'ಕಣ್ಗಳು ಕಲ್ಪನೆಗಳಲ್ಲೇ ಹೂತಿವೆ, ಅವನಿಲ್ಲ ಎದುರಲಿ' – ದಿವ್ಯ ಅಂಜನಪ್ಪ

ಅವನಿಲ್ಲ


ದಿವ್ಯ ಅಂಜನಪ್ಪ

ನನಗೂ ಗೊತ್ತಿದೆ,
ನನ್ನದು ಉಸಿರುಗಟ್ಟಿಸೋ ಪ್ರೀತಿಯೆಂದು
ನನ್ನ ಪ್ರೀತಿಯ ಮುದ್ದಿಗೆ
ಚಿಕ್ಕ ಮಕ್ಕಳಾಗಿದ್ದರೆ
ಓ ಎಂದು ಅಳುತ್ತಿದ್ದವು !
ಇವನೋ
ಓಹೋ! ಎಂದು ಮರೆಯಾದ
ಕಣ್ಮರೆಯಾದ,
ನಾನಲ್ಲದ ನನ್ನವೇ ಕೆಲ ಸಂಭ್ರಮಗಳಿಗೆ
ಸುಮ್ಮನೆ ಬೆರಗಾಗಿ

ಅನಿಸತೊಡಗಿದೆ ನನಗೀಗ
ನೋವುಗಳನು ಮುಚ್ಚಿಡುವುದೂ ತಪ್ಪೇ
ಸುಳ್ಳೇ ಸಂಭ್ರಮಗಳಡಿಗಳಲಿ
ಅವ ಹೊರಟ ಸುಳಿವಿತ್ತು
ಬೇಸರಕೆ ನಾನೇ ಬಂಧ ಸಡಿಲಿಸಿದೆನೋ
ಅವನೇ ಜಗ್ಗಿ ಬಿಸುಟುಕೊಂಡನೋ
ಕಣ್ಗಳು ಕಲ್ಪನೆಗಳಲ್ಲೇ ಹೂತಿವೆ,
ಅವನಿಲ್ಲ ಎದುರಲಿ,
 

‍ಲೇಖಕರು avadhi

June 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: