ಕನ್ನಡ ರಂಗಭೂಮಿಯ ‘ಇ.ಈ’ ಇನ್ನಿಲ್ಲ

ಕೆ ಎಸ್ ಡಿ ಎಲ್ ಚಂದ್ರು 

ಸಾವಿರ ಶಾಯರಿಗಳ ಸರದಾರ, ನಾಟಕಕಾರ ಇ.ಈ ಎಂದೇ ಖ್ಯಾತರಾದ ಇಟಗಿ ಈರಣ್ಣ ಇನ್ನಿಲ್ಲ.

ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ,ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈರಣ್ಣನವರದು.
ರೂಪಾಂತರದ ಹಿತೈಷಿಗಳಾದ ಈರಣ್ಣನವರ ಆತ್ಮೀಯತೆ, ಸಹೃದಯತೆ ಈಗ ಬರೀ ನೆನಪು.

ಅವರ ಯಹೂದೀ ಹುಡುಗಿ ‘ರೂಪಾಂತರ’ದ ಯಶಸ್ವಿ ನಾಟಕಗಳಲ್ಲಿ ಒಂದು. ಈ ನಾಟಕವನ್ನು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿಯರಿಗಾಗಿ ಮತ್ತು ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಸದಸ್ಯರಿಗಾಗಿ ನಿರ್ದೇಶನ ಮಾಡುವ ಪುಣ್ಯ ನನ್ನದಾಗಿತ್ತು.

ಕಳೆದರೆಡು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಈರಣ್ಣನವರ ಸಮಕ್ಷಮದಲ್ಲಿ ಯಹೂದಿ ಹುಡುಗಿ ನಾಟಕವನ್ನು ಪ್ರರ್ದಶಿಸಿದ್ದು ನನ್ನ ಅವರ ಕೊನೆಯ ಭೇಟಿ.

ಅವರ ‘ಕನ್ನಡ ಶಾಯರಿಗಳು’ ಪುಸ್ತಕವನ್ನು ರೂಪಾಂತರ ಪ್ರಕಟಿಸಲು ಅನುಮತಿ ನೀಡಿದ್ದ ಇಟಗಿ ಈರಣ್ಣನವರ ಮತ್ತು ರೂಪಾಂತರದ ಗೆಳೆಯರ ಬಾಂಧವ್ಯ ಚಿರಂತನವಾದದ್ದು. ಇಟಗಿ ಈರಣ್ಣನವರ ಅಗಲಿಕೆ ಕನ್ನಡ ಸಾಂಸ್ಕ್ರತಿಕ ಲೋಕಕ್ಕೆ ಮತ್ತು ರೂಪಾಂತರಕ್ಕೆ ಅಪಾರ ನಷ್ಟ

ಅವರ ಅಂತ್ಯಕ್ರಿಯೆಯನ್ನು ಇಂದು ಮಂಡ್ಲಿಯ ವೀರಶೈವ ರುದ್ರಭೂಮಿಯಲ್ಲಿ ಅಪರಾಹ್ನ ೦೩.೦೦ಕ್ಕೆ ನೆರವೇರಿಸಲಾಗುವುದು.

ಮನೆ ನ೦ ೩೧# ಶಾರದಾ ಸದನ
ಶಿವಪ್ಪನಾಯಕ ಬಡಾವಣೆ
ಬಿ ಬ್ಲಾಕ್ , ೧ ನೇ ಮುಖ್ಯ ರಸ್ತೆ ಆಲ್ಕೊಳ ರಸ್ತೆ
ಎ ಪಿ ಎಂ ಸಿ ಯಾರ್ಡ್ ಎದರುಗಡೆ ಶಿವಮೊಗ್ಗ

 

‍ಲೇಖಕರು avadhi

March 13, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    ಇದು ತುಂಬಲಾಗದ ಕೊರತೆ. ಹಿಂದಿ-ಉರ್ದು-ಕನ್ನಡಗಳ ನಡುವಿನ ಕೊಂಡಿಯಾಗಿದ್ದ ಶ್ರೀ ಇಟಗಿ ಈರಣ್ಣನವರು ಕಣ್ಮರೆ ಆದದ್ದು ಕನ್ನಡ ರಂಗಕ್ಕೆ ತುಂಬಲಾಗದ ಕಂದಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಮ್ಮೆ ಗುಲ್ಬರ್ಗಾದಲ್ಲಿ ಭೆಟ್ಟಿಯಾಗುವ ಅವಕಾಶ ದೊರೆತಿತ್ತು. ನಮ್ರ ಸಹೃದಯಿ.

    ಪ್ರತಿಕ್ರಿಯೆ
  2. R.shivs Kumar as want kurki

    ಕನ್ನಡ ಶಾಯಿರಿಯ ಹಿರಿಯ ಈರಣ್ಣ
    ಕನ್ನಡದಕ್ಕರದಿ ಇಟ್ಟಿಗೆಗಳ ಕಟ್ಟಿದ ಅಣ್ಣ

    ಕನ್ನಡಶಾಯಿಯ ಬಸಿದು ಶಾಯ್ರೀಲಿಟ್ಟ
    ಹೊತ್ತವಳ ಬಿಟ್ಟು ತಾ ಹೆತ್ತೊಡಲ ಹೊಕ್ಕ.

    ..‌..ಆರ್.ಶಿವಕುಮಾರಸ್ವಾಮಿ ಕುರ್ಕಿ
      ಮೊ.೮೯೭೦೮೪೮೨೨೧

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: