ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಕನ್ನಡ ಸಾಂಸ್ಕೃತಿಕ ಸಂಘವು ಪ್ರಕಟಿಸುತ್ತಿರುವ ಕಣಾದ ವಾರ್ಷಿಕ ವಿeನ ಪತ್ರಿಕೆಯ ೩೭ನೆಯ ಸಂಚಿಕೆಗಾಗಿ ಕನ್ನಡ ವಿeನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಕಾಲೇಜು-ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಈ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಆಯ್ಕೆಯಾಗುವ ಲೇಖನಗಳಿಗೆ ಕ್ರಮವಾಗಿ ೫೦೦ ಮತ್ತು ೩೦೦ ರೂಪಾಯಿಗಳ ಬಹುಮಾನಗಳಿವೆ.
ಬಹುಮಾನವನ್ನು ಪಡೆದ ಲೇಖನಗಳನ್ನೂ ಮತ್ತು ಮೆಚ್ಚುಗೆ ಪಡೆದ ಇತರ ಲೇಖನಗಳನ್ನೂ ಕಣಾದದ ೩೭ನೆಯ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬಹುಮಾನಿತ ಲೇಖಕರಿಗೆ ನಮ್ಮ ಪ್ರಯೋಗ ಶಾಲೆಗಳಲ್ಲಿ ರಾಜ್ಯೋತ್ಸವವನ್ನು ಆಚರಿಸುವ ದಿನಾಂಕದಂದು ಬಹುಮಾನಗಳನ್ನು ವಿತರಿಸಲಾಗುವುದು.
ಸ್ಪರ್ಧೆಗೆ ಲೇಖನಗಳನ್ನು ಕಳುಹಿಸುವ ಅಂತಿಮ ದಿನಾಂಕ ೧೫.೦೮.೨೦೧೧
ಲೇಖನಗಳನ್ನು ಕಳುಹಿಸಲು ಮತ್ತು ಇತರ ವಿವರಗಳಿಗಾಗಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ:
ಶ್ರೀ ಎಚ್. ವಿ. ರಾಮಚಂದ್ರ, ವಿeನಿ,
ಆಧುನಿಕ ಸಂಘಟಿತ ಪದಾರ್ಥ ವಿಭಾಗ
ಸಂಪಾದಕರು, ಕಣಾದ
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು
ಅಂಚೆಪೆಟ್ಟಿಗೆ ೧೭೭೯, ಬೆಂಗಳೂರು – ೫೬೦ ೦೧೭
ದೂರವಾಣಿ – ೦೮೦ – ೨೫೦೮೬೪೨೨ / ೬೩೨೬ ೯೪೮೦೦೩೭೪೪೦ ವಿ-ಅಂಚೆ: hvಡಿ₨ಟಿಚಿಟ.ಡಿes.iಟಿ
ಸ್ಪರ್ಧೆಯ ನಿಯಮಗಳು
೧. ಲೇಖನವು ಕನ್ನಡದಲ್ಲಿದ್ದು, ಸಾಮಾನ್ಯ ಓದುಗರನ್ನು ಉದ್ದೇಶಿಸಿರಬೇಕು.
೨. ಲೇಖನವು ೨೦೦೦ ದಿಂದ ೩೦೦೦ ಪದಗಳನ್ನು ಮೀರಿರ ಬಾರದು.
೩. ಸೂಕ್ತವಾದ ಚಿತ್ರ ಮತ್ತು ನಕ್ಷೆಗಳನ್ನು ಬಳಸಬಹುದು.
೪. ಕಾಗದದ ಒಂದೇ ಮಗ್ಗುಲಲ್ಲಿ ಇರುವ ಕೈಬರಹದ, ಅಥವಾ ಬೆರಳಚ್ಚಿಸಿದ ಲೇಖನಗಳನ್ನು ಸಂಪಾದಕರ ವಿಳಾಸಕ್ಕೆ ಕಳುಹಿಸಬೇಕು.
೫. ಗಣಕದಲ್ಲಿ ಕನ್ನಡದ ‘ನುಡಿ‘ ತಂತ್ರಾಂಶವನ್ನು ಬಳಸಿ ಕೀಲಿಸಿದ ಲೇಖನದ ಕಡತವನ್ನು ಸಿ.ಡಿ. ಅಥವಾ ವಿದ್ಯುನ್ಮಾನ ಅಂಚೆ (ಇ-ಮೇಲ್) ಮೂಲಕ ಕಳುಹಿಸಿದರೆ ಉತ್ತಮ.
೬. “ನುಡಿ” ತಂತ್ರಾಂಶವನ್ನು ತಿತಿತಿ.ಞಚಿgಚಿಠಿಚಿ.iಟಿ ನಿಂದ ಡೌನ್‌ಲೋಡ್ ಮಾಡಿ ಅಥವಾ ವಿವರವನ್ನು ಞಚಿgಚಿಠಿಚಿ₨gmಚಿiಟ.ಛಿom <mಚಿiಟಣo:ಞಚಿgಚಿಠಿಚಿ₨gmಚಿiಟ.ಛಿom> ಇವರಿಗೆ ವಿ-ಅಂಚೆ ಕಳುಹಿಸಿ ಪಡೆಯಬಹುದು.
೭. ಈಗಾಗಲೇ ಪ್ರಕಟವಾದ ಅಥವಾ ಭಾಷಾಂತರಗೊಂಡ ಲೇಖನಗಳನ್ನು ಕಳುಹಿಸಬಾರದು. ವಿವಿಧ ಮೂಲಗಳಿಂದ ವಿಷಯ ಸಾಮಗ್ರಿಗಳನ್ನು ಆಯ್ದುಕೊಂಡಿದ್ದರೆ, ಅದನ್ನು ಗ್ರಂಥಋಣದಲ್ಲಿ ಸೂಚಿಸಿರಬೇಕು.
೮. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ ಮುಖ್ಯಸ್ಥರಿಂದ ಪಡೆದ ವಿದ್ಯಾರ್ಥಿ ಪ್ರಮಾಣಪತ್ರವನ್ನು ಕಳುಹಿಸಬೇಕು.
೯. ಬಹುಮಾನಿತ ಲೇಖನಗಳ ಹಕ್ಕನ್ನು ಕನ್ನಡ ಸಂಘವು ಕಾಯ್ದಿರಿಸಿಕೊಂಡಿದೆ.
೧೦. ಲೇಖನಗಳನ್ನು ಹಿಂದಿರುಗಿಸಲಾಗುವುದಿಲ್ಲ.
ವಿeನ ಮತ್ತು ತಂತ್ರeನದ ಯಾವುದಾದರೂ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳು, ಅಭಿವೃದ್ಧಿ ಹಾಗೂ ಸಮಸ್ಯೆಗಳಲ್ಲಿ ತಮಗೆ ಸೂಕ್ತವಾದ ಒಂದು ವಿಷಯವನ್ನು ಆಯ್ಕೆಮಾಡಿ ಅದನ್ನು ಕುರಿತು ಲೇಖನವನ್ನು ಬರೆಯಬೇಕು. ಚಿಕ್ಕ, ಚೊಕ್ಕ ಹಾಗೂ ವಿಶ್ಲೇಷಣಾತ್ಮಕ ಲೇಖನಗಳನ್ನು ನಿರೀಕ್ಷಿಸಲಾಗಿದೆ.






ಇಷ್ಟು ಕಡಿಮೆ ದುಡ್ಡಿಗೆಲ್ಲ ಈಗ ಹುಡುಗರು ಬರೆಯಲು ಬರೆಯಲು ಮುಂದಾಗುವುದಿಲ್ಲ.ಕಲ್ ರಾಶಿ ಬದ್ಲಾಗಿದೆ ಸ್ವಾಮಿ !