ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು ‘ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ’ ಎಂದಿದ್ದರಂತೆ.
‘ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’ ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಖಾಂಡೇಕರರು ತೇಜಸ್ವಿ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿದ್ದರು!

ಕನ್ನಡ ವಿಶ್ವವಿದ್ಯಾಲಯದಿಂದ ತೇಜಸ್ವಿಯವರಿಗೆ ನಾಡೋಜ ಪುರಸ್ಕಾರ ನೀಡಲು ವಿಶ್ವವಿದ್ಯಾಲಯದವರು ಸಂಪರ್ಕಿಸಿದಾಗ “ಕನ್ನಡ ತಂತ್ರಾಂಶ ಅಭಿವೃದ್ಧಿಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ” ಎಂದಿದ್ದರು.
"ಕನ್ನಡ ತಂತ್ರಾಂಶ ಅಭಿವೃದ್ಧಿ ಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ" – ಅಂದಿದ್ರು ಅವರು
ನಿಮಗೆ ಇವೂ ಇಷ್ಟವಾಗಬಹುದು…





ಹಾಗಾದರೆ ಈಗ ಕನ್ನಡ ವಿಶ್ವವಿದ್ಯಾಲಯವು ಅಣಿಗೊಳಿಸಿರುವ ಮೆದುಳ್ಜಾಣವು (software) ಮಂದಿಗಳಿಂದ ಬಳಸಲು ಹಿಂದೆಬಿದ್ದಿದೆಯಲ್ಲ. ತೇಜಸ್ವಿಯವರ ಅಬಿಮಾನಕ್ಕೆ ವಿಶ್ವವಿದ್ಯಾಲಯವು ಹಾಗೂ ಮಾರುತಿ ತಂತ್ರಾಂಶ ಅಬಿವೃದ್ದಿಗಾರರು ಮನ್ನಣೆ ನೀಡಲಿಲ್ಲವೆಂದು ಆಯಿತಲ್ಲವೆ? ತೇಜಸ್ವಿಯವರ ಹೆಸರಲ್ಲಿಯೇ braille ತಂತರಾಂಶವನ್ನು ಅಣಿಗೊಳಿಸಿದ್ದೂ ಆಯಿತು. ಅದನ್ನು ಪರೀಕ್ಶಿಸಿದ್ದೂ ಆಯಿತು. screenread ಜೊತೆ ಕೆಲಸಮಾಡಲು ಆಗುವುದಿಲ್ಲ. ಪ್ರತಿಕ್ರಿಯೆ ನೀಡಿದರೆ “ಸರ್ಕಾರ screenreader ಬಗ್ಗೆ ನಮಗೆ ಹೇಳಿರಲಿಲ್ಲ” ಎಂಬ ುಡಾಪೆಯ ಮಾತುಗಳನ್ನೂ ಕೇಳಬೇಕಾಯಿತು.
ಬರಹ software ಈಗಿರುವ ಕನ್ನಡದ ಎಲ್ಲಾ ತಂತ್ರಾಂಶಕ್ಕಿಂತಲೂ ಮೇಲುಮಟ್ಟದ್ದು ಅಂತ ನಾನು ಪುರಾವೆಗಳೊಂದಿಗೆ ಎಲ್ಲಿಯಾದರೂ ಹೇಳಬಲ್ಲೆ. ಅಶ್ಟರ ಮಟ್ಟಿಗೆ ನನ್ನ ಹಾಗಿರುವ ಸಮುದಾಯಕ್ಕೆ ಬೆಳಕಾಗಿದೆ ಈ ಬರಹ ತಂತ್ರಾಂಶ. ಸರ್ಕಾರ ದುಡ್ಡು ಕೊಟ್ಟು ಮತ್ತೊಂದು ತಂತ್ರಾಂಶವನ್ನು ಅಣಿಗೊಳಿಸುವ ಬದಲು ಬರಹ ಅಬಿವೃದ್ದಿ ಗೊಳಿಸುತ್ತಿರುವವರಿಗೆ ನೀಡಿ ಇನ್ನಶ್ಟು ಸವಲತ್ತುಗಳು ಈ ತಂತ್ರಾಂಶದಲ್ಲಿ ದೊರಕುವಂತೆ ಮಾಡಿದರೆ ತೇಜಸ್ವಿಯವರಿಗೆ ನಾವೆಲ್ಲರು ನಾಡೋಜ ನೀಡಿದಂತೆಯೇ ಆಗುತ್ತದೆ.
tejsvi avru indina kavigalige madariyagli