಗಳು ಪ್ರಸಾರ ಮಾಡಿದ ನಕಲಿ ವಿಡಿಯೋ ದೃಶ್ಯಗಳು, ವಿರೂಪಗೊಳಿಸಲಾದ ಸುದ್ದಿಗಳು

ಇದರಲ್ಲಿ ಜೀ ಚಾನಲ್ ಪಾತ್ರ ದೊಡ್ಡದು ಎಂದು ಕೂಗೆದ್ದಿದೆ .

ಜೈಪುರ ಸಾಹಿತ್ಯೋತ್ಸವದ ಪ್ರಧಾನ ಪ್ರಾಯೋಜಕರು ಜೀ ಚಾನಲ್. ಹಾಗಾಗಿ ಸಾಹಿತಿಗಳು ಜೀ ಚಾನಲ್ ನ್ನು ಉತ್ಸವದಿಂದ ಹೊರಗಿಡದಿದ್ದರೆ ನಮ್ಮ ಬಹಿಷ್ಕಾರ ಖಂಡಿತಾ ಎಂದು ಎಚ್ಚರಿಸಿದ್ದಾರೆ

ಈ ಬಗ್ಗೆ ಈಗಾಗಲೇ ಉತ್ಸವ ಸಂಘಟನಾ ಸಮಿತಿಗೆ ಪತ್ರ ಬರೆದಿದ್ದೇವೆ ಎಂದು ವೇಮುಲ ಪ್ರಕರಣದಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಹಿಂದಿರುಗಿಸಿದ ಸಾಹಿತಿ ಅಶೋಕ ವಾಜಪೇಯಿ ತಿಳಿಸಿದ್ದಾರೆ

ಜೀ ಚಾನಲ್ ಈ ಉತ್ಸವದ ಜೊತೆಗೆ ಕೈಗೂಡಿಸಿ ಇರುವವರೆಗೆ ನಾವು ಈ ಉತ್ಸವದಲ್ಲಿ ಭಾಗವಹಿಸುವ ಮಾತೆ ಇಲ್ಲ ಎಂದು ಖಯಾ ತ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಸಚ್ಚಿದಾನಂದನ್ ಹೇಳಿದ್ದಾರೆ

zeeಫ್ಯಾಸಿಸ್ಟ್ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಾ ಬರಹಗಾರರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಾ  ಇರುವ ಜೀ ಚಾನಲ್ ಜೊತೆ ಗುರುತಿಸಿಕೊಳ್ಳಲು ಹೇಗೆ ಸಾಧ್ಯ? ಎನ್ನುವುದು ಅವರ ಪ್ರಶ್ನೆ

ಜೀ ಚಾನಲ್ ನನ್ನನ್ನು ಮೊದಲಿನಿಂದಲೂ ತೇಜೋವಧೆ ಮಾಡುತ್ತಿದೆ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಯನ್ನು ವಿರೋಧಿಸಿ ನಾನು ಕೇಂದ್ರ ಸಾಹಿತ್ಯ ಅಕಾಡೆಮಿಗೂ ರಾಜಿನಾಮೆ ನೀಡಿದೆ. ಅಂದಿನಿಂದ ನನ್ನ ಮೇಲೆ ಹಾಗೂ ಸರ್ಕಾರದ ವಿರುಧ್ಧ ದನಿ ಎತ್ತುವ ಎಲ್ಲರ ಮೇಲೆ ಜೀ ಹರಿಹಾಯುತ್ತಿದೆ ಎಂದು ಸಚ್ಚಿದಾನಂದನ್ ಆರೋಪಿಸಿದ್ದಾರೆ

ಸಚ್ಚಿದಾನಂದನ್ ಪ್ರಕಾರ ಉತ್ಸವ ಬಹಿಷ್ಕರಿಸುವವರ ಪಟ್ಟಿ ದೊಡ್ಡದಿದೆ

 

 

‍ಲೇಖಕರು admin

March 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: