ವಿಭಾ ಪುರೋಹಿತ
ನುಡಿಯೊಳಗೆ ಕನ್ನಡಿಯಿರಿಸಿದ್ದಾನೆ
ಲೋಕಾರೂಢಿಯಾಗಿ ಮಾತಾಡಿದರೂ
ನುಡಿಯಗಡಿಯನು ದಾಟಿ
ಒಳಗಿಳಿಯುತ್ತಾನೆ ಗುಡಿಸೇರುತ್ತಾನೆ
ಸ್ವಯಂಜಾತ ಆತ್ಮಾನುಸಂಧಾನ
ಪದ ಪದದ ಆರ್ಧ
ಮಂದ್ರವಾಗಿ ತನ್ನದಾಗಿಸಿಕೊಂಡು
ಅರ್ಥೈಸಿಕೊಳ್ಳುತ್ತಾನೆ
ಕ್ಷುದ್ರ ವಾಂಛೆ
ರೂಕ್ಷ ಲಾಂಛೆಗಳು
ಅವಗನ್ವಯಿಸುವುದಿಲ್ಲ
ಕಣ್ಣಕುಲಕದೇಯೂ
ನುಡಿಯೊಳಗೆ ನುಗ್ಗಿ
ವಾಚಾಳಿಯಾಗದೇ
ಮೌನವಾಗ್ಮಿಯಾಗುತ್ತಾನೆ
ಝಗ್ಗನೆ ನನ್ಮುಂದೆ ಪಡಿಮೂಡುತ್ತಾನೆ
ಆಡಿರದ ಆಣೆಗಳ
ಪರದೆ ಹರಿದು
ಧ್ವನಿಯಾಗುತ್ತಾನೆ
ಅಣಿಅಣಿ ಮುತ್ತುಪೋಣಿಸುತ್ತಾನೆ
ನನ್ನಿಚ್ಛೆಗಳಿಗೆಲ್ಲ ಅಸ್ತು ಅಸ್ತು
0 ಪ್ರತಿಕ್ರಿಯೆಗಳು